Advertisement

ಸಿಲಿಂಡರ್‌ ದರ 25 ರೂ. ಹೆಚ್ಚಳ

12:33 AM Aug 19, 2021 | Team Udayavani |

ಹೊಸದಿಲ್ಲಿ: ಸಬ್ಸಿಡಿಯುಕ್ತ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 25 ರೂ.ಗಳಿಗೆ ಕೇಂದ್ರ ಸರಕಾರ ಏರಿಸಿದೆ.

Advertisement

ಮಂಗಳವಾರದಿಂದಲೇ ಹೊಸ ದರ ಜಾರಿಗೊಂಡಿದ್ದು, ದಿಲ್ಲಿ ಹಾಗೂ ಮುಂಬಯಿಯಲ್ಲಿ ಪ್ರತೀ 14.2 ಕೆ.ಜಿ. ಸಿಲಿಂಡರ್‌ ಬೆಲೆ 859.50 ರೂ. ಇರಲಿದೆ. ಬೆಂಗಳೂರಿನಲ್ಲಿ ಪ್ರತೀ ಸಬ್ಸಿಡಿಯುಕ್ತ ಸಿಲಿಂಡರ್‌ನ ದರ 862.50 ರೂ.ಗಳಿಗೇರಿದೆ.

ಸಿಲಿಂಡರ್‌ ದರವನ್ನು  ಜು. 1ರಂದು ಏರಿಸಲಾಗಿತ್ತು. ಆಗಲೂ ಪ್ರತೀ 14.2 ಕೆಜಿ ಸಿಲಿಂಡರ್‌ ಮೇಲೆ 25.50 ರೂ.ನಷ್ಟು ಏರಿಕೆಯಾಗಿತ್ತು. ಈಗ ಕೋಲ್ಕತಾದ ಗ್ರಾಹಕರು ಗರಿಷ್ಠ ದರ (886 ರೂ.) ತೆರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next