Advertisement

ರಾಜಸ್ಥಾನ: 300 ವರ್ಷಗಳಷ್ಟು ಹಳೆಯ ದೇವಸ್ಥಾನ ಬುಲ್ಡೋಜರ್ ಬಳಸಿ ಧ್ವಂಸ

07:04 PM Apr 22, 2022 | Team Udayavani |

ಜೈಪುರ: ರಾಜಸ್ಥಾನದ ಅಲ್ವಾರ್‌ನಲ್ಲಿ ರಸ್ತೆ ಅಗಲೀಕರಣದ ವೇಳೆ ಒತ್ತುವರಿ ತೆರವು ವಿಚಾರದಲ್ಲಿ ವಿವಾದ ಆರಂಭವಾಗಿದ್ದು, ದಾರಿಯಲ್ಲಿದ್ದ 300 ವರ್ಷಗಳಷ್ಟು ಹಳೆಯದಾದ ದೇವಸ್ಥಾನವನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದ್ದು, ಬಿಜೆಪಿಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದೆ.

Advertisement

300 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಹೇಗೆ ಅತಿಕ್ರಮಣ ಮಾಡಲು ಸಾಧ್ಯ. ಬಿಜೆಪಿ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದು, ಮೂರು ದಿನಗಳಲ್ಲಿ ವರದಿ ನೀಡಲಿದೆ. ಬಿಜೆಪಿಯವರು ಅಭಿವೃದ್ಧಿಯ ಹೆಸರಿನಲ್ಲಿ ದೇವಸ್ಥಾನವನ್ನು ಹಾಳು ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್‌ಗಢ ಪುರಸಭೆಯಲ್ಲಿ ಬಿಜೆಪಿ ಪ್ರಭಾವ ಇದೆ ಎಂದು ಕಾಂಗ್ರೆಸ್‌ ಸೆಡ್ಡು ಹೊಡೆದು ಈ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಕಿಡಿ ಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ದೇಗುಲದ ಮೇಲೆ ದಾಳಿ ನಡೆಸುತ್ತಿರುವುದು ಅತ್ಯಂತ ವಿಷಾದಕರ.ದೆಹಲಿಯ ಜಹಾಂಗೀರ್ ಪುರಿ ಪ್ರಕರಣದ ಸೇಡು ತೀರಿಸಿಕೊಳ್ಳಲು ರಾಜಸ್ಥಾನ ಸರ್ಕಾರ ಇಂತಹ ಕೃತ್ಯ ಮಾಡುತ್ತಿದೆ. ಕಾಂಗ್ರೆಸ್ ಸೇಡಿನ ಭಾವನೆಯಿಂದ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜಗಢ ಪಟ್ಟಣದ ದೇವಾಲಯವನ್ನು ಜೆಸಿಬಿ ಬಳಸಿ ಕೆಡಹುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದರಿಂದಾಗಿ ವಿಷಯ ವೇಗ ಪಡೆದುಕೊಂಡಿದೆ.

ಮಾಸ್ಟರ್ ಯೋಜನೆಯ ಉಲ್ಲೇಖ
ಮಾಸ್ಟರ್ ಪ್ಲಾನ್ ಪ್ರಕಾರ ರಾಜಗಢದಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಹೇಳುತ್ತಿದೆ. ಹಲವು ವರ್ಷಗಳಿಂದ ಅತಿಕ್ರಮಣ ನಡೆದಿದೆ. ಕಂದಾಯ ದಾಖಲೆ ಪ್ರಕಾರ ಇಲ್ಲಿ ಸುಮಾರು 60 ಅಡಿ ರಸ್ತೆ ಇದೆ. ಇದು 25 ಅಡಿಗಳಷ್ಟು ಒತ್ತುವರಿ ಮಾಡಲಾಗಿದೆ. ಹೀಗಾಗಿ ಜೆಸಿಬಿಯಿಂದ ಒತ್ತುವರಿ ತೆರವು ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement

ರಾಜಗಢ ಪಟ್ಟಣದಲ್ಲಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಜೋಹ್ರಿ ಲಾಲ್ ಮೀನಾ ಹೇಳಿದ್ದಾರೆ. ಇಲ್ಲಿನ ಪುರಸಭೆಯಲ್ಲಿ ಬಿಜೆಪಿ ಬೋರ್ಡ್ ಇದೆ. ಅದಕ್ಕಾಗಿಯೇ ಅವರು ಹೆಚ್ಚು ಹೇಳಲು ಸಾಧ್ಯವಿಲ್ಲ. ಇನ್ನೊಂದೆಡೆ ಆಡಳಿತ ಮಟ್ಟದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷರು. ಪಾಲಿಕೆ ಆಡಳಿತ ಮಂಡಳಿ ಮಟ್ಟದಲ್ಲಿ ಠರಾವು ಪಾಸು ಮಾಡಲಾಗಿದೆ. ವಾಸ್ತವವಾಗಿ 2012ರ ಮಾಸ್ಟರ್ ಪ್ಲಾನ್ ನಲ್ಲಿ 60 ಅಡಿ ರಸ್ತೆಯಾಗಿದ್ದು, ಯೋಜನೆಯನ್ನು ಉಲ್ಲೇಖಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next