Advertisement

ಕೋವಿಡ್-19 ಹೊಕ್ಕೈತಿ ಮೈಯ್ನಾಗ…

01:00 PM Apr 21, 2020 | mahesh |

ಕೋವಿಡ್-19 ಎಲ್ಲ ಕಡೆ ಹರಡುತ್ತಿದೆ. ಯಾವ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ ಅಂತ ನಮ್ಮ ಸಿಎಂ, ಪಿಎಂ ಎಲ್ಲರೂ ಮನವಿ ಮಾಡಿದರೂ, ಕ್ಯಾರೇ ಅನ್ನದ ಜನ, ಹಾದಿ ಬೀದಿ ಅಲೆಯುತ್ತಲೇ ಇದ್ದಾರೆ. ಇಂಥವರಿಗೆ ಜಾಗೃತಿಯ ಅರಿವು ಮೂಡಿಸುವುದು ಹೇಗೆ? ಅದಕ್ಕೆ ಉತ್ತರವೆಂಬಂತೆ- ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಸಂಗಮೇಶ ಉಪಾಸೆ, ಉತ್ತರ ಕರ್ನಾಟಕ ಭಾಷೆಯಲ್ಲಿ- “ಕೊರೊನಾ ಹೊಕ್ಕೈತಿ ಮೈಯ್ನಾಗ… ಎಲ್ರುನೂ ಕೂಸೈತಿ ಮನೆಯಾಗ…” ಅಂತ ಹಾಡು ಬರೆದಿದ್ದಾರೆ. ಆ ಹಾಡು ವೈರಲ್‌ ಆಗಿದೆ.

Advertisement

ಎಲ್ಲರ ನಾಲಿಗೆಯ ಮೇಲೆ ಹರಿದಾಡತೊಡಗಿದೆ. ಈ ಹಾಡಿನಲ್ಲಿ, ಕೊರೊನಾದ ಪರಿಣಾಮ ಹೇಳುತ್ತಲೇ, ಬಿಡಾಡಿಯಂತೆ ಓಡಾಡುವ ಮಂದಿಗೆ ಬೆಂಡ್‌ ಎತ್ತಿದ್ದಾರೆ ಸಂಗಮೇಶ್‌. ಜೊತೆಗೆ, ಪೊಲೀಸರು, ವೈದ್ಯರು, ಪೌರಕಾರ್ಮಿಕರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಗಮೇಶ್‌ ಮೂಲತಃ ಕವಿ, ನಾಟಕಕಾರ. ಕವನ ಸಂಕಲನಗಳನ್ನು ಹೊರತಂದಿದ್ದಾರೆ. ನಾಟಕ ರಚಿಸಿ,
ಆಡಿಸಿದ್ದಾರೆ. ಈಗ, ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19  ಪರಿಣಾಮ ತಿಳಿದಿದ್ದರೂ, ಅದನ್ನು ಕೇರ್‌ ಮಾಡದ ಜನರನ್ನು ಎಚ್ಚರಿಸಲು, ತುಸು ಹಾಸ್ಯ ಬೆರೆಸಿ ಹಾಡು ಬರೆದು, ಹಾಡಿದ್ದೇನೆ ಅನ್ನುತ್ತಾರೆ ಅವರು. ಸಂಗೀತ ಕೆ.ಎಂ.ಇಂದ್ರ ಅವರದು. ಸುರೇಶ್‌, ಚಿಕ್ಕಣ್ಣ ಅವರ ಕ್ಯಾಮೆರಾ ಕೈಚಳಕ ಇದೆ. ಇವರ ಜೊತೆಗೆ
ಕುಟುಂಬದವರು, ಸ್ನೇಹಿತರೆಲ್ಲಾ ಸೇರಿ ನಟಿಸಿದ್ದಾರೆ. ಹಾಡನ್ನು ಕೇಳುತ್ತಿದ್ದರೆ, ಸಂಗಮೇಶ್‌ ಎದುರು ಮನೆಯ ಗೆಳೆಯನಾಗಿ, ಮನೆಯ ಒಡೆಯನಾಗಿ, ನೆಂಟನಾಗಿ ಬುದ್ಧಿವಾದ ಹೇಳಿದಂತಿದೆ.

ನೀವು ಒಮ್ಮೆ ಈ ಹಾಡು ಕೇಳಿದರೆ, ನಾಳೆಯಿಂದ ಬೀದಿ ಕಡೆ ತಲೆ ಹಾಕೋಲ್ಲ. https://youtu.be/ DPvnBLH‰q1U

Advertisement

Udayavani is now on Telegram. Click here to join our channel and stay updated with the latest news.

Next