Advertisement
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಭಾರತ್ ಕಮ್ಯೂನಿಸ್ಟ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್ ಶರೀಫ್ಮಾತನಾಡಿ, ಪೌರಕಾರ್ಮಿಕರು ಪಟ್ಟಣದ ನಾಗರಿಕರ ಆರೋಗ್ಯ ಕಾಪಾಡಲು ಚರಂಡಿಗಳಲ್ಲಿನ ಗಲೀಜು, ಬಸ್ ನಿಲ್ದಾಣ ಮತ್ತು ಪಟ್ಟಣದ ಬೀದಿಗಳಲ್ಲಿನ ಕಸ ಮತ್ತು ಕೊಳಚೆ ಪ್ರದೇಶದಲ್ಲಿರುವ ಕೊಳಚೆಯನ್ನು ಸ್ವತ್ಛಗೊಳಿಸುತ್ತಿದ್ದಾರೆ. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸತತ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗುತ್ತಿಗೆ ಪೌರಕಾರ್ಮಿಕರಿಗೆ 12 ತಿಂಗಳುಗಳ ಕಾಲ ವೇತನ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಕೊಳಚೆಯನ್ನು ಸ್ವತ್ಛಗೊಳಿಸದೆ ಕೇವಲ ನಾಲ್ಕು ಕಾಯಂ ಪೌರಕಾರ್ಮಿಕರಿಂದ ಬಸ್ ನಿಲ್ದಾಣದ ಆವರಣದ ಕಸವನ್ನು
ಮಾತ್ರ ಸ್ವತ್ಛಗೊಳಿಸಲಾಗುತ್ತಿದೆ. ಮೇಲಾಧಿಕಾರಿಗಳಿಗೆ ಸ್ವತ್ಛತಾ ಕಾರ್ಯ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಆದ್ದರಿಂದ ಪಟ್ಟಣದ ನಾಗರಿಕರೂ ಎಚ್ಚೆತ್ತುಕೊಂಡು ಪಪಂ ಅಧಿಕಾರಿಗಳು ಮತ್ತು ಸರ್ಕಾರದ ಅವೈಜ್ಞಾನಿಕ ಆದೇಶದ
ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
Related Articles
ಜೀವನ ನಿರ್ವಹಣೆ ಕಷ್ಟವಾಗಿದೆ.ಪಟ್ಟಣ ಪಂಚಾಯತ್ ಕೌನ್ಸಿಲ್ ತೀರ್ಮಾನವನ್ನೇ ಧಿಕ್ಕರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಪಪಂ ಮುಖ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
Advertisement
ಧರಣಿಯಲ್ಲಿ ಸಿಪಿಐನ ಈರಣ್ಣ, ಬೋರಯ್ಯ, ಸಂದೀಪ್‌ಕುಮಾರ್, ಓಬಣ್ಣ, ಲಕ್ಷ್ಮಣ್ಣ, ಈಶ್ವರ, ಪಾಪಣ್ಣ, ಮಲ್ಲಯ್ಯ, ದುರುಗೇಶ್, ಉಮೇಶ್, ಸುಬಾನಿ, ಗುತ್ತಿಗೆ ಪೌರಕಾರ್ಮಿಕರಾದ ಕೃಷ್ಣಮೂರ್ತಿ, ಕೆ. ರಾಮಣ್ಣ, ಎಚ್. ನಾಗರಾಜ್, ಬಿ. ಸಿದ್ದಪ್ಪ, ತುಪ್ಪದಮ್ಮ, ಓಬಕ್ಕ, ಮಲ್ಲಮ್ಮ, ಗೋಪಿ, ಟಿ. ದಾಸಪ್ಪ, ಬಡಪ್ಪ, ಕುಮಾರಸ್ವಾಮಿ, ಡಿ. ಸಿದ್ದಪ್ಪ, ಎಚ್. ಮರಿಸ್ವಾಮಿ, ಎಂ .ಹನುಮಂತಪ್ಪ, ಗಂಗಮ್ಮ, ತಿಮ್ಮಕ್ಕ, ತಿಮ್ಮಣ್ಣ, ಜಯಣ್ಣ ಭಾಗವಹಿಸಿದ್ದರು
ಪಪಂ ಗುತ್ತಿಗೆ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಒಂಭತ್ತು ದಿನ ಕಳೆದರೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಅಹವಾಲು ಆಲಿಸಿಲ್ಲ. ಪಪಂ ಮುಖ್ಯಾಧಿಕಾರಿಗಳು ನೀಡುವಸುಳ್ಳು ವರದಿಯನ್ನು ನಂಬಿ ಎಲ್ಲಾ ಸರಿ ಇದೆ ಎಂದು ನಿರ್ಲಕ್ಷ್ಯ ಮಾಡದೆ ವಸ್ತುಸ್ಥಿತಿಯ ಪರಿಶೀಲನೆ ನಡೆಸಬೇಕು.
ಜಾಫರ್ ಶರೀಫ್, ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ