Advertisement

ಜೀತ ಪದ್ಧತಿ ನಿರ್ಮೂಲನೆಗೆ ಸಹಕಾರ ಅಗತ್ಯ

12:17 PM Feb 10, 2022 | Team Udayavani |

ಕಾಳಗಿ: ಬ್ರಿಟಿಷರ ಆಡಳಿತದಿಂದ ಆರಂಭವಾಗಿದ್ದ ಜೀತದಾಳು ಪದ್ಧತಿ ನಿರ್ಮೂಲನೆಗೆ ಸರ್ಕಾರ 1976ರಲ್ಲಿ ಕಾಯ್ದೆ ಜಾರಿಗೊಳಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನ್ಯಾಯವಾದಿ ಸುನೀಲಕುಮಾರ ವಂಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕೋರವಾರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ “ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್‌.ಬಿ. ಪಾಟೀಲ ಮಾತನಾಡಿ, ಜೀತದಾಳುಗಳನ್ನು ಸಾಲಮುಕ್ತ ಮಾಡಿ, ಅವರಿಗೆ ಸೌಲಭ್ಯ ಒದಗಿಸಲು ಕಾಯ್ದೆ-ಕಾನೂನುಗಳಲ್ಲಿ ಅವಕಾಶವಿದೆ. ಜೀತ ವಿಮುಕ್ತಿ ಹೊಂದಿದವರಿಗೆ ದೊರೆಯುವ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಬಳಗದ ಸದಸ್ಯ ಸಿದ್ಧರಾಮ ತಳವಾರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶೋಕ ಮಿಸ್ಕಿನ್‌, ಮುಖ್ಯ ಶಿಕ್ಷಕಿ ಮಹಾಂತೇಶ್ವರಿ ಕಟ್ಟಿಮನಿ, ಜೈ ಶ್ರೀದೇವಿ ರೆಡ್ಡಿ, ಬಸವಾಂಬಿಕಾ ತಾಂಬೋಳೆ, ರಾಜಶ್ರೀ ರೇವಣಕರ್‌, ಅಣ್ಣಪ್ಪ ಕಡಬೂರ್‌, ಬಾಬುರಾಯ ಮಹಾಜನ್‌, ಸಾಲಮೋನ್‌, ಬೇಬಿನಂದಾ ರೆಡ್ಡಿ, ಅಶೋಕಕುಮಾರ, ಆಫ್ರೀನ್‌ ಬೇಗಂ, ಪ್ರೌಢಶಾಲೆ ಸಹ ಶಿಕ್ಷಕರಾದ ನಾಗಪ್ಪ ದೊಡ್ಡಮನಿ, ಅರುಂಧತಿ ನಾಗಶೆಟ್ಟಿ, ಜಯಶ್ರೀ, ಲೀಲಾವತಿ ಕುಲಕರ್ಣಿ, ನೀಲಕಂಠ ಸಿಂಧೆ, ಗುರುನಾಥ ಜಾಧವ, ಆಶ್ರಾಸರೀನ್‌, ವಿಜಯಕುಮಾರ ಶರಗಾರ ಹಾಗೂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next