Advertisement

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ಸಹಕರಿಸಿ: ಮಧ್ವರಾಜ್‌

07:00 AM Aug 13, 2017 | Team Udayavani |

ಉಡುಪಿ: ಮಾನವೀಯ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ದಾನಿಗಳು ಇನ್ನಷ್ಟು ನೆರವು ನೀಡಿ ಸಹಕರಿಸಬೇಕೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.ಅವರು ಆ. 12ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಭಾ.ರೆ.ಕ್ರಾ. ಸಂಸ್ಥೆ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ್ದ ಜಿನೇವಾ ಒಪ್ಪಂದ ದಿನಾಚರಣೆ ಮತ್ತು ನಿಧಿ ಸಂಗ್ರಹಣಾ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ವಿಶೇಷ ಚೇತನರಿಗೆ ಸಹಾಯ ಮಾಡಿ
ರಕ್ತದಾನದ ಜತೆಗೆ ವಿಶೇಷ ಚೇತನರಿಗೆ ಸಹಾಯ ಮಾಡುವ ಭಾ.ರೆ. ಕ್ರಾಸ್‌ನಿಂದ ಇನ್ನಷ್ಟು ಜನಹಿತ ಸೇವೆಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಬಟ್ಟೆ ಬ್ಯಾನರ್‌ಗೆ ಬೋನಸ್‌
ನಿಧಿ ಸಂಗ್ರಹಣಾ ಜಾಥಾದಲ್ಲಿ ಭಾಗವಹಿಸಿದ 14 ಕಾಲೇಜುಗಳ ಪೈಕಿ ಎಂಜಿಎಂ ಮತ್ತು ಮಿಲಾಗ್ರಿಸ್‌ ಕಾಲೇಜುಗಳ ವಿದ್ಯಾರ್ಥಿಗಳು ಬಟ್ಟೆಯ ಬ್ಯಾನರ್‌ ತಂದಿರುವುದನ್ನು ಗಮನಿಸಿದ ಸಚಿವರು ಅವರಿಗೆ ತಲಾ ಐನೂರು ರೂಪಾಯಿ ಬೋನಸ್‌ಆಗಿ ನೀಡಿದರು.

ಸ್ವತ್ಛ ಪರಿಸರವನ್ನಾಗಿಸಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ನಿಧಿ ಸಂಗ್ರಹಣದ ಜತೆಗೆ ನಾಗರಿಕರಿಗೆ ಸ್ವತ್ಛ ಪರಿಸರದ ಬಗ್ಗೆ ಹಾಗೂ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಪರಿವರ್ತಿಸಲು ವಿನಂತಿಯನ್ನು ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಭಾ.ರೆ.ಕ್ರಾ. ರಾಜ್ಯ ಶಾಖೆಯ ಸಭಾಪತಿ ಬಸೂÅರು ರಾಜೀವ ಶೆಟ್ಟಿ, ಯುವ ರೆಡ್‌ಕ್ರಾಸ್‌ ಘಟಕದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಜೆ.ಸಿ.ಜನಾರ್ದನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement

ಉಪ ಸಭಾಪತಿ ಡಾ| ಅಶೋಕ್‌ ಕುಮಾರ್‌ ವೈ.ಜಿ. ಸ್ವಾಗತಿಸಿ, ಖಜಾಂಚಿ ಡಾ| ರಾಮಚಂದ್ರ ಕಾಮತ್‌ ವಂದಿಸಿದರು.ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next