ಮೈಸೂರು: ಜನರನ್ನು ಮೋಸ ಮಾಡಿ, ಮರುಳು ಮಾಡಿ ಮತಾಂತರ ಮಾಡುವುದು ತಪ್ಪು. ನಾನು ಕೂಡ ಮತಾಂತರದ ವಿರೋಧಿ. ನಾನು ಪತ್ರಕರ್ತನಾಗಿದ್ದ ವೇಳೆಯೇ ಈ ಬಗ್ಗೆ ಬರೆದಿದ್ದೆ. ಮತಾಂತರ ಮಾಡುತ್ತಿದ್ದವರಿಗೆ ಆತಂಕ ಇರುತ್ತದೆ. ಪಾದ್ರಿಗಳಿಗೆ ಏಕೆ ಈ ಚಡಪಡಿಕೆ, ಆತಂಕ. ಯಾಕೆ ಏಕಾಏಕಿ ಹೋಗಿ ಸಿಎಂಗೆ ಮನವಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನ 101 ಗಣಪತಿ ದೇಗುಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೂಳಿಹಟ್ಟಿ ಶೇಖರ್ ಒಬ್ಬ ಜನಪ್ರತಿನಿಧಿ. ಅವರ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಮರಳು ಮಾಡುವಂತ ಈ ಮತಾಂತರ ನಿಷೇಧ ಆಗಬೇಕು. ಲಾರಿಯಲ್ಲಿ ತುಂಬಿಕೊಂಡು ಹೋಗಿ ಗಿಫ್ಟ್ ಕೊಡ್ತಾರೆ. ಯಾಕೆ ಇದೆಲ್ಲ ಮಾಡಬೇಕು? ಮೊದಲು ಮತಾಂತರ ನಿಲ್ಲಬೇಕು ಎಂದರು.
ಜನರನ್ನು ಯಾಕೆ ಮರುಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ಕಾಪಾಡಿದ್ದು ಎನ್ನುತ್ತೀರಿ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ.ಇದು ಸರಿಯಾದ ಕ್ರಮ ಅಲ್ಲ. ಇದೆಲ್ಲವೂ ನಾವು ಕೂಡ ನೋಡಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ:ಸೋತು ಸುಣ್ಣವಾದ ಕಾಂಗ್ರೆಸ್ ನಿಂದ ದಿನಕ್ಕೊಂದು ಗಿಮಿಕ್: ಆರ್.ಅಶೋಕ್
ನಮ್ಮ ಕೋರಿಕೆ ನೆರವೇರಿಸಿದಕ್ಕೆ 101 ಗಣಪತಿಗೆ ಧನ್ಯವಾದ ಅರ್ಪಿಸಿದ್ದೇವೆ. ಸೆ.9ಕ್ಕೆ ಕೆಡಿಪಿ ಸಭೆಯಲ್ಲಿ ಹುಚ್ಚಗಣಿ ದೇಗುಲ ತೆರವು ಮಾಡಿದ್ದ ಬಗ್ಗೆ ಮಾತನಾಡಿದ್ದೆ. ನಾವು ಈ ಬಳಿ ಗಣೇಶನ ಬಳಿ ಬಂದು ಬೇಡಿಕೊಂಡಿದ್ದೇವು. ಇಂದು ನಮ್ಮ ಈ ಬೇಡಿಕೆ ಈಡೇರಿದೆ. ನಮಗೆ ಬಹಳ ಉತ್ತಮವಾದ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ. ವಿಧೇಯಕ ಮಂಡಿಸಿ ಅದನ್ನು ಪಾಸ್ ಮಾಡಿದ್ದಾರೆ. ಇದರಿಂದ ನಮ್ಮ ದೇಗುಲಗಳ ಉಳಿವಿಗೆ ಹೊಸ ಕಾಯ್ದೆ ಸಿಕ್ಕಿದೆ. ಹುಚ್ಚಗಣಿ ದೇಗುಲದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಬೇಕಿದೆ. ಇದಕ್ಕೆ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಬರುತ್ತಾರೆ. ಜನರು ಹಾಗೂ ಸರ್ಕಾರ ದೇಣಿಗೆ ನೀಡಿದರೆ ದೇಗುಲ ಕಟ್ಟಲು ಅನುಕೂಲ ಆಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.