Advertisement

ಕುಕ್‌ ದ್ವಿಶತಕ: ಭಾರೀ ಮೊತ್ತದತ್ತ ಇಂಗ್ಲೆಂಡ್‌

12:01 PM Aug 19, 2017 | |

xಬರ್ಮಿಂಗಂ: ಆರಂಭಕಾರ ಅಲಸ್ಟೇರ್‌ ಕುಕ್‌ ಅವರ ದ್ವಿಶತಕ ಹಾಗೂ ಜೋ ರೂಟ್‌ ಅವರ ಅಮೋಘ ಶತಕ ಸಾಹಸದಿಂದ ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಬೃಹತ್‌ ಮೊತ್ತದತ್ತ ಸಾಗುತ್ತಿದೆ. ಊಟದ ವಿರಾಮದ ಬಳಇಕ 6 ವಿಕೆಟಿಗೆ 505 ರನ್‌ ಗಳಿಸಿ ದ್ವಿತೀಯ ದಿನದಾಟ ಮುಂದುವರಿಸುತ್ತಿದೆ. ಕುಕ್‌ 240 ರನ್‌ಗಳಿಸಿ ಆಡುತ್ತಿದ್ದಾರೆ.

Advertisement

ಪಂದ್ಯದ ಮೊದಲ ದಿನ ಆರಂಭಿಕ ಕುಸಿತಕ್ಕೊಳಗಾದರೂ ಅಮೋಘ ರೀತಿಯಲ್ಲಿ ಚೇತರಿಸಿಕೊಂಡ ಇಂಗ್ಲೆಂಡ್‌ 3 ವಿಕೆಟಿಗೆ 348 ರನ್‌ ಗಳಿಸಿತ್ತು. ಕುಕ್‌ 153 ರನ್‌ ಹಾಗೂ ಡೇವಿಡ್‌ ಮಲಾನ್‌ 28 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿದ ಕುಕ್‌ ಲಂಚ್‌ ಒಳಗಾಗಿ ದ್ವಿಶತಕ ಪೂರೈಸಿದರು. ಇದು ಅವರ 4ನೇ ಡಬಲ್‌ ಸೆಂಚುರಿ.

ಜೋ ರೂಟ್‌ ಅವರದು 136 ರನ್ನುಗಳ ಕೊಡುಗೆ. 39 ರನ್ನಿಗೆ 2 ವಿಕೆಟ್‌ ಬಿದ್ದಾಗ ಜತೆಗೂಡಿದ ಕುಕ್‌-ರೂಟ್‌ 248 ರನ್‌ ಪೇರಿಸುವ ಮೂಲಕ ತಂಡಕ್ಕೆ ರಕ್ಷಣೆ ಒದಗಿಸಿದರು. ಇದು ಹಗಲು-ರಾತ್ರಿ ಟೆಸ್ಟ್‌ನಲ್ಲಿ ದಾಖಲಾದ ಅತೀ ದೊಡ್ಡ ಜತೆಯಾಟ. ಕುಕ್‌ 145ನೇ ಟೆಸ್ಟ್‌ನಲ್ಲಿ ಬಾರಿಸಿದ 31ನೇ ಶತಕ ಇದಾಗಿದೆ.

ಟೆಸ್ಟ್‌ ಇತಿಹಾಸದ ಸರ್ವಾಧಿಕ ಶತಕ ಸಾಧಕರ ಯಾದಿಯಲ್ಲಿ ಕುಕ್‌ ಅವರಿಗೆ ಈಗ 11ನೇ ಸ್ಥಾನ. ಈ ಸಾಧನೆಯ ವೇಳೆ ಹೇಡನ್‌ ಮತ್ತು ಚಂದರ್‌ಪಾಲ್‌ ಅವರ 30 ಶತಕಗಳ ದಾಖಲೆಯನ್ನು ಕುಕ್‌ ಮೀರಿ ನಿಂತರು. ಇದೇ ವೇಳೆ ತವರಿನಲ್ಲಿ ಒಟ್ಟು 5,973 ರನ್‌ ಪೇರಿಸುವ ಮೂಲಕ ಕುಕ್‌ ಅಗ್ರಸ್ಥಾನ ಅಲಂಕರಿಸಿದರು. ಗ್ರಹಾಂ ಗೂಚ್‌ ಅವರ 5,917 ರನ್ನುಗಳ ಇಂಗ್ಲೆಂಡ್‌ ದಾಖಲೆ ಮುರಿಯಲ್ಪಟ್ಟಿತು.

ರೂಟ್‌ 13ನೇ ಶತಕದೊಂದಿಗೆ ಸಂಭ್ರಮಿಸಿ ದರು. ಇದು ಸತತ 11 ಟೆಸ್ಟ್‌ಗಳಲ್ಲಿ ರೂಟ್‌ ದಾಖಲಿಸಿದ 50 ಪ್ಲಸ್‌ ಸ್ಕೋರ್‌ ಆಗಿದೆ. ಈ ದಾಖಲೆಯಲ್ಲಿ ಅವರಿಗೀಗ ಜಂಟಿ ದ್ವಿತೀಯ ಸ್ಥಾನ. 72 ರನ್ನಿಗೆ 2 ವಿಕೆಟ್‌ ಕಿತ್ತ ಕೆಮರ್‌ ರೋಶ್‌ ವೆಸ್ಟ್‌ ಇಂಡೀಸಿನ ಮೊದಲ ದಿನದ ಯಶಸ್ವೀ ಬೌಲರ್‌. ಅವರು 328 ಎಸೆತಗಳ ಬಳಿಕ ಮೊದಲ ವಿಕೆಟ್‌ ಹಾರಿಸಿದರು. ರೋಶ್‌ ಕೊನೆಯ ಟೆಸ್ಟ್‌ ವಿಕೆಟ್‌ ಉರುಳಿಸಿದ್ದು 2015ರ ಲಂಕಾ ವಿರುದ್ಧದ ಕೊಲಂಬೊ ಪಂದ್ಯದಲ್ಲಿ!

Advertisement
Advertisement

Udayavani is now on Telegram. Click here to join our channel and stay updated with the latest news.

Next