Advertisement

“ಬೊರಿವಲಿ ಶಿಕ್ಷಣ ಯೋಜನೆ ಯಶಸ್ಸಿಗೆ ಸಹಕಾರ ಅಗತ್ಯ”

04:52 PM Feb 14, 2021 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ 2021-2023ನೇ ಕಾರ್ಯಾವಧಿಯ, 30ನೇ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಗೊಂಡಿರುವ ಚಂದ್ರಹಾಸ ಕೆ. ಶೆಟ್ಟಿ ಅವರು ಸಂಘದ ನಿರ್ಗಮನ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರಿಂದ ಅಧಿಕಾರ ಸ್ವೀಕರಿಸಿದರು.

Advertisement

ಫೆ. 12ರಂದು ಸಂಜೆ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಸಂಘದ ವಾರ್ಷಿಕ ಮಹಾಸಭೆಯ ಬಳಿಕದ ಮೊದಲನೇ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಜಂಟಿ ಆಶ್ರಯದಲ್ಲಿ ಜರಗಿದ ಸಭೆಯಲ್ಲಿ ನಿರ್ಗಮನ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನೂತನ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸುವ ಮೂಲಕ ಪದವಿ ಹಸ್ತಾಂತರಿಸಿದರು. ಬಳಿಕ ನಿರ್ಗಮನ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರಿಗೆ ನೂತನ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು, ತನ್ನನ್ನು ಸಂಘದ ಜವಾಬ್ದಾರಿ ಯುತ ಅಧ್ಯಕ್ಷ ಪದವಿಗೆ ಅವಿರೋಧವಾಗಿ ಆಯ್ಕೆ ಮಾಡಿದ ಮುಂಬಯಿಯ ಸಮಸ್ತ ಬಂಟ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿ ದರು. ಬಂಟರ ಸಂಘಕ್ಕಾಗಿ ಸಮಾಜದ ಹಿರಿಯರು ಸಲ್ಲಿಸಿದ ಕೊಡುಗೆ ಯನ್ನು ಮನಸಾರೆ ಸ್ಮರಿಸಿದ ಅವರು, ಸಂಘದ ಘನತೆ -ಗೌರವಗಳಿಗೆ ಚ್ಯುತಿ ಬಾರದಂತೆ ಸಂಘದ ಅಭಿವೃದ್ಧಿ ಗಾಗಿ ತನ್ನ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಅತ್ಯಂತ ನಿಷ್ಠೆಯಿಂದ ಸೇವೆಗೈಯುತ್ತೇನೆ ಎಂದು ತಿಳಿಸಿ ಈ ಅವಧಿಯಲ್ಲಿ ಸಂಘದ ಯೋಜನೆ ಹಾಗೂ ಕಾರ್ಯಚಟುವಟಿಕೆ ಗಳಲ್ಲಿ ತನ್ನೊಂದಿಗೆ ಸಹಕರಿಸುವಂತೆ ವಿನಂತಿಸಿದರು.

ಸಂಘದಲ್ಲಿ ಸೇವೆ ಮಾಡಲು ಪದವಿಯ ಅಗತ್ಯವಿಲ್ಲ. ಸ್ವಇಚ್ಛೆಯಿಂದ ಮುಂದಾಗುವವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ತನ್ನ ಆಡಳಿತಾವಧಿಯಲ್ಲಿ ಪದ್ಮನಾಭ ಎಸ್‌. ಪಯ್ಯಡೆ ಅವರ ಕನಸಿನ ಯೋಜನೆಯಾದ ಬೊರಿವಲಿ ಶಿಕ್ಷಣ ಯೋಜನೆಯನ್ನು ಅತೀ ಶೀಘ್ರದಲ್ಲೇ ಪೂರ್ಣ ಗೊ ಳಿಸ ಲಾಗುವುದು. ಈ ಯೋಜನೆಗೆ ಮೊದಲ ಪ್ರಾಶಸ್ತÂ ನೀಡಲಾ ಗುವುದು. ತಾವೆಲ್ಲರೂ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು. ಸಂಘದ ಕಾನೂನು ನಿಯಮಾವಳಿಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಬದಲಾಯಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಆಡಳಿತಾವಧಿಯಲ್ಲಿ ಉಪಾಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೇ ಸರಿ. ಅವರ ಮಾರ್ಗದರ್ಶನದಲ್ಲಿ ಸಂಘದ ಬಗ್ಗೆ ಹೆಚ್ಚಿನ ಅನುಭವ ಪಡೆಯಲು ಸಾಧ್ಯವಾಗಿದೆ. ಸೌಮ್ಯ ಸ್ವಭಾವದ ಅವರ ಆಡಳಿತ ಚಾತುರ್ಯ ನನಗೆ ಪ್ರೇರಣೆ ನೀಡಿದೆ ಎಂದು ತಿಳಿಸಿದ ಚಂದ್ರಹಾಸ ಶೆಟ್ಟಿ ಅವರು ನೂತನ ಆಡಳಿತ ಸಮಿತಿ, ಉಪಸಮಿತಿಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ನೂತನ ಅಧ್ಯಕ್ಷರು 2021, 2022 ಮತ್ತು 2023ರ ಮೂರು ವರ್ಷಗಳ ಅವಧಿಗೆ ನೇಮಕಗೊಂಡ ಪದಾಧಿಕಾರಿಗಳ ಸಹಿತ 10 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಉಪ ಸಮಿತಿಯ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.

Advertisement

ಸಂಘದ ನೂತನ ಉಪಾಧ್ಯಕ್ಷರಾಗಿ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ನಿಟಕಪೂರ್ವ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಿದ್ಧ ಟ್ಯಾಕ್ಸ್‌ ಕನ್ಸಲ್ಟೆಂಟ್‌, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ, ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಲೆಕ್ಕ ಪರಿಶೋಧಕ, ಪೊವಾಯಿ ಶಿಕ್ಷಣ ಸಮಿತಿಯ ನಿಕಟಪೂರ್ವ ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿಯಾಗಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ಸಂಘದ ನೂತನ ಶಿಕ್ಷಣ ಸಮಿತಿ ಯೋಜನೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ಸಮಾಜ ಸೇವಕ ಮುಂಡಪ್ಪ ಎಸ್‌. ಪಯ್ಯಡೆ, ಸಂಘದ ಜತೆ ಕೋಶಾಧಿಕಾರಿಯಾಗಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ಸಂಘದ ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿಗಳ ನಿಕಟಪೂರ್ವ ಸಮನ್ವಯಕ, ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನೇಮಕಗೊಂಡಿದ್ದು, ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಲಾಯಿತು.

ಸಂಘದ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಸಂಘದ ಮಹಾದಾನಿ, ಸಮಾಜ ಸೇವಕಿ, ಕೃಷ್ಣ ಪ್ಯಾಲೇಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ನಿರ್ದೇಶಕಿ ಉಮಾ ಕೆ. ಶೆಟ್ಟಿ ಅವರು ನೇಮಕಗೊಂಡಿದ್ದು, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ನೂತನ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭ ಹಾರೈಸಿದರು. ಸಂಘದ ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷರಾಗಿ ನಿಕಟಪೂರ್ವ ಉಪ ಕಾರ್ಯಾಧ್ಯಕ್ಷ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ ಅವರು ನೇಮಕಗೊಂಡಿದ್ದು, ಅವರನ್ನು ನಿಕಟಪೂರ್ವ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಐಕಳ, ನೂತನ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ನೂತನ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಹರೀಶ್‌ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ ಅವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next