Advertisement

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

01:38 PM Sep 23, 2020 | sudhir |

ಕಲಬುರಗಿ: 34 ವರ್ಷಗಳ ಸುದೀರ್ಘ ಕಾಲದ ನಂತರ 21ನೇ ಶತಮಾನದ ಮೊದಲ ಶಿಕ್ಷಣ ನೀತಿ ದೇಶದಲ್ಲಿ ಜಾರಿಗೆ ಬಂದಿದ್ದು, ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ವಹಿಸಬೇಕೆಂಬುದು ದೇಶದ ನಿರೀಕ್ಷೆಯಾಗಿದೆ ಎಂದು ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್ ಹೇಳಿದರು.

Advertisement

ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಹೊಸ ಶಿಕ್ಷಣ ನೀತಿ ಎಲ್ಲರ ಪಾಲುದಾರಿಕೆಯೊಂದಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಅವುಗಳಿಗೆ ಶಕ್ತಿ ತುಂಬಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮತ್ತು ವಿಶ್ವವಿದ್ಯಾಲಯನ್ನು ಕೇಳಿಕೊಳ್ಳುತ್ತಿದ್ದೇವೆ ಎಂದರು.

ಹೊಸ ಶಿಕ್ಷಣ ನೀತಿ-2020 ಶಿಕ್ಷಣ, ಸಾಕ್ಷರತೆ, ಸಂಖ್ಯಾ ಜ್ಞಾನ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಉನ್ನತ ಮಟ್ಟದ ಅಡಿಪಾಯ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಸಾಮಾಜಿಕ, ನೈತಿಕ ಭಾವನಾತ್ಮಕ  ಸಾಮಾಥ್ಯ೯ವನ್ನು ಮತ್ತು ಅಂತಹ ಶಕ್ತಿಯನ್ನು ಅಭಿವೃದ್ಧಿ ಪಡಿಸಬೇಕೆಂಬ ತತ್ವದ ಮೇಲೆ ರೂಪಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಬಾಕಿ ಬಿಲ್ ಪಾವತಿಸಿ ಕೋವಿಡ್ ಸೋಂಕಿತನ ಶವ ಪಡೆಯಲು ಆಸ್ಪತ್ರೆ ತಾಕೀತು! ಸಂಬಂಧಿಕರ ಪ್ರತಿಭಟನೆ

ಶಾಲಾ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡಮಟ್ಟದ ಬದಲಾವಣೆಗಳನ್ನು ತರುವ ಸಾಮಾರ್ಥ್ಯ ಹೊಸ ಶಿಕ್ಷಣ ನೀತಿ ಹೊಂದಿದೆ. ಬಹು ಮುಖ್ಯವಾಗಿ ಶಾಲಾ- ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ, ಸಂಶೋಧನೆಗೆ ಸಹಾಯಧನ ನೀಡಲು ರಾಷ್ಟ್ರೀಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಆಯೋಗದ ಅಧ್ಯಕ್ಷರು ಹೇಳಿದರು.

Advertisement

ಐವರಿಗೆ ಗೌರವ ಡಾಕ್ಟರೇಟ್: ಜಾನಪದ ವಿದ್ವಾಂಸರು ಹಾಗೂ ಬರಹಗಾರರಾಸ ಎಂ.ಜಿ.ಬಿರಾದಾರ, ಕನ್ನಡ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಸಾಲು ಮರದ ತಿಮ್ಮಕ್ಕ, ಕನ್ನಡದ ಕವಿ ಚೆನ್ನವೀರ ಕಣವಿ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.‌ಶಿವನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಆನ್ ಲೈನ್ ದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಡಾ.‌ಎ.ಎಂ.‌ಜಿ.‌ಬಿರಾದಾರ ಅವರಿಗೆ ಕರ್ನಾಟಕ ಕೇಂದ್ರೀಯ ವಿವಿಯ ಕುಲಪತಿ ಪ್ರೊ..ಎಚ್.ಎಂ ಮಹೇಶ್ವರಯ್ಯ ಪ್ರದಾನ ಮಾಡಿದರು. ಉಳಿದ ಗಣ್ಯರಿಗೆ ಆನ್ಲೈನ್ ಮೂಲಕ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

665 ಪದವಿ ಪ್ರದಾನ:
ಸಿಯುಕೆ 5ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯವು 38 ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು, 25 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಒಟ್ಟು 665 ಪದವಿಗಳನ್ನು ಆನ್‌ಲೈನ್ ಮೂಲಕ ಘೋಷಿಸಲಾಯಿತು.

ಎಂ. ಟೆಕ್ ನಲ್ಲಿ ಕೃಷ್ಣಾಕಾಂತ ಪ್ರಭು ಹೆಚ್ಚಿನ ಚಿನ್ನದ ಪದಕ ಪಡೆದಿದ್ದು ಕನ್ನಡದಲ್ಲಿ ಸುನೀತಾ ಜಗನ್ನಾಥ ಚಿನ್ನದ ಪದಕ ಪಡೆದಿದ್ದಾರೆ. ಸುನೀತಾ ತಾಯಿ ಅಂಗನವಾಡಿ ಶಿಕ್ಷಕಿಯಾಗಿದ್ದು ತಂದೆ ಖಾಸಗಿ ಕೆಲಸ ಮಾಡುತ್ತಿದ್ದಾರೆ.

ಕುಲಪತಿ ಪ್ರೊ.ಹೆಚ್.ಎಂ ಮಹೇಶ್ವರಯ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕುಲಾಧಿಪತಿಗಳಾದ ಪ್ರೊ.ಎನ್. ಆರ್. ಶೆಟ್ಟಿ, ಸಮಕುಲಪತಿ ಜಿ.ಆರ್. ನಾಯಕ, ಕುಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಪಟೇಲ್, ಪರೀಕ್ಷಾ ನಿಯಂತ್ರಕ ಪ್ರೊ. ಬಿ.ಆರ್. ಕೇರೂರ ಸೇರಿದಂತೆ ಮುಂತಾದವರಿದ್ದರು. ಕೊವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಘಟಿಕೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next