Advertisement

ಮತಾಂತರದ ವಿವಾಹ ಕಾನೂನು ಬಾಹಿರ; ಹೊಸ ಕಾಯ್ದೆಗೆ ಹರ್ಯಾಣ ಗವರ್ನರ್ ಅಂಕಿತ

03:26 PM Dec 20, 2022 | Team Udayavani |

ಚಂಡೀಗಢ್: ಹರ್ಯಾಣದಲ್ಲಿ ಇನ್ಮುಂದೆ ಮತಾಂತರದ ವಿವಾಹಕ್ಕೆ ಅವಕಾಶ ಇಲ್ಲ. ಒಂದು ವೇಳೆ ಯಾರಾದರೂ ಈ ಕಾಯ್ದೆಯನ್ನು ಉಲ್ಲಂಘಿಸಿದರೆ, ಅಂತಹ ವ್ಯಕ್ತಿ 3ರಿಂದ 10ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮರೆಗುದ್ದಿ ಏತ ನೀರಾವರಿ ಯೋಜನೆಗೆ ಶೀಘ್ರ ಅನುಮೋದನೆ: ಗೋವಿಂದ ಕಾರಜೋಳ

ಹರ್ಯಾಣದಲ್ಲಿ ಕಳೆದ 4 ವರ್ಷಗಳಲ್ಲಿ 127 ಬಲವಂತದ ಮತಾಂತರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ನಂತರ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ “ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ-2022” ಜಾರಿಗೆ ಶಿಫಾರಸು ಮಾಡಿದ್ದು, ಇದೀಗ ಆ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದಾಗಿ ವರದಿ ವಿವರಿಸಿದೆ.

ರಾಜ್ಯದಲ್ಲಿ ಜಾರಿಗೊಂಡಿರುವ ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ-2022 ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಬಲವಂತದ ಮತಾಂತರ ಪ್ರಕರಣದ ಬಗ್ಗೆ ಸಂತ್ರಸ್ತರು ಮತ್ತು ಆರೋಪಿ ವಿರುದ್ಧ ಕೋರ್ಟ್ ಕ್ರಮ ತೆಗೆದುಕೊಳ್ಳಲು ಕಾಯ್ದೆ ನೆರವಾಗಲಿದೆ ಎಂದು ವರದಿ ತಿಳಿಸಿದೆ.

ಬಲವಂತದ ಮತಾಂತರ-ಕೋರ್ಟ್ ಮೊರೆ ಹೋಗಬಹುದು:

Advertisement

ಒಂದು ವೇಳೆ ಬಲವಂತದ ಮತಾಂತರದ ವಿವಾಹದ ನಂತರ ಮಗು ಜನಿಸಿದ ಮೇಲೆ ಮಹಿಳೆ ಅಥವಾ ಪುರುಷ ವಿವಾಹದ ಬಗ್ಗೆ ಅಸಮಾಧಾನ ಇದ್ದರೆ ಇಬ್ಬರೂ ಕೋರ್ಟ್ ಮೊರೆ ಹೋಗಬಹುದು. ಆಗ ಕೋರ್ಟ್ ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಜೀವನಾಂಶ ನೀಡುವಂತೆ ಆದೇಶ ನೀಡಲಿದೆ. ಇದರಲ್ಲಿ ಕಾಯ್ದೆಯ 6ರ ಅಡಿಯಲ್ಲಿ ವಿವಾಹ ಅಸಿಂಧು ಎಂದು ಘೋಷಿಸುವ ನಿಬಂಧನೆಯೂ ಇದೆ ಎಂದು ವರದಿ ವಿವರಿಸಿದೆ.

ಬಲವಂತದ ಮತಾಂತರಕ್ಕೆ ಶಿಕ್ಷೆಯ ಪ್ರಮಾಣ:

*ಬಲವಂತದ ಮತಾಂತರಕ್ಕೆ 1ರಿಂದ 5 ವರ್ಷ ಜೈಲುಶಿಕ್ಷೆ

*ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ

*ವಿವಾಹದ ವಿಚಾರದಲ್ಲಿ ಧರ್ಮದ ವಿಚಾರ ಮುಚ್ಚಿಟ್ಟರೆ 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ

*ಕನಿಷ್ಠ ಮೂರು ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಬಹುದಾಗಿದೆ.

*ಸಾಮೂಹಿಕ ಧಾರ್ಮಿಕ ಮತಾಂತರ ಪ್ರಕರಣದಲ್ಲಿ 10 ವರ್ಷಗಳವರೆಗೆ ಜೈಲುಶಿಕ್ಷೆ

ಜಿಲ್ಲಾಧಿಕಾರಿ ಮಾಹಿತಿ ನೀಡಬೇಕು:

ಮತಾಂತರ ವಿಚಾರದಲ್ಲಿ ವಿಭಾಗೀಯ ಕಮಿಷನರ್ ಗೆ ಮನವಿ ಸಲ್ಲಿಸುವ ಅವಕಾಶವಿದೆ. ಒಂದು ವೇಳೆ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದರೆ, ಆಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗುತ್ತದೆ. ಒಂದು ವೇಳೆ ಆಕ್ಷೇಪ ಬಂದರೆ ಇಲ್ಲವೇ 30ದಿನದೊಳಗೆ ಲಿಖಿತ ದೂರು ಬಂದರೆ, ಜಿಲ್ಲಾಧಿಕಾರಿಯವರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಮತಾಂತರ ಘಟನೆಯಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧರಿಸುತ್ತಾರೆ. ನಂತರ 30ದಿನದೊಳಗೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ವಿಭಾಗೀಯ ಕಮಿಷನರ ಗೆ ಮನವಿ ಸಲ್ಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next