Advertisement

ಇಂಗ್ಲೆಂಡ್‌  ಟೆಸ್ಟ್‌  ನಾಯಕತ್ವಕ್ಕೆ ಕುಕ್‌ ರಾಜೀನಾಮೆ

03:45 AM Feb 07, 2017 | Team Udayavani |

ಲಂಡನ್‌: ದಾಖಲೆಯ 59 ಪಂದ್ಯಗಳಲ್ಲಿ  ನಾಯಕರಾಗಿ ಇಂಗ್ಲೆಂಡ್‌ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದ ಅಲಸ್ಟೇರ್‌ ಕುಕ್‌ ಸೋಮವಾರ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿ ದ್ದಾರೆ. ಇದೊಂದು ದುಃಖದ ದಿನ ಆದರೆ ತಂಡಕ್ಕಾಗಿ ಸರಿಯಾದ ನಿರ್ಧಾರ ವೆಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಟೆಸ್ಟ್‌ನಲ್ಲಿ 11,057 ರನ್‌ ಪೇರಿಸುವ ಮೂಲಕ ಇಂಗ್ಲೆಂಡಿನ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡಿರುವ ಕುಕ್‌ 2012ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಅವರ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡ 2013 ಮತ್ತು 2015ರಲ್ಲಿ ತವರಿ ನಲ್ಲಿ ಆ್ಯಶಸ್‌ ಸರಣಿ ಜಯಿಸಿತ್ತು ಮಾತ್ರವಲ್ಲದೇ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಸಾಧನೆ ಮಾಡಿತ್ತು.

ಯಾರ್ಕ್‌ಶೈರ್‌ ಬ್ಯಾಟ್ಸ್‌ಮನ್‌ ಜೋ ರೂಟ್‌ ಅವರು ಕುಕ್‌ ಅವರ ಉತ್ತರಾಧಿಕಾರಿಯಾಗುವ ಫೇವರಿಟ್‌ ಆಟಗಾರ ಆಗಿದ್ದಾರೆ. ಈ ಕುರಿತ ಪ್ರಕಟನೆ ಮುಂದಿನೆರಡು ವಾರಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ತಂಡದ ನಾಯಕನಾಗಿ ರುವುದು ಮತ್ತುಕಳೆದ ಐದು ವರ್ಷ ಟೆಸ್ಟ್‌ ತಂಡವನ್ನು ಮುನ್ನಡೆಸಿರುವುದು ನನಗೆ ಸಿಕ್ಕಿದ ಬಲುದೊಡ್ಡ ಗೌರವ ವೆಂದು ಭಾವಿಸುತ್ತೇನೆ ಎಂದು 32ರ ಹರೆಯದ ಕುಕ್‌ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ನಾಯಕನ ಹುದ್ದೆಯಿಂದ ಕೆಳಗೆ ಇಳಿಯುವುದು ನಿಜವಾಗಿಯೂ ಕಠಿನ ನಿರ್ಧಾರ. ಆದರೆ ಇದು ಸರಿಯಾದ ನಿರ್ಧಾರ ಮತ್ತು ತಂಡಕ್ಕಾಗಿ ಸರಿ ಯಾದ ಸಮಯವೆಂದು ನನಗೆ ತಿಳಿದಿದೆ ಎಂದವರು ಪ್ರತಿಕ್ರಿಯೆ ನೀಡಿದರು.

Advertisement

2010ರಿಂದ 2014ರ ನಡುವೆ ಕುಕ್‌ ಅವರು ದಾಖಲೆಯ 69 ಏಕ ದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡ ವನ್ನು ಮುನ್ನಡೆಸಿದ್ದರು. ಅವರು ಗರಿಷ್ಠ ಸಂಖ್ಯೆಯ ಪಂದ್ಯಗಳಲ್ಲಿ ಟೆಸ್ಟ್‌ ನಾಯಕರಾಗಿ ತಂಡವನ್ನು ಮುನ್ನಡೆಸಿದ ಆಟಗಾರ ಆಗಿದ್ದು ಗರಿಷ್ಠ ಸಂಖ್ಯೆಯ ಟೆಸ್ಟ್‌ ಶತಕಗಳನ್ನು ಸಿಡಿಸಿದವರಾಗಿದ್ದಾರೆ. 

2012ರಲ್ಲಿ ಅವರು ವಿಸ್ಡನ್‌ ವರ್ಷದ ಶ್ರೇಷ್ಠ  ಕ್ರಿಕೆಟಿಗ ಮತ್ತು 2013ರಲ್ಲಿ ಐಸಿಸಿ ವಿಶ್ವದ ಶ್ರೇಷ್ಠ ಟೆಸ್ಟ್‌ ನಾಯಕರೆಂಬ ಗೌರವಕ್ಕೆ ಕುಕ್‌ ಪಾತ್ರರಾಗಿದ್ದರು.

ಕುಕ್‌ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಚೇರ್ಮನ್‌ ಕಾಲಿನ್‌ ಗ್ರೇವ್ಸ್‌ ಅವರಿಗೆ ರವಿವಾರ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕುಕ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. 

ಹಲವು ಕಾರಣಗಳಿಗಾಗಿ ಇದೊಂದು ವೈಯಕ್ತಿಕವಾಗಿ ದುಃಖದ ದಿನ. ಆದರೆ ನಾನು ನಾಯಕತ್ವ ವಹಿಸಿದಾಗ ಸಹಕರಿಸಿದ ಎಲ್ಲರಿಗೂ, ಎಲ್ಲ ಕೋಚ್‌ಗಳಿಗೂ ಮತ್ತು ಬೆಂಬಲ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇವರ ಜತೆ ಇಂಗ್ಲೆಂಡಿನ ಅಭಿಮಾನಿಗಳಿಗೆ ಮತ್ತು ಬಾರ್ಮಿ ಆರ್ಮಿಗೆ ಕೂಡ ಕೃತಜ್ಞತೆ ಸಲ್ಲಿಸುವೆ
ಅಲಸ್ಟೇರ್‌ ಕುಕ್‌

Advertisement

Udayavani is now on Telegram. Click here to join our channel and stay updated with the latest news.

Next