Advertisement
ಅನುಮಾನವೇ ಇಲ್ಲ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಯಾರೇ ಗೆದ್ದರೂ ಅಲ್ಲಿ ಇತಿಹಾಸ ನಿರ್ಮಾಣವಾಗುತ್ತಿತ್ತು. ಯಾರೇ ಕಪ್ ಎತ್ತಿದರೂ ಕ್ರಿಕೆಟ್ ಜಗತ್ತು ಸಂಭ್ರ ಮಿಸುತ್ತಿತ್ತು. ಇಂಗ್ಲೆಂಡ್ ಇಡೀ ಜಗತ್ತಿಗೆ ಕ್ರಿಕೆಟ್ ಕಲಿಸಿ ಗುರುವಿನ ಸ್ಥಾನ ದಲ್ಲಿದ್ದರೆ, ನ್ಯೂಜಿಲ್ಯಾಂಡ್ “ಜೀರೋ ಎನಿಮಿ’ಯನ್ನು ಹೊಂದಿರುವ ತಣ್ಣಗಿನ ತಂಡ. ಕೊನೆಗೂ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿ ಶಾಪ ವಿಮೋಚನೆ ಮಾಡಿಕೊಂಡಿತು. ನ್ಯೂಜಿ ಲ್ಯಾಂಡ್ ಸತತ ಎರಡೂ ಫೈನಲ್‌ಗಳಲ್ಲಿ ಎಡವಿ ಕಣ್ಣೀರಿಟ್ಟಿದ್ದು ಎಲ್ಲರಿಗೂ ಬೇಸರ ತರಿಸಿತು.
ವಿಶ್ವಕಪ್‌ನಲ್ಲಷ್ಟೇ ಏಕೆ, ಏಕದಿನ ಇತಿಹಾಸದಲ್ಲೇ ಚಾಂಪಿಯನ್ ತಂಡವೊಂದನ್ನು ಆಯ್ಕೆ ಮಾಡಲು “ಸೂಪರ್ ಓವರ್’ ಮೊರೆ ಹೋಗ ಬೇಕಾಯಿತು. ಇದು ಫೈನಲ್ ಹಣಾ ಹಣಿಯ ತೀವ್ರತೆಗೆ ಸಾಕ್ಷಿ.
“ಫೈನಲ್ ಅಂದರೆ ಇದಪ್ಪಾ…’ ಎಂದು ಎಲ್ಲರೂ ಪ್ರಶಂಸಿಸುವಂತಾಯಿತು. ಬಳಿಕ ಸೂಪರ್ ಓವರ್ ಕೂಡ ಟೈ ಆದಾಗ ಕ್ರಿಕೆಟ್ ಜಗತ್ತೇ ತುದಿಗಾಲಲ್ಲಿ ನಿಂತಿತು. ಆಗ ಅಳವಡಿಸಿದ್ದೇ “ಬೌಂಡರಿ ಕೌಂಟ್’ ನಿಯಮ. ಅಂದರೆ, ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡಕ್ಕೆ ಕಿರೀಟ! ಇದೆಂಥ ಹುಚ್ಚು ನಿಯಮ. ಬೌಂಡರಿ ಲೆಕ್ಕಾಚಾರವೇ ಏಕೆ, ವಿಕೆಟ್ ಉರುಳಿದ್ದನ್ನೇ ಮಾನದಂಡವಾಗಿ ಪರಿಗಣಿಸಬಹುದಿತ್ತಲ್ಲ? ಆಗ ನ್ಯೂಜಿಲ್ಯಾಂಡ್ ಚಾಂಪಿಯನ್ ಆಗುತಿತ್ತಲ್ಲವೇ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ಇಲ್ಲವೇ “ಜಂಟಿ ಚಾಂಪಿಯನ್ಸ್’ ಎಂದು ಘೋಷಿಸಿದ್ದರೆ ವಿಶ್ವಕಪ್‌ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು ಎಂಬ ವಾದವೂ ಕೇಳಿಬರುತ್ತಿದೆ.
Related Articles
ಪಂದ್ಯ ಒಮ್ಮೆ ಆಚೆಗೆ, ಒಮ್ಮೆ ಈಚೆಗೆ ಸಾಗುತ್ತಿ ದ್ದಾಗ ಅಂಪಾಯರ್ ಕುಮಾರ ಧರ್ಮಸೇನ ಮಾಡಿದ ಎಡವಟ್ಟು ಇನ್ನೊಂದು ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂತಿಮ ಓವರ್‌ನಲ್ಲಿ “ಓವರ್ ತ್ರೋ’ ಒಂದಕ್ಕೆ ನೀಡಲಾದ 6 ರನ್ನಿನಿಂದ ನ್ಯೂಜಿಲ್ಯಾಂಡಿನ ಅವಕಾಶ ತಪ್ಪಿತು ಎಂಬುದೇ ಮತ್ತೂಂದು ವಿವಾದದ ಮೂಲ. ಐಸಿಸಿ ನಿಯಮ 19.8ರಂತೆ, ಎರಡನೇ ರನ್ನಿಗಾಗಿ ಸ್ಟೋಕ್ಸ್ ಮತ್ತು ರಶೀದ್ ಓಡಿದ್ದನ್ನು ಪರಿಗಣಿಸುವಂತಿಲ್ಲ. ಗಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಆಟಗಾರರಿಬ್ಬರೂ ಎರಡನೇ ರನ್ನಿಗಾಗಿ ಓಟ ಆರಂಭಿಸಿದ್ದರೇ ಹೊರತು ಪರಸ್ಪರ ದಾಟಿರಲಿಲ್ಲ. ಹೀಗಾಗಿ, ಇದಕ್ಕೆ ಒಂದು ರನ್ನಷ್ಟೇ ನೀಡಬೇಕಿತ್ತು ಎನ್ನುತ್ತದೆ ನಿಯಮ. ಆಗ ಇಂಗ್ಲೆಂಡಿಗೆ 4 ಓವರ್ ತ್ರೋ ಸಹಿತ 5 ರನ್ ಮಾತ್ರ ಲಭಿಸುತ್ತಿತ್ತು. ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು.
Advertisement
ಶತಮಾನದ ಫೈನಲ್ಇಂಗ್ಲೆಂಡಿನ ಬಲಿಷ್ಠ ಬ್ಯಾಟಿಂಗ್ ಸರದಿಗೆ ಹೋಲಿಸಿದಾಗ ಈ 240 ಚಿಲ್ಲರೆ ರನ್ ಯಾವ ಮೂಲೆಗೂ ಅಲ್ಲ. ಆದರೂ ತನ್ನ ಅಮೋಘ ಬೌಲಿಂಗ್, ಅದ್ಭುತ ಫೀಲ್ಡಿಂಗ್ ಹಾಗೂ ಜಾಣ್ಮೆಯ ನಾಯಕತ್ವದಿಂದ ನ್ಯೂಜಿಲ್ಯಾಂಡ್ ತಿರುಗೇಟು ನೀಡಿದ ಪರಿ ಪ್ರಶಂಸನೀಯ. ಕ್ರೀಸ್ ಆಕ್ರಮಿಸಿ ಕೊಂಡು ಇಂಗ್ಲೆಂಡಿನ ಹೋರಾಟ ಜಾರಿಯಲ್ಲಿರಿಸಿದ ಬೆನ್ ಸ್ಟೋಕ್ಸ್ ಆಟಕ್ಕೆ ಸಲಾಂ ಹೇಳಲೇಬೇಕು. ಈ ಕಾರಣ ಕ್ಕಾಗಿ ಫೈನಲ್ ಪರಾಕ್ರಮ ನಿಜಕ್ಕೂ ಅಸಾಮಾನ್ಯ. ಈ ಕಾರಣಕ್ಕಾಗಿ ಇದು “ಶತಮಾನದ ಫೈನಲ್’ ಎಂದೇ ಪರಿಗಣಿತವಾಯಿತು.