Advertisement
1. ಅನಾನಸ್ ಗೊಜ್ಜು ಬೇಕಾಗುವ ಪದಾರ್ಥ: ಹೆಚ್ಚಿದ ಅನಾನಸ್- 1 ಕಪ್, ಬೆಲ್ಲ- ಅರ್ಧ ಕಪ್, ಹುಣಸೆಹಣ್ಣು- ಲಿಂಬೆ ಗಾತ್ರದ್ದು, ಎಳ್ಳು-2 ಚಮಚ, ಉದ್ದಿನಬೇಳೆ-2 ಚಮಚ, ಮೆಂತ್ಯೆ- ಅರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ- 8, ಕರಿಬೇವಿನ ಸೊಪ್ಪು, ತೆಂಗಿನ ತುರಿ- 1 ಕಪ್, ಸಾಸಿವೆ- ಅರ್ಧ ಚಮಚ, ಕರಿಬೇವು- ಸ್ವಲ್ಪ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಇಂಗು.
ಬೇಕಾಗುವ ಪದಾರ್ಥ: ತುರಿದ ಅನಾನಸ್ ಹೋಳು -1 ಕಪ್, ಸಕ್ಕರೆ- ಅರ್ಧ ಕಪ್, ಗಟ್ಟಿ ಮೊಸರು- 2 ಕಪ್, ಫ್ರೆಷ್ ಕ್ರೀಂ- ಕಾಲು ಕಪ್, ಚಿಟಿಕೆ ಉಪ್ಪು, ಐಸ್ ಕ್ಯೂಬ್ಸ್- 4.
Related Articles
Advertisement
3.ಅನಾನಸ್ ಕೇಸರಿಬಾತ್ಬೇಕಾಗುವ ಪದಾರ್ಥ: ಹೆಚ್ಚಿದ ಅನಾನಸ್- ಅರ್ಧ ಕಪ್, ರವೆ- 1 ಕಪ್, ತುಪ್ಪ- 1 ಕಪ್, ಸಕ್ಕರೆ- ಮುಕ್ಕಾಲು ಕಪ್, ದ್ರಾಕ್ಷಿ-ಗೋಡಂಬಿ- 2 ಚಮಚ, ಏಲಕ್ಕಿ ಪುಡಿ-1 ಚಮಚ, ಕೇಸರಿ ಅಥವಾ ಫುಡ್ ಕಲರ್- ಚಿಟಿಕೆ, ಹಾಲು- ಅರ್ಧ ಕಪ್. ಮಾಡುವ ವಿಧಾನ: ರವೆಯನ್ನು ಘಂ ಎನ್ನುವವರೆಗೆ ಹುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿರಿಸಿ. ಅದೇ ಬಾಣಲೆಗೆ ಅನಾನಸ್ ಹೋಳು ಹಾಕಿ 2 ನಿಮಿಷ ಹುರಿಯಿರಿ. ಇದಕ್ಕೆ 3 ಕಪ್ ನೀರು ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ನಂತರ ಹುರಿದ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ, ಗಂಟುಗಳಾಗದಂತೆ ಬೆರೆಸಿ. ಈಗ ಸಕ್ಕರೆ ಹಾಕಿ ಕೂಡಿಸಿ. ಏಲಕ್ಕಿ ಪುಡಿ, ಹಾಲಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಬೆರೆಸಿ ತಳ ಹತ್ತದಂತೆ ಕೈಯಾಡಿಸಿ. ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿದರೆ ಅನಾನಸ್ ಕೇಸರಿಬಾತ್ ತಯಾರು. 4. ಅನಾನಸ್‌ಬರ್ಫಿ
ಬೇಕಾಗುವ ಪದಾರ್ಥ: ಅನಾನಸ್ ಹೋಳು – 5, ತೆಂಗಿನ ತುರಿ- 2 ಕಪ್, ತುಪ್ಪ- 2 ಚಮಚ, ಸಕ್ಕರೆ- 1 ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ತುಪ್ಪ ಹಾಗೂ ತೆಂಗಿನತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅನಾನಸ್ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಹುರಿದ ತೆಂಗಿನತುರಿಗೆ ಹಾಕಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ, ಈ ಮಿಶ್ರಣವನ್ನು ಕರಗುವವರೆಗೆ ಕುದಿಸಿ. ಗಟ್ಟಿಯಾಗುವವರೆಗೆ ಕುದಿಸಿದ ನಂತರ ತುಪ್ಪ ಹಾಕಿ ತಳ ಹತ್ತದಂತೆ ಕೈಯಾಡಿಸಿ. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಶ್ರುತಿ ಕೆ.ಎಸ್.,ತುರುವೇಕೆರೆ