ಹೊಸದಿಲ್ಲಿ: ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ಯೂನಿಟ್ ಗೆ 350.50 ರೂ. ಮತ್ತು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ಯೂನಿಟ್ ಗೆ 50 ರೂ. ನಷ್ಟು ಹೆಚ್ಚಿಸಿವೆ.
ಪರಿಷ್ಕೃತ ದರಪಟ್ಟಿಯ ಪ್ರಕಾರ ದೆಹಲಿಯಲ್ಲಿ ವಾಣಿಜ್ಯ ಎಲ್ ಪಿಜಿ ಬೆಲೆ ಪ್ರತಿ ಸಿಲಿಂಡರ್ ಗೆ ರೂ. 2119.50 ಆಗಿದೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯು ಪ್ರತಿ ಸಿಲಿಂಡರ್ ಗೆ ರೂ. 1103 ಆಗಿದೆ.
ಬೆಂಗಳೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ನ ಬೆಲೆ ಪ್ರತಿ ಸಿಲಿಂಡರ್ ಗೆ 1,105.50 ಆಗಿದೆ. ಫೆಬ್ರವರಿಯಲ್ಲಿ ಇದರ ಬೆಲೆ 1055.50 ಇತ್ತು.
ಇದನ್ನೂ ಓದಿ:ವಧು – ವರರ ಫೋಟೋ ತೆಗೆಯಲು ಹೋಗಿ ಚರಂಡಿಗೆ ಜಾರಿ ಬಿದ್ದ ಮಹಿಳೆ: ವಿಡಿಯೋ ವೈರಲ್
ಈ ವರ್ಷದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಏರಿಕೆಯಾಗಿದೆ.
ಜನವರಿ ಒಂದರಂದು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ 25 ರೂ ಏರಿಕೆಯಾಗಿದೆ.