Advertisement
ಭಾನುವಾರ ನಡೆದ ಕುರಿಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ಡಿ.ಪಿ.ಆರ್ ಆಗಿದೆ. ಶೇ. 25 ಸಹಾಯಧನದ ಜೊತೆಗೆ ಶೇ.50 ಸಾಲ ನೀಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿರುವುದಾಗಿ ಅವರು ತಿಳಿಸಿದರು.
Related Articles
Advertisement
ಮೌಲ್ಯವೃದ್ಧಿ ಆಗಬೇಕು: ಸುಲಭವಾಗಿ ಬ್ಯಾಂಕ್ ಖಾತೆ ತೆರೆದು ಕುರಿ ಸಾಕಾಣಿಕೆಗೆ ಸಹಕಾರಿ ಆಗಬೇಕು. ರಫ್ತುದಾರರೊಂದಿಗೆ ನೇರವಾಗಿ ಟೈ ಅಪ್, ಒಪ್ಪಂದ ಮಾಡಿಕೊಳ್ಳಬೇಕು. ಕುರಿ ಮತ್ತು ಕುರಿ ಮಾಂಸ ದೊಡ್ಡ ಆರ್ಥಿಕತೆಯಾಗಬೇಕು. ಇದಕ್ಕೊಂದು ಹೊಸ ಆಯಾಮ ಸಿಗಲಿದೆ. ಕೆಎಂಎಫ್ ಕಟ್ಟಿದಂತೆಯೇ ಮಾಂಸ ಉತ್ಪಾದನೆ ದೊಡ್ಡ ಆರ್ಥಿಕತೆಯಾಗಬೇಕು. ಹಾಲು, ಮಾಂಸದ ಗುಣಮಟ್ಟ ಹೆಚ್ಚಿಸುವುದಲ್ಲದೆ ಮೌಲ್ಯವೃದ್ಧಿ ಮಾಡುವಂತಾಗಬೇಕು. ಈ ಕುರಿತಂತೆ 8 -10 ದಿನಗಳಲ್ಲಿ ಆದೇಶ ಹೊರಡಿಸುವುದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಗೋ ಮತ್ತು ಕುರಿ ಸಾಕಾಣಿಕೆ ಪ್ರಮುಖವಾದದ್ದು. ನಮ್ಮಲ್ಲಿ ಶೇ.70 ಬಯಲುಸೀಮೆ ಇದೆ. ಒಣ ಹವೆ ಹೆಚ್ಚಿದ್ದು, ಹಸಿರು ಹುಲ್ಲು ಮೇಯುವ ಪ್ರಾಣಿಗಳ ಸಂಖ್ಯೆ ಇಲ್ಲಿ ಹೆಚ್ಚು. ನಮ್ಮ ಆಸ್ತಿ ಇದು. ಇದರ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯೂ ಇದೆ. ಕೋಳಿ ಮತ್ತು ಕುರಿಗೆ ಬೇಡಿಕೆ ಇದೆ. ಗೋ ಮಾಂಸಕ್ಕೆ ಧಾರ್ಮಿಕ ಮತ್ತಿತರ ಕಾರಣಗಳಿಂದ ಬೇಡಿಕೆ ಕಡಿಮೆ ಇದೆ. ಕುರಿ ಮಾಂಸ ವಿದೇಶಕ್ಕೆ ರಫ್ತು ಆಗುತ್ತದೆ. ಆದರೆ ಕುರಿಗಾಹಿಗೆ ಈ ಲಾಭ ಮುಟ್ಟುತ್ತಿಲ್ಲ. ಏಕೆಂದರೆ ಅವರು ಸಂಘಟಿತರಾಗಿಲ್ಲ. ಸಾಮಾಜಿಕವಾಗಿಯೂ ಸಮಾಜ ಅವರನ್ನು ಗುರುತಿಸದೆ ದೂರ ಇಟ್ಟಿದೆ. ಇದು ನಮ್ಮ ದುರ್ದೈವ ಎಂದು ಹೇಳಿದರು.
ಈ ಬಾರಿಯ ಆಯವ್ಯಯದಲ್ಲಿ ಕುರಿಗಾರಿಗಳಿಗೆ ಅನುಗ್ರಹ ಯೋಜನೆ ಪುನಃ ಜಾರಿ ಮಾಡಿದ್ದೇವೆ. ಕುರಿಗಳ ಹಟ್ಟಿ ನಿರ್ಮಿಸಲು ಅನುದಾನ ನೀಡಲಾಗಿದೆ. ಇದರಿಂದ 5-6 ಲಕ್ಷ ಜನರಿಗೆ ಅನುಕೂಲವಾಗಲಿದೆ, ಸ್ಥಿರವಾದ ಬದುಕು ಸಿಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.