Advertisement
ಚಿಕ್ಕಮಗಳೂರು ತಾಲೂಕಿನ ಕುರುವಂಗಿಯ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿ, ಕೂಲಿ ಕಾರ್ಮಿಕ ಅಣ್ಣಪ್ಪ ಅವರ ಪುತ್ರಿ ಕೆ.ಎ.ನೇತ್ರಾವತಿ ಎಲ್ಲರೂ ನಿಬ್ಬೆರಗಾಗುವ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನೇತ್ರಾವತಿ, ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಗಳಿಸುವುದರ ಜತೆಗೆ 7 ಚಿನ್ನದ ಪದಕ ಹಾಗೂ ಒಂದು ನಗದು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಈ ವಿಭಾಗದಲ್ಲಿ ಇರುವ 10 ಚಿನ್ನದ ಪದಕಗಳಲ್ಲಿ ನೇತ್ರಾವತಿ ಒಬ್ಬರೇ 7 ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನದ ಪದಕಗಳು ಕೂಡ ಐಡಿಎಸ್‌ಜಿ ಕಾಲೇಜಿನಲ್ಲೇ ವ್ಯಾಸಂಗ ಮಾಡುತ್ತಿರುವ ಬಿ.ಎಸ್.ಭವ್ಯ ಅವರ ಪಾಲಾಗಿದೆ. ಬಡತನದ ನಡುವೆಯೂ ಸಾಧನೆ ಮಾಡಿದ ನೇತ್ರಾವತಿ ಕಾಲೇಜು ಪ್ರಾಧ್ಯಾಪಕಿಯಾಗುವ ಕನಸು ಹೊತ್ತಿದ್ದಾರೆ.
● ಕೆ.ಎ. ನೇತ್ರಾವತಿ, ಎಂಎ ಕನ್ನಡ ವಿಭಾಗದಲ್ಲಿ 7 ಗೋಲ್ಡ್ ಮೆಡಲ್