Advertisement

ಲವ್‌ ಜಿಹಾದ್‌ ಪ್ರಕರಣ ವಿಚಾರಣೆ ವೇಳೆ ವಾಗ್ವಾದ

07:25 AM Oct 10, 2017 | Team Udayavani |

ನವದೆಹಲಿ: ತೀವ್ರ ಚರ್ಚೆಗೊಳಗಾಗಿರುವ ಕೇರಳದ ಲವ್‌ ಜಿಹಾದ್‌ ಪ್ರಕರಣದ ವಿಚಾರಣೆ ವೇಳೆ ಎರಡೂ ಕಡೆಯ ನ್ಯಾಯವಾದಿಗಳು ವಾಗ್ವಾದಕ್ಕಿಳಿದ ಘಟನೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. 

Advertisement

ಪ್ರತಿವಾದಿ ವಕೀಲ ದುಶ್ಯಂತ್‌ ದವೆ ಅವರು, ವಾದ ಮಂಡಿಸುವ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥರ ಹೆಸರನ್ನೂ ಎಳೆದು ತಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ವಕೀಲರ ಮಧ್ಯೆ ವಾಗ್ವಾದ ತಾರಕಕ್ಕೇ ರುತ್ತಿ ದ್ದಂತೆ, ಒಂದು ಹಂತದಲ್ಲಿ ತೀವ್ರ ಆಕ್ರೋಶ ಕ್ಕೊಳಗಾದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು,  ಪ್ರಕರಣಕ್ಕೆ ಸಂಬಂಧವಿಲ್ಲದ ವಾದಗಳನ್ನು ಇಲ್ಲಿ ಎಳೆದು ತರಬೇಡಿ. ಇಂಥ ವಾದವನ್ನು ಸಹಿಸಲಾಗದು ಎಂದು ಆಕ್ಷೇ ಪಿಸಿ ವಿಚಾರಣೆಯನ್ನು ಮುಂದೂಡಿದ ಘಟನೆ ನಡೆದಿದೆ.

ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಫಿನ್‌ ಜಹಾನ್‌ರನ್ನು ವಿವಾಹವಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಗೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಎನ್‌ಐಎ ತನಿಖೆ ಆದೇಶವನ್ನು ಹಿಂಪಡೆಯುವಂತೆ ಶಫಿನ್‌ ಜಹಾನ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next