Advertisement

ದೇಶದ ಪ್ರಗತಿಗೆ ಸಹಕರಿಸಿ

05:34 PM Sep 17, 2018 | |

ಶಿವಮೊಗ್ಗ: ಸುಸ್ಥಿರ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ವಿಜ್ಞಾನಿಗಳು, ಕೈಗಾರಿಕಾ ಉದ್ಯಮಿಗಳು ಹಾಗೂ ಸಂಶೋಧಕರು ಹೊಸ ರೀತಿ ಆಲೋಚನೆಗಳಿಂದ ಯೋಜನೆ ರೂಪಿಸಬೇಕಿದೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ಗ್ರಾಸಿಮ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಅಜಯ್‌ಕುಮಾರ್‌ ಗುಪ್ತ ತಿಳಿಸಿದರು.

Advertisement

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ| ಸರ್‌.ಎಂ. ವಿಶ್ವೇಶ್ವರಯ್ಯ ಜನ್ಮ
ದಿನಾಚರಣೆ ಹಾಗೂ ಎಂಜಿನಿಯರ್ಡೇ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನೆ ಹಾಗೂ ತಂತ್ರಜ್ಞಾನ  ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಮೂಲಕ ಸದೃಢ ದೇಶ ನಿರ್ಮಾಣ ಮಾಡಬೇಕಿದೆ ಎಂದರು.

 ಎಫ್‌ಪಿಎಐ ರಾಷ್ಟ್ರೀಯ ಅಧ್ಯಕ್ಷ ಎಚ್‌. ಆರ್‌. ಉಮೇಶ್‌ ಆರಾಧ್ಯ ಮಾತನಾಡಿ, ದೇಶದ ಯುವಜನತೆ ಶಕ್ತಿಯನ್ನು
ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಕನಸಿನಂತೆ ಸದೃಢ ರಾಷ್ಟ್ರ ನಿರ್ಮಾಣ ಆಗಬೇಕಾದರೆ ಯುವಜನತೆಯ ಶಕ್ತಿ ಸದ್ಬಳಕೆಯಾಗಬೇಕು ಎಂದರು.

ಜೆಎನ್‌ಸಿಸಿಇ ಪ್ರಾಚಾರ್ಯ ಡಾ| ಎನ್‌. ಆರ್‌.ಮಹಾದೇವ ಸ್ವಾಮಿ ಮಾತನಾಡಿ, ಡಿಜಿಟಲ್‌ ಇಂಡಿಯಾ ನಿರ್ಮಾಣ
ಮಾಡುವಲ್ಲಿ ಎಂಜಿನಿಯರ್ ಕೊಡುಗೆ ಅಪಾರ. ದೇಶದಲ್ಲಿ ಡಿಜಿಟಲ್‌ ಕ್ರಾಂತಿ ಆಗುವ ಮೂಲಕ ಮಹತ್ತರ ಬದಲಾವಣೆ ಕಾಡುತ್ತಿದೆ. ಬ್ಯಾಂಕ್‌, ಶಿಕ್ಷಣ, ಹಾಸ್ಪಿಟಾಲಿಟಿ, ಇ- ವೈದ್ಯಕೀಯ ಸೇವೆ ಸೇರಿ ತಂತ್ರಜ್ಞಾನದಿಂದ ಕೂಡಿದ ಹೊಸ ಭಾರತದ ನಿರ್ಮಾಣ ಆಗುತ್ತಿದೆ. ನವ ದೇಶ ರೂಪಿಸುವಲ್ಲಿ ತಂತ್ರಜ್ಞರ ಪಾತ್ರ ಬಹಳ ಮುಖ್ಯ. ಹೊಸ ರೀತಿ ಆಲೋಚನೆಗಳು ಒಂದುಗೂಡಿದಾಗ ಅದ್ಭುತ ದೇಶ ಕಟ್ಟಲು ಸಾಧ್ಯ ಎಂದರು.

 ವಿಶ್ವೇಶ್ವರಯ್ಯ ಅವರದ್ದು ಶಿಸ್ತಿಗೆ ಹೆಸರಾದ ವ್ಯಕ್ತಿತ್ವ. ಅವರು ಜೀವನದಲ್ಲಿ ಪಾಲಿಸಿದ ತತ್ವ ಹಾಗೂ ಆದರ್ಶಗಳು ಎಲ್ಲರಿಗೂ ಮಾದರಿ. ಅವರ ಆಲೋಚನೆ ಶೈಲಿ ಎಲ್ಲರಿಗೂ ಅನುಕರಣೀಯ ಎಂದರು. ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಡಾ| ಎಚ್‌.ಟಿ. ಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ನಾನಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Advertisement

ಮಾಚೇನಹಳ್ಳಿಯ ಧನುಷ್‌ ಕಮರ್ಷಿಯಲ್‌ ಕಾರ್ಪೊರೇಷನ್‌ ಅಧ್ಯಕ್ಷೆ ಎಚ್‌.ವಿ. ನಂದಾಗೆ ಮಹಿಳಾ ಉದ್ಯಮಿ ವಿಶೇಷ ಪುರಸ್ಕಾರ ನೀಡಲಾಯಿತು. ಈಶ್ವರ್‌ ಸ್ಟೀಲ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌ನ‌ ಕಾರ್ಮಿಕ ಎಂ. ದಿನೇಶ್‌, ಸಿಂಧು ಇಂಡಸ್ಟ್ರಿಸ್‌
ನ ಡಿ.ಎನ್‌. ಲೋಕೇಶ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಡಿ.ಎಸ್‌. ಅರುಣ್‌, ಉಪಾಧ್ಯಕ್ಷ ಜೆ.ಆರ್‌. ವಾಸುದೇವ, ಎಂ. ರಾಜು, ಬಿ.ಆರ್‌. ಸಂತೋಷ್‌, ಬಿ. ಗೋಪಿನಾಥ್‌, ಪಿ. ರುದ್ರೇಶ್‌, ಡಿ.ಎಸ್‌. ನಟರಾಜ್‌, ಬಿ. ವಿಜಯ್‌ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next