Advertisement

ಮತಾಂತರಿಸಿ ಉಗ್ರರಿಗೆ ಮಾರಾಟ ? ಪಾರಾದ ಕೇರಳದ ಮಹಿಳೆ

06:00 AM Jan 12, 2018 | Harsha Rao |

ಕೊಚ್ಚಿ/ತಿರುವನಂತಪುರ: ಯುವತಿಯೊಬ್ಬಳನ್ನು ಪ್ರೀತಿಸಿ, ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ವಿವಾಹವಾಗಿ ಬಳಿಕ ಐಸಿಸ್‌ ಉಗ್ರರಿಗೆ “ಸೆಕ್ಸ್‌ ಸ್ಲೇವ್‌’ ಆಗಿ ಮಾರಾಟ ಮಾಡಲು ಯತ್ನಿಸಿದ್ದ ಆಘಾತ ಕಾರಿ ಘಟನೆಯೊಂದು ಬಹಿರಂಗವಾಗಿದೆ. ಅದೃಷ್ಟವಶಾತ್‌ ಈ ಯುವತಿ ಬಚಾವ್‌ ಆಗಿದ್ದು, ಇಡೀ ಘಟನೆಯ ಬಗ್ಗೆ ಕೇರಳ ಹೈಕೋರ್ಟ್‌ಗೆ ದೂರನ್ನೂ ನೀಡಿದ್ದಾಳೆ. 

Advertisement

ಈ ಸಂಬಂಧ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎರ್ನಾಕುಳಂ ಗ್ರಾಮಾಂತರ ಎಸ್‌ಪಿ ಎ.ವಿ. ಜಾರ್ಜ್‌, “ಸೌದಿಯಲ್ಲಿ ಮಹಿಳೆಯನ್ನು ರಕ್ಷಿಸಲಾಗಿದೆ. ಬಂಧಿಸಲಾಗಿರುವ ಫ‌ವಾಜ್‌ ಜಮಾಲ್‌, ಮೊಹಮ್ಮದ್‌ ಸಯೀದ್‌ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇನ್ನೂ ಎಂಟು ಮಂದಿಯ ಶೋಧ ನಡೆಸಲಾಗುತ್ತಿದೆ’ ಎಂದಿದ್ದಾರೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ಗುಜರಾತ್‌ನಲ್ಲಿ ಹುಟ್ಟಿ, ಬೆಳೆದು ಬೆಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಕೇರಳದ ಪತ್ತನಂತಿಟ್ಟ ಮೂಲದ ಅಕ್ಷರಾ ಬೋಸ್‌(24)ಗೆ 2015ರಲ್ಲಿ  ಮೊಹಮ್ಮದ್‌ ರಿಯಾಜ್‌(26) ಎಂಬವನ ಪರಿಚಯವಾಗಿತ್ತು. ಪರಿಚಯ ದೈಹಿಕ ಸಂಬಂಧದವರೆಗೂ ವಿಸ್ತರಿಸಿತ್ತು. ಈ ಸಂದರ್ಭ ಆತ ಆಕೆಗೆ ಅರಿವಿಲ್ಲದಂತೆ ವೀಡಿಯೋ ತೆಗೆದು ಈ ಮೂಲಕ ಬ್ಲ್ಯಾಕ್‌ವೆುàಲ್‌ ಶುರು ಮಾಡಿದ್ದ. ಅಲ್ಲದೆ ಈಕೆಯನ್ನು ಕೇರಳದಲ್ಲಿರುವ ಉತ್ತರ ಪರವೂರಿಗೆ ಕರೆದೊಯ್ದು ಬಲವಂತವಾಗಿ ಮದ್ರಸಾವೊಂದಕ್ಕೆ ಸೇರಿಸಿ ಕುರಾನ್‌ ಕಲಿಯುವಂತೆ ಮಾಡಿದ್ದ. ಇಲ್ಲಿ ರಿಯಾಜ್‌ ಆಣತಿಯಂತೆ ಆಕೆಗೆ ಇಬ್ಬರು ಚಿತ್ರಹಿಂಸೆ ನೀಡಿ ಬಲವಂತವಾಗಿ ಮತಾಂತರ ಮಾಡಿಕೊಂಡಿದ್ದಾರೆ. ಇದಾದ ಮೇಲೆ 2016ರ ಮೇನಲ್ಲಿ ಇವರಿಬ್ಬರು ಮೌಲ್ವಿಯೊಬ್ಬರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಆದರೆ ಕೆಲವು ದಿನಗಳಲ್ಲೇ ಆಕೆ ತನ್ನ ಗಂಡನ ಕೈಯಿಂದ ತಪ್ಪಿಸಿಕೊಂಡು ಪೋಷಕರ ಮನೆಗೆ ಮರಳಿದ್ದಳು. ಈ ಸಂದರ್ಭ ಆತ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಹಾಕಿ, ಆಕೆಯ ಪೋಷಕರು ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಹೇಳಿದ್ದ. ಅನಂತರ ಆಕೆಗೆ ಬೆದರಿಕೆಯೊಡ್ಡಿ ಅನಿವಾರ್ಯವಾಗಿ ಆತನ ಜತೆಗೆ ಹೋಗುವಂತೆ ಮಾಡಿಕೊಂಡಿದ್ದ. 2017ರ ಆಗಸ್ಟ್‌ನಲ್ಲಿ ಸೌದಿ ಅರೇಬಿಯಾಗೆ ಕರೆದೊಯ್ದಿದ್ದ. ಅಲ್ಲಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡಲು ಶುರು ಮಾಡಿದ್ದ. ಈಗಲೂ ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.

ಈ ಎಲ್ಲ ಘಟನೆಗಳಾದ ಮೇಲೆ ಐಸಿಸ್‌ ಉಗ್ರರಿಗೆ ತನ್ನನ್ನು ಮಾರಾಟ ಮಾಡಲು ಪತಿ, ಇತರರೊಂದಿಗೆ ಸೇರಿ ಮಾತುಕತೆ ನಡೆಸುತ್ತಿದ್ದ ವಿಚಾರವೂ ಗೊತ್ತಾಯಿತು. ಇದೆಲ್ಲ ಗೊತ್ತಾದ ಬಳಿಕ ಅಕ್ಷರಾ ಬೋಸ್‌ ಕೇರಳ ಹೈಕೋರ್ಟ್‌ನಲ್ಲಿ ಎನ್‌ಐಎ ತನಿಖೆ, ಮದುವೆಯ ರದ್ದತಿಗಾಗಿ ಅರ್ಜಿ ಸಲ್ಲಿಸಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next