Advertisement
ಕ್ಯಾಟ್ ಐಸ್ ಸನ್ ಗ್ಲಾಸ್ಸೆಲೆಬ್ರೆಟಿಗಳಲ್ಲಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಸನ್ ಗ್ಲಾಸ್‌ಗಳ ಪೈಕಿ ಕ್ಯಾಟ್ ಐಸ್ ಸನ್ ಗ್ಲಾಸ್ ಕೂಡ ಒಂದು.
ಈ ಶೈಲಿಯ ಸನ್ ಗ್ಲಾಸ್‌ಗಳು ಫಂಕಿ ಲುಕನ್ನು ನೀಡುತ್ತವೆ. ಬಿಂದಾಸ್ ಹಾಗೂ ವಿಭಿನ್ನವಾಗಿ ಆಗಿ ಕಾಣಲು ಬಯಸುವ ಫ್ಯಾಷನ್ ಪ್ರಿಯ ಹುಡುಗ-ಹುಡುಗಿಯರಿಗೆ ಇವು ಪಫೆìಕ್ಟ್.
70-80ರ ದಶಕದ ಓವರ್ ಸೈಜ್ ಸ್ಕ್ವೇರ್ ಗ್ಲಾಸ್
70-80ರ ದಶಕದಲ್ಲಿ ಅಜ್ಜ- ಅಜ್ಜಿಯಂದಿರು ಚೌಕಾಕಾರದ ಕಪ್ಪು ಫ್ರೆಮ್ ಇರುವ ಕನ್ನಡಕ ಧರಿಸಿರುವುದನ್ನು ನೀವು ಗಮನಿಸಿರಬಹುದು. ಹೆಚ್ಚಾಗಿ ಹಳೇ ಸಿನೆಮಾಗಳಲ್ಲಿ , ಅದರಲ್ಲೂ ಮುಖ್ಯವಾಗಿ ಪೋಷಕ ಪಾತ್ರಧಾರಿಗಳು ಈ ಮಾದರಿ ಕನ್ನಡಕಗಳನ್ನು ಬಳಸುತ್ತಿದ್ದರು. ಇತ್ತೀಚೆಗೆ ಕೂಲಿಂಗ್ ಗ್ಲಾಸ್‌ಗಳ ಹೊಸ ಫ್ಯಾಷನ್‌ನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವುದು ಈ 70-80ರ ದಶಕದ ಸೈಜ್ ಸ್ಕ್ವೇರ್ ಗ್ಲಾಸ್‌ಗಳು. ಈ ಕನ್ನಡಕಕ್ಕೆ ವಿನೂತನ ಟಚ್ ನೀಡಲಾಗಿದ್ದು ವಿವಿಧ ಬಣ್ಣಗಳ ಫ್ರೆàಮ್‌ಗಳಲ್ಲಿ ಲಭ್ಯವಿದೆ. ಹೆಚ್ಚಾಗಿ ಈ ಮಾದರಿಯ ಗ್ಲಾಸ್‌ಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಥಿನ್ ಲೈಟ್ ವೇಟ್ ಮೆಟಲ್ ಗ್ಲಾಸ್
ಹೆಸರೇ ಸೂಚಿಸುವಂತೆ ಅತ್ಯಂತ ಸಣ್ಣನೆಯ ತೆಳು ಫ್ರೆàಮ್ ವರ್ಕ್ ಈ ಮಾದರಿಯ ಗ್ಲಾಸ್‌ಗಳಲ್ಲಿ ಕಾಣಬಹುದು. ಈ ಮಾದರಿಯ ಗ್ಲಾಸ್‌ಗಳು ಇಂದು ಯುವಕ, ಯುವತಿಯರಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿವೆ. ಎಲ್ಲ ಮಾದರಿಯ ಉಡುಪುಗಳಿಗೆ ಒಪ್ಪುವಂಹದ್ದು ಮತ್ತು ಹೊಸ ತರಹದ ಲುಕ್ ನೀಡುವಂತಹದ್ದು.
Related Articles
ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಸನ್ ಗ್ಲಾಸ್‌ಗಳ ಪೈಕಿ ಎವಿಯೇರ್ಟ ಸನ್ ಗ್ಲಾಸ್ ಪ್ರಮುಖವಾದದ್ದು. ನೋಡಲು ಕೊಂಚ ಮಾಡರ್ನ್ ಲುಕ್. ಮಾತ್ರವಲ್ಲದೆ ಆಕರ್ಷಕವಾಗಿ ಕಾಣುತ್ತದೆ.
Advertisement
ಪೊಲರೈಸ್ಡ್ ಸನ್ ಗ್ಲಾಸ್ರೈಡರ್ಸ್ಗಳಿಗೆ ಇವು ಪ್ರಿಯ. ಸ್ನೋ ಫಾಲ್ ಹಾಗೂ ಸ್ವಿಮ್ಮಿಂಗ್ ಮಾಡುವಾಗ ಇವುಗಳನ್ನು ಹೆಚ್ಚು ಬಳಸುತ್ತಾರೆ. ಕ್ರೀಡಾಪಟುಗಳು ಹಾಗೇ ಬೈಕ್ ರೈಡರ್‌ಗಳಿಗೆ ಇದು ಅಚ್ಚುಮೆಚ್ಚು. ಇದರ ಲೆನ್ಸ್ ಗಳು ಕಣ್ಣನ್ನು ಸಂರಕ್ಷಿಸುವುದರೊಂದಿಗೆ ಹೆಚ್ಚು ಲೈಟ್‌ನಲ್ಲಿದ್ದಾಗಲೂ ಹಿತಕರ ಅನುಭವ ನೀಡುತ್ತವೆ. ಫ್ರೆಮ್‌ಲೇಸ್ ಸನ್ ಗ್ಲಾಸ್
ಸದಾ ಸನ್ ಗ್ಲಾಸ್‌ಗಳನ್ನು ಕೆಳಗೆ ಬೀಳಿಸುತ್ತಿರುವವರು ಫ್ರೆàಮ್‌ಲೇಸ್ ಸನ್ ಗ್ಲಾಸ್ ಧರಿಸಬಹುದು. ನಾನಾ ಶೇಡ್ಸ್‌ಗಳಲ್ಲಿ ದೊರೆ ಯುವ ಸನ್ ಗ್ಲಾಸ್ ಧರಿಸಿ ಫೋಟೋ ಫೋಸ್‌ಗೆ ಚಂದ ಕಾಣುವು ದಿಲ್ಲ. ಬದಲಾಗಿ ಹಾಕಿಕೊಳ್ಳಲು ಮಾತ್ರ ಈ ಗ್ಲಾಸ್‌ಗಳು ಸೂಕ್ತ. - ಕಾರ್ತಿಕ್ ಚಿತ್ರಾಪುರ