Advertisement
ಬೆಂಗಳೂರಿನಲ್ಲಿ ಪ್ರತಿವರ್ಷ ಅವರೇಕಾಯಿ ಮೇಳ ನಡೆಯುವುದನ್ನೂ, ಅಲ್ಲಿ ಏನೇನೆÇÉಾ ಪಾಕಪ್ರಬೇಧಗಳು ಕೊಳ್ಳುಗರ ಬಾಯಲ್ಲಿ ನೀರೂರಿಸುವಂತೆ ತಯಾರಾಗುತ್ತವೆಂಬುದನ್ನೂ ದೂರದರ್ಶನ ಎಲ್ಲರ ಮನೆಗೆ ತಂದು ತಲುಪಿಸುವುದು ಇತ್ತೀಚಿನ ಕೆಲವರ್ಷಗಳಿಂದ ಮಾಮೂಲಾಗಿಬಿಟ್ಟಿದೆ. ಸೊಗಡವರೇಕಾಯಿ ವಿಜೃಂಭಿಸುವ ಕಾಲದಲ್ಲಿ ಎಲ್ಲರ ಮನೆಯ ರಸ್ತೆಯ ಎದುರಿನಲ್ಲೂ ಸಣ್ಣ ಗುಡ್ಡದಷ್ಟು ಅವರೇಕಾಯಿ ಸಿಪ್ಪೆಗಳ ರಾಶಿ. ಹಿಚುಕಿದ ಬೇಳೆಗಳ ಮೇಲ್ಪದರದ ಅವಶೇಷ. ಈ ಸಿಪ್ಪೆರಾಶಿಯನ್ನು ಜಗಿದು ಸಂಭ್ರಮಿಸುವ ಜಾನುವಾರುಗಳು. ಇವೆಲ್ಲಕ್ಕೂ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಅದೇಕೋ ನನಗೂ, ಅವರೇಕಾಯಿಗೂ ಎಣ್ಣೆ, ಸೀಗೆ. ರುಚಿ ಅನ್ನುವುದು ಚಿಕ್ಕಂದಿನಿಂದ ರೂಢಿಸಿಕೊಂಡು ಬಂದ ಅಭ್ಯಾಸಬಲದ ಕಾರಣದಿಂದಲೂ ಇರಬಹುದು. ಹತ್ತೆಂಟು ಕೆ.ಜಿ.ಯಷ್ಟು ಕೊಂಡು ಚೀಲ ತುಂಬಿಸಿಕೊಂಡು ಹೋಗುವವರನ್ನು ತರಕಾರಿ ಅಂಗಡಿಗಳಲ್ಲಿ, ಬೀದಿ ಬದಿ ರಾಶಿ ಹುಯ್ದುಕೊಂಡಲ್ಲಿ, ಕಣ್ಣಾರೆ ಕಾಣುವ ಯಜಮಾನರಿಗೆ ನಮ್ಮ ಮನೆಯೂ ಇದರ ಪಾಕವೈವಿಧ್ಯದಿಂದ ಘಮಗುಡಬೇಕು ಎನ್ನುವ ಬಯಕೆ. ಮನೆಗೆ ಬರುವ ಇಂತಹ ತರಕಾರಿಗಳು ಹೆಂಗಸರನ್ನು ಅಡುಗೆಕೋಣೆಯಲ್ಲಿ ಕಟ್ಟಿ ಹಾಕಲು ಇರುವಂಥ ಹುನ್ನಾರಗಳು ಎಂದು ನನ್ನ ಅನಿಸಿಕೆ. ಹೆಣ್ಣುಮಕ್ಕಳು ಇಂಥವನ್ನೆÇÉಾ ಸೈರಣೆಯಿಂದ ಸಂಸ್ಕರಿಸಿ ಅಡುಗೆ ಮಾಡುತ್ತಾರಲ್ಲ, ಅವರಿಗೆ ದೊಡ್ಡ ಸಲಾಮು. ಇದ್ಯಾವ ಘನಂದಾರಿ ಕೆಲಸ ಎಂದು ಇಷ್ಟೆÇÉಾ ಮಾತಾಡಬೇಕು? ಟೀವಿ ಎದುರು ಕೂತು ಸುಲಿದರೆ ಗೊತ್ತೇ ಆಗದಷ್ಟು ಸಲೀಸು ಅನ್ನುವವರು ಬೇಕೆಂದೇ ನಾನು ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದೇನೆಂದೂ, ಸುಲಿಯಲು ಕೈಲಾಗದಿದ್ದರೆ ಸುಲಿದು ಶೇಖರಿಸಿಟ್ಟ ಕಾಳುಗಳು ಎÇÉೆಂದರಲ್ಲಿ ಲಭ್ಯವಾಗುತ್ತದೆಯೆಂದೂ ಹದ ಹೇಳುತ್ತಾರೆನ್ನುವುದು ನನಗೆ ಗೊತ್ತಿದೆ. ಆದರೆ ವೃಥಾ ಒಂದಕ್ಕೆರಡು ದುಡ್ಡು ಕೊಟ್ಟು ತರಲು ಮಧ್ಯಮವರ್ಗದ ಮನೋಧರ್ಮ ಅಡ್ಡ ಬಂದು ಬಿಡುತ್ತದೆ. ಈಗಿನ ಯುವಪೀಳಿಗೆಗೂ, ನಮಗೂ ಈ ಕುರಿತು ಎಂದೂ ಮುಗಿಯದ ಒಂದು ಅಭಿಪ್ರಾಯ ಬೇಧ ನೆಲೆಯೂರಿಬಿಟ್ಟಿದೆ. ನಡೆದು ಹೋಗಬಹುದಾದ ದೂರಕ್ಕೆ ಬಸ್ಸು, ಬಸ್ಸಿನಲ್ಲಿ ಹೋಗಿ ಇಳಿಯಬಹುದಾದಲ್ಲಿಗೆ ಆಟೋ, ರೈಲಿನಲ್ಲಿ ಹೋಗುವಲ್ಲಿಗೆ ಕಾರು, ಇವೆÇÉಾ ನಮ್ಮಂಥವರಿಗೆ ಪಥ್ಯವಾಗುವುದಿಲ್ಲ.
Related Articles
Advertisement
ಮನೆಯೊಳಗೆ ಬಲಗಾಲಿಟ್ಟು ಪ್ರವೇಶಿಸುತ್ತಿದ್ದ ಅಡುಗೆಭಟ್ಟರ ಆಗಮನಕ್ಕೆ ಸಂಭ್ರಮಿಸುತ್ತಾ ಸಾಕ್ಷಿಯಾಗುವ ದೃಶ್ಯ ಈಗೆಲ್ಲಿದೆ? ಕಲ್ಯಾಣಮಂದಿರಗಳಲ್ಲಿ ನಡೆಯುವ ಸಂತರ್ಪಣೆಗೆ ಹಾಜರಿ ಹಾಕಿ ಉಂಡು ಬರುವುದಕ್ಕಷ್ಟೇ ಅನುಭವ ಸೀಮಿತ, ಆತಿಥೇಯರಿಗೂ ಕೂಡಾ. “ಮದುವೆ ಮಾಡ್ಕೊಂಡ್ರೆ ಅಡುಗೆಭಟ್ರನ್ನೇ ಮಾಡ್ಕಂಬೇಕು. ದಿವಸಾ ಅಡಿಗೆ ಮಾಡೋ ರಗಳೆ ತಪ್ಪುತ್ತೆ’ ಎಂದು ಅಕ್ಕತಂಗಿಯರ ನಡುವೆ ಚಲಾವಣೆಯಾಗುತ್ತಿದ್ದ ಗುಸುಪಿಸು, ತಮ್ಮನ್ನೇ ನೋಡಿ ಅವರು ನಗುತ್ತಿ¨ªಾರೆಂಬ ಭಟ್ಟರ ಪಾಳೆಯದ ಗುಮಾನಿ, “ಎಂತ ಬೇಕಾಗಿತ್ತು?’ ಎಂದು ಮನೆಯವರನ್ನೇ ಆಚೆಗಟ್ಟಲು ನೋಡುವ ಅವರ ಹುನ್ನಾರ, ಕಚಕುಳಿ ಕೊಡುವ ನೆನಪುಗಳು.
ಕೆಲ ಹೆಮ್ಮಕ್ಕಳಿರುತ್ತಾರೆ, ಅಡುಗೆ, ತಿಂಡಿಗಳ ತಯಾರಿಕೆಯಲ್ಲಿ ನಿಸ್ಸೀಮರು. ಅವರು ಮಾಡಿದ್ದನ್ನು ತಿಂದು ನೀವು ಹೊಗಳಿಕೆ ಹಾಕುವುದನ್ನು ಸಗರ್ವದಿಂದ ಸ್ವೀಕರಿಸುವಂಥವರು. ಆದರೆ ಆ ಖಾದ್ಯದ ತಯಾರಿಕೆಯ ಕುರಿತು ಕುತೂಹಲದಿಂದ ಕೇಳಿದರೆ ಪೂರ್ತಿಯಾಗಿ ಗುಟ್ಟು ಬಿಟ್ಟುಕೊಡದೆ ಏನೋ ಒಂದನ್ನು ಮರೆಮಾಚುವುದು ಅವರ ಸ್ವಭಾವ. ಟೀವಿಯಲ್ಲಿ ಅಡುಗೆ ಮಾಡಲು ಬರುವವರು ಈ ಕುರಿತು ಮುಚ್ಚುಮರೆ ಮಾಡದೆ ಯಾವ್ಯಾವುದನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಬೇಕು ಎನ್ನುವ ಸಣ್ಣಪುಟ್ಟ ವಿವರಗಳವರೆಗೆ ಪ್ರತಿಯೊಂದರ ಮಾಹಿತಿ ಕೊಡುತ್ತಾರೆ. ಆದರೆ ಅವರು ಮಾಡುವಾಗ ಎಷ್ಟು ಸುಲಭ, ಸಲೀಸು ಅನ್ನಿಸುವಂಥಾದ್ದು ಸ್ವತಃ ನಾವು ತಯಾರಿಕೆಗೆ ಹೊರಟಾಗ ಅಂದುಕೊಂಡಷ್ಟು ಸುಲಭ ಅಲ್ಲ ಅನಿಸುವುದು ಅಡುಗೆಯ ಕುರಿತಾದ ಧೋರಣೆ ಸ್ವಭಾವದ ಫಲಶ್ರುತಿಯೇ? ಇರಬಹುದೇನೋ.
ಅಡುಗೆ ಮಾಡುವುದು ದೊಡ್ಡ ಯಜ್ಞ ಅಲ್ಲ ಎನ್ನುವ ಹಗುರ ಮನೋಭಾವನೆ ಈಗಾಗಲೇ ಬಂದುಬಿಟ್ಟಿದೆ. ಯಾವ ಪುಡಿ ಬೇಕೋ ಆ ಪುಡಿ ಕೈಯಳವಿನಲ್ಲಿ ಸಿಕ್ಕುತ್ತದೆ. ದೋಸೆ, ಇಡ್ಲಿಗಳ ಹಿಟ್ಟು ಕೂಡಾ ಪ್ಯಾಕೆಟ್ಟುಗಳಲ್ಲಿ ಸಿಗತೊಡಗಿ ಆ ಕಡೆಯಿಂದ ತಂದು ಈ ಕಡೆಯಲ್ಲಿ ಫಟಾಫಟ್ ತಯಾರಿಸಿದರಾಯ್ತು ಎನ್ನುವಲ್ಲಿಗೆ ಕಾಲ ಬಂದು ನಿಂತಿದೆ. ಸೂಪುಗಳಿಂದ ತೊಡಗಿ ವಿವಿಧ ವ್ಯಂಜನಗಳವರೆಗೆ ಏನೆಲ್ಲವೂ ರೆಡಿಮೇಡ್. ಬೇಕಾಗಿ¨ªೊಂದೇ, ದುಡ್ಡು. “ಅಪ್ಪ, ಅಮ್ಮನ್ನ ಬಿಟ್ಟು ಮತ್ತೆÇÉಾ ಕೊಂಡ್ಕೊಳ್ಳೋಕೆ ಸಿಗುತ್ತೆ’ ಎನ್ನುವುದು ಸವಕಲಾಗಿರುವ ಒಂದು ಹಳಸಲು ಮಾತು. ಮನೆಗೆ ನೆಂಟರು ಬರುತ್ತಾರಾ? ಮಾರಿಗೊಂದು ಸ್ವೀಟ್ ಸ್ಟಾಲ್ ಇದೆ. ಬೇಕಾದ್ದು ಕೊಂಡು ತರಬಹುದು. ಎಲ್ಲವನ್ನೂ ಕ್ಯಾಲೊರಿ ಲೆಕ್ಕದಲ್ಲಿ ಅಳೆಯುವವರಿಗೆ ಗ್ರಾಮ್‌ಗಳ ಲೆಕ್ಕದಲ್ಲಿ ನಾಲಿಗೆ ಚಪಲ ತೀರಿಸಿಕೊಳ್ಳಲು ಕೊಂಡು ತರುವುದೇ ಸಲೀಸು. ಒಟ್ಟಿನಲ್ಲಿ ಮನಸೋ ಇಚ್ಛೆ ತಿನ್ನುವ, ಮೈಮುರಿದು ದುಡಿಯುವ, ತನ್ಮೂಲಕ ತಿಂದಿದ್ದನ್ನು ರಕ್ತಗತವಾಗಿಸಿಕೊಳ್ಳುವ ಜಮಾನಾ ಹೊರಟು ಹೋಗಿದೆ. ಹೀಗಿರುವಾಗ ಮಗಳಿಗೆ ಅಡುಗೆ ಬರುವುದಿಲ್ಲ ಎನ್ನುವ ಗೆಳತಿಯ ಚಿಂತೆ ಅರ್ಥವಿಲ್ಲದ್ದು ಅನಿಸಿದರೆ ಆಶ್ಚರ್ಯವೇನು?
ಅದೊಂದು ದಿನ ಲಕಲಕ ಹೊಳೆಯುವ ಮುಖ ಹೊತ್ತು ಬಂದಳು ಗೆಳತಿ. “”ಒಂದು ತಿಂಗಳು ಬೆನ್ನುಕೋಲು ಮುರೊRಂಡು ಅಡುಗೆ ಪುಸ್ತಕ ಬರೊRಟ್ಟಿ¨ªೆ ಕಣೇ. ದಂಡ ಆಯ್ತು. ನಂಗೆ ಬುದ್ಧಿ ಇಲ್ಲ” ತನ್ನನ್ನೇ ಬೈದುಕೊಂಡಳು. ಅಲ್ಪಾವಧಿಯÇÉೇ ಮಗಳು ಅಡುಗೆ, ತಿಂಡಿ ಮಾಡುವುದರಲ್ಲಿ ಪರಿಣಿತಳಾಗಿ¨ªಾಳೆ ಎನ್ನುವುದು ಅವಳ ಹೆಮ್ಮೆ. ಪಾಕವೈವಿಧ್ಯದ ನಾನಾ ವಿಧಾನಗಳು ಬೆರಳ ತುದಿಯಲ್ಲಿ ತೆರೆದುಕೊಳ್ಳುವಾಗ ಕಲಿಯಲು ಆಸಕ್ತಿ ಇದ್ದವರಿಗೆ ಕಲಿಕೆಗೆ ಎಷ್ಟು ಹೊತ್ತು? “”ಅಮ್ಮಾ, ಅದು ಮಾಡೋದು ಹೇಗೆ? ಇದು ಮಾಡೋದು ಹೇಗೆ?” ಹೊತ್ತಲ್ಲದ ಹೊತ್ತಲ್ಲೂ ಅಮ್ಮನಿಗೆ ಫೋನಾಯಿಸಿ ವಿವರ ತಿಳಿದುಕೊಳ್ಳಬೇಕಾದ ರಗಳೆ ಇಲ್ಲ. ಯೂಟ್ಯೂಬ್‌ನಲ್ಲಿ, ನೆಟ್‌ನಲ್ಲಿ ವಿವಿಧ ಹಂತಗಳ ಪ್ರಾತ್ಯಕ್ಷಿಕೆಯೊಂದಿಗೆ ಯಾವ ಅಡುಗೆ, ತಿಂಡಿ ನೆನೆದರೂ ಸ್ವತಃ ತಯಾರಿಸಿಕೊಳ್ಳಬಹುದಾದ ಸಂಭ್ರಮ. “ಅಜ್ಜಿಗೆ ಮೊಮ್ಮಗಳು ಕೆಮ್ಮೊàದು ಕಲಿಸಿದಳಂತೆ’ ಎನ್ನುವ ವ್ಯಂಗ್ಯಾರ್ಥದ ಗಾದೆಮಾತಿನ ವ್ಯಂಗ್ಯ ಬದಿಗಿಟ್ಟು ಅದನ್ನು ಸಹಜವಾಗಿ ಸ್ವೀಕರಿಸಬೇಕಾದ ಕಾಲ ಬಂದಿದೆ ಅನಿಸುವುದಿಲ್ಲವೇ? – ವಸುಮತಿ ಉಡುಪ