Advertisement

ವೈಚಾರಿಕ ಚಿಂತನೆ‌ಗಳಿಂದ ಪರಿವರ್ತನೆ: ರವೀಂದ್ರನಾಥ

04:49 PM Jun 16, 2018 | Team Udayavani |

ಮಾನ್ವಿ: ಇಂದಿನ ಮನುಕುಲ ಬಸವಣ್ಣನವರ ವೈಚಾರಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ
ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ರವೀಂದ್ರನಾಥ ಹೇಳಿದರು.

Advertisement

ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನದಿಂದ ಪಟ್ಟಣದ ಶಾದಿಮಹಲ್‌ ನಲ್ಲಿ ಹಮ್ಮಿಕೊಂಡಿದ್ದ ಚೆನ್ನಬಸವಪ್ಪ ಬೆಟ್ಟದೂರು ಅವರ 10ನೇ ಪುಣ್ಯಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚೆನ್ನಬಸವಪ್ಪ ಬೆಟ್ಟದೂರು ಅವರು ಬಸವಣ್ಣನವರ ತತ್ವ ಸಿದ್ಧಾಂತದಂತೆ ಕೃಷಿ, ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರು. ಶರಣ ಧರ್ಮದ ಜೊತೆಗೆ ರೈತಪರ ಹೋರಾಟಗಳನ್ನು ನಡೆಸಿ ಈ ಭಾಗದಲ್ಲಿ ವಚನ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬಸವಣ್ಣವರು ವೈಚಾರಿಕ ಚಿಂತನೆಗಳನ್ನು ಕೇವಲ ಘೋಷಿಸಲಿಲ್ಲ. ನುಡಿದಂತೆ ನಡೆದು ಇತರೆ ಕೆಳ ವರ್ಗದವರಿಗೆ ಶಿಕ್ಷಣ, ಆಚಾರ, ವಿಚಾರಗಳು ನಿತ್ಯ ಬದುಕಿನ ಮಾರ್ಗಗಳಾಗಿದ್ದವು. ಬಸವಣ್ಣನವರು ರಾಜಕೀಯ ರಂಗದಲ್ಲಿ
ಪ್ರಧಾನಿಯಾದರೂ ಬಹಿರಂಗದಲ್ಲಿ ತೋರಿಸಿಕೊಂಡಿರಲಿಲ್ಲ.  ಆದರೆ ಇಂದಿನ ರಾಜಕಾರಣಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು, ಕಳೆದ 10 ವರ್ಷಗಳಿಂದ
ಪ್ರತಿಷ್ಠನಾದಿಂದ ಉತ್ತಮ ವೈಚಾರಿಕ ಕೃತಿಗಳನ್ನು ಆಯ್ಕೆ ಮಾಡಿ ಲೇಖಕರನ್ನು ಪುರಸ್ಕರಿಸಲಾಗುತ್ತಿದೆ. ನಮ್ಮ ತಂದೆ
ಬಸವಣ್ಣನವರ ತತ್ವಗಳನ್ನೇ ನಂಬಿ ಬದುಕಿದವರು ಎಂದ ಅವರು, ತಮ್ಮ ತಂದೆಯ ವಕೀಲ ವೃತ್ತಿ, ರೈತ ಹೋರಾಟಗಳ ಜೀವನ ಸಾಧನೆಗಳ ಕುರಿತು ಮಾತನಾಡಿದರು.

ಸ್ವರಾಜ್‌ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗರತ್ನಮ್ಮ ಪಾಟೀಲ ಮಾತನಾಡಿದರು. ಅಮರಮ್ಮ
ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನದ 2016 ವಚನ ಸಾಹಿತ್ಯ ಹಾಗೂ ವೈಚಾರಿಕ ಸಾಹಿತ್ಯ ಪ್ರಶಸ್ತಿಯನ್ನು “ಉಳುವವರ ಪರ ವಕಾಲತು’ ಕೃತಿಯ ಸಾಹಿತಿ, ಕೃಷಿ ವಿಜ್ಞಾನಿ ಡಾ| ಟಿ.ಎಸ್‌. ಚನ್ನೇಶ ಅವರಿಗೆ ನೀಡಲಾಯಿತು.
10ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 15ನೇ ರ್‍ಯಾಂಕ್‌ ಪಡೆದ ಕುಮಾರ ಅಲ್ಲಮಪ್ರಭು ಅವರನ್ನು ಗೌರವಿಸಲಾಯಿತು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next