Advertisement

ಬ್ರ್ಯಾಂಚ್ ಬದಲು ವಿವಾದ: ತಾಂತ್ರಿಕ ವಿವಿಗೆ ನೋಟಿಸ್‌

12:30 AM Dec 29, 2018 | Team Udayavani |

ಬೆಂಗಳೂರು: ಇಂಜಿನಿಯರಿಂಗ್‌ ಕೋರ್ಸ್‌ನ 3ನೇ ಸೆಮಿಸ್ಟರ್‌ನಲ್ಲಿ ಬ್ರ್ಯಾಂಚ್‌ ಬದಲಿಸಿದ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೈಕೋರ್ಟ್‌ ಶುಕ್ರವಾರ ತುರ್ತು ನೋಟಿಸ್‌ 
ಜಾರಿಗೊಳಿಸಿದೆ.

Advertisement

ಈ ಕುರಿತಂತೆ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಬಿ.ಇ 3ನೇ ಸೆಮಿಸ್ಟರ್‌ ವಿದ್ಯಾರ್ಥಿ ಬಿ. ಸಾತ್ವಿಕ್‌ ಸೇರಿ ವಿವಿಧ ವಿಭಾಗಗಳ 14 ವಿದ್ಯಾರ್ಥಿಗಳು ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ತಾಂತ್ರಿಕ ವಿವಿಗೆ ತುರ್ತು ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು. ಅದೇ ರೀತಿ ಅರ್ಜಿಯ ಅಂತಿಮ ಇತ್ಯರ್ಥ ಕ್ಕೊಳಪಡುವಂತೆ ಬ್ರ್ಯಾಂಚ್‌ ಬದಲಿಸಿದ ವಿದ್ಯಾರ್ಥಿಗಳಿಗೆ ಇದೇ ಡಿ.31ರಿಂದ ಆರಂಭಗೊಳ್ಳು ತ್ತಿರುವ 3ನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷೆಗೆ ಅವರು ಬದಲಾಯಿಸಿಕೊಂಡಿರುವ ಬ್ರ್ಯಾಂಚ್‌ನ
ಪರೀಕ್ಷೆ ಬರೆಯಲು ಅವಕಾಶ ನೀಡುವಂತೆಯೂ ನ್ಯಾಯಪೀಠ ವಿವಿಗೆ ನಿರ್ದೇಶನ ನೀಡಿತು. 

ವಿಚಾರಣೆ ವೇಳೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಇಂಜಿನಿಯರಿಂಗ್‌ ಕೋರ್ಸ್‌ನ 3ನೇ ಸೆಮಿಸ್ಟರ್‌ನಲ್ಲಿ ಬ್ರ್ಯಾಂಚ್‌ ಬದಲಿಸಿಕೊಳ್ಳಲು ಅವಕಾಶವಿದೆ. ಅದರಂತೆ 2017ರಲ್ಲಿ ಇನ್‌ಫಾರ್ಮೇಷನ್‌ ಸೈನ್ಸ್‌ ಆ್ಯಂಡ್‌ ಇಂಜಿನಿಯರಿಂಗ್‌ ಬ್ರ್ಯಾಂಚ್‌ ಆಯ್ಕೆ ಮಾಡಿಕೊಂಡಿದ್ದ ಅರ್ಜಿದಾರ ವಿದ್ಯಾರ್ಥಿ 3ನೇ ಸೆಮಿಸ್ಟರ್‌ನಲ್ಲಿ ಅದನ್ನು ಬದಲಿಸಿಕೊಂಡು
ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಇಂಜಿನಿಯರಿಂಗ್‌ ಬ್ರ್ಯಾಂಚ್‌ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಲೇಜು ಒಪ್ಪಿಗೆ ನೀಡಿದೆ. 2018ರ ಆಗಸ್ಟ್‌ 30ರಿಂದ 3ನೇ ಸೆಮಿಸ್ಟರ್‌ ತರಗತಿಗಳು ಆರಂಭಗೊಂಡಿವೆ. ನಿಗದಿತ ಶುಲ್ಕ ಪಾವತಿಸಿ ಬದಲಾಯಿಸಿಕೊಂಡ ಬ್ರ್ಯಾಂಚ್‌ನ 3ನೇ ಸೆಮಿಸ್ಟರ್‌ನ ಎಲ್ಲ ಥಿಯೇರಿ, ಪ್ರಾಕ್ಟಿಕಲ್‌ ಮತ್ತು ಇಂಟರ್‌ನಲ್‌ ಅಸೆಸ್‌ಮೆಂಟ್‌ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಬ್ರ್ಯಾಂಚ್‌
ಬದಲಿಸಿದ್ದರ ಬಗ್ಗೆ ಕಾಲೇಜು ವಿವಿಗೆ ಅಗತ್ಯ ಮಾಹಿತಿ ಸಹ ರವಾನಿಸಿದೆ. ಆದರೆ, ಅಂತಿಮ ಪರೀಕ್ಷೆಗಳು ಡಿ.31ರಂದು 
ಆರಂಭಗೊಳ್ಳಲಿದ್ದು, ಇಲ್ಲಿವರೆಗೆ ವಿವಿ ಏನನ್ನೂ ಹೇಳಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಗೊಂಡಿದ್ದಾರೆ.

ಹೈಕೋರ್ಟ್‌ನಲ್ಲಿ ಸ್ಟಾಫ್ ನರ್ಸ್‌ ಹುದ್ದೆ ಮೀಸಲು ವಿವಾದ 
ಬೆಂಗಳೂರು: ಹೈದರಾಬಾದ್‌ ಕರ್ನಾಟಕೇತರ ಕೋಟಾದಲ್ಲಿ 3ಎ ಕೆಟಗರಿಗೆ ಮೀಸಲಾಗಿದ್ದ ಸ್ಟಾಫ್ ನರ್ಸ್‌ ಹುದ್ದೆಗೆ ಹೈ-ಕ ಕೋಟಾದ ಅಭ್ಯರ್ಥಿ ಞಯನ್ನು ಆಯ್ಕೆ ಮಾಡಿದ ವಿವಾದಕ್ಕೆ ಸಂಬಂದಿಸಿದಂತೆ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಗೆ ಹೈಕೋರ್ಟ್‌ ಶುಕ್ರ ವಾರ
ತುರ್ತು ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತಂತೆ ಅವಕಾಶವಂಚಿತ ಪಿ.ಸಿ.ರಾಜ ಶೇಖರ ರೆಡ್ಡಿ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಿದ್ವಾಯಿ
ಕ್ಯಾನ್ಸರ್‌ ಸಂಸ್ಥೆ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಆಯ್ಕೆಯಾದ ಅಭ್ಯರ್ಥಿ ಪ್ರದೀಪ್‌ ಕಂದಗುಳಿಗೆ ತುರ್ತು ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು. 
 
“ನೇಮಕಾತಿಗೆ ಸಂಬಂಧಿಸಿದ ಮುಂದಿನ ಯಾವುದೇ ಪ್ರಕ್ರಿಯೆಯು ಅರ್ಜಿಯ ಅಂತಿಮ ಇತ್ಯರ್ಥಕ್ಕೆ ಒಳಪಡಲಿದೆ’ ಎಂದು ನ್ಯಾಯಪೀಠ ಹೇಳಿದೆ. ಸ್ಟಾಫ್ ನರ್ಸ್‌ ಸೇರಿ ವಿವಿಧ ಹುದ್ದೆಗಳ ಭರ್ತಿಗೆ 2018ರ ಮೇ 22ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸ್ಟಾಫ್ ನರ್ಸ್‌ ಹುದ್ದೆ ಹೈದರಾಬಾದ್‌ ಕರ್ನಾಟಕೇತರ ಕೋಟಾ ಪ್ರವರ್ಗ 3ಎ ಗೆ ಮೀಸಲಾಗಿತ್ತು. ಅದರಂತೆ ಹೈದರಾಬಾದ್‌ ಕರ್ನಾಟಕೇತರ ಕೋಟಾದ 3ಎ ಕೆಟಗರಿಯಲ್ಲಿ 141 ಅಂಕ ಪಡೆದ ರಾಜಶೇಖರ್‌ ರೆಡ್ಡಿ ಹೆಸರನ್ನು ಮೆರಿಟ್‌ ಪಟ್ಟಿಯಲ್ಲಿ ಪ್ರಕಟಿಸ ಲಾಗಿತ್ತು, ಬಳಿಕ ಪ್ರಕಟಿಸಲಾದ ಹೆಚ್ಚುವರಿ ಪಟ್ಟಿಯಲ್ಲಿ (ಪ್ರಾವಿಜನಲ್‌ ಲಿಸ್ಟ್‌) ರೆಡ್ಡಿ ಹೆಸರು ಕೈ ಬಿಟ್ಟು, 140 ಅಂಕ ಪಡೆದಿದ್ದ ಹೈದರಾಬಾದ್‌ ಕರ್ನಾ ಟಕ ಕೋಟಾದ ಪ್ರದೀಪ್‌ ಕಂದಗುಳಿ
ಹೆಸರು ಸೇರಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next