ಬೆಳಗಾವಿ: ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ ಡಾ| ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ವ್ಯವಸ್ಥೆಯಂತೆ ದೇಶದಲ್ಲಿ ಎಲ್ಲರೂ ಸಹಕಾರ ಮತ್ತು ಸಹಬಾಳ್ವೆಯಿಂದ ಬದುಕಬೇಕು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಡಾ| ಅಂಬೇಡ್ಕರ್ ಅವರು ಸಾಮಾಜಿಕ ಸಹಕಾರ ಮತ್ತು ಸಹಬಾಳ್ವೆಯ ಮೂಲ ಮಂತ್ರವನ್ನಾಗಿಸುವ ಸಂವಿಧಾನ ರಚಿಸಿ, ಭಾರತ ದೇಶದ ಚರಿತ್ರೆ, ಪರಂಪರೆ, ಸಾಮಾಜಿಕತೆಯ ಜೊತೆಗೆ ಭದ್ರ ಪ್ರಜಾತಂತ್ರ ವ್ಯವಸ್ಥೆ ಕಲ್ಪಿಸಿ ಶಿಸ್ತಿನ ಕೊಡುಗೆ ನೀಡಿದ್ದಾರೆ. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರ ಕಲ್ಪಿಸಿಕೊಟ್ಟ ದಿನವಾಗಿದೆ. ಅಂಬೇಡ್ಕರರು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಹಗಲಿರುಳು ಚಿಂತಿಸಿ ರಚಿಸಿದ ಭವ್ಯಭಾರತದ ಸತ್ಸಂಕಲ್ಪವಾಗಿದೆ ಎಂದರು.
ಕೋವಿಡ್‌ನಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ವಿತರಣೆಗೆ ಸಂಬಂಧಿ ಸಿದಂತೆ ಡಿಇಒ ತಂತ್ರಾಂಶದಲ್ಲಿ 763 ಜನರ ವಿವರ ಅಳವಡಿಸಲಾಗಿದೆ. ತಹಶೀಲ್ದಾರರು 735ಕ್ಕೆ ಅನುಮೋದನೆ ನೀಡಿದ್ದು, ಇದರಲ್ಲಿ ಜಿಲ್ಲಾ ಧಿಕಾರಿಗಳು 712 ಜನರ ಪರಿಹಾರ ವಿತರಣೆ ಅನುಮೋದಿಸಿದ್ದಾರೆ. 712 ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ತಲಾ 50 ಸಾವಿರ ರೂ. ಪರಿಹಾರವನ್ನು ನೇರವಾಗಿ ಸಂಬಂಧಿಸಿದವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
9 ತಾಲೂಕಾಸ್ಪತ್ರೆಗಳಿಗೆ ಮತ್ತು 16 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮೆಡಿಕಲ್ ಆಕ್ಸಿಜನ್ ಏರ್ ವ್ಯಾಕೂಮ್ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡುವ ಕಾಮಗಾರಿಗಳಲ್ಲಿ 9 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 4 ಘಟಕಗಳು ಅಂತಿಮ ಹಂತದಲ್ಲಿವೆ ಎಂದರು. ಸಚಿವರು ಕೆಎಸ್‌ಆರ್‌ಪಿ, ಗ್ರಹ ರಕ್ಷಕದಳ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ತಂಡಗಳ ಕವಾಯತು ವೀಕ್ಷಿಸಿದರು.
ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಪೊಲೀಸ್ ಕಮಿಷನರ್ ಡಾ| ಬೋರಲಿಂಗಯ್ಯ, ಜಿಪಂ ಸಿಇಒ ದರ್ಶನ್ ಎಚ್.ವಿ., ಎಸ್‌ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ ಇನ್ನಿತರರಿದ್ದರು.
ಜಿಲ್ಲೆಯಲ್ಲಿ 499 ಗ್ರಾಪಂ ಪೈಕಿ ಒಟ್ಟು 66 ಗ್ರಾಪಂಗಳನ್ನು ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ
2021-22ನೇ ಸಾಲಿನಲ್ಲಿ 7.31 ಲಕ್ಷ ಕುಟುಂಬಗಳು ನೋಂದಣಿಯಾಗಿವೆ. 7.31 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ.
ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ