Advertisement
ಮಾಜಿ ಸಂಸದ ಜಿ. ಮಾದೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸುಮಲತಾ ಅವರ ಭಾಷಣವನ್ನು ನೋಡುತ್ತಿದ್ದೇನೆ. ಅವರ ಮುಖದಲ್ಲಿ ಅಂಬರೀಷ್ ಕಣ್ಮರೆಯಾದ ನೋವಿನ ಛಾಯೆಯೇ ಕಾಣು ತ್ತಿಲ್ಲ. ನಾಟಕೀಯವಾದ ಸಿನೆಮಾ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ನಾನು ಈ ವರೆಗೂ ಜೋಡೆತ್ತು, ಕಳ್ಳೆತ್ತು ಎಂದು ಎಲ್ಲೂ ಹೇಳಿಲ್ಲ ಎಂದು ಸಿಎಂ ಬುಧವಾರ ಉಲ್ಟಾ ಹೊಡೆದರು.
ರಾಜ್ಯದಲ್ಲೂ ದೊಡ್ಡ ಮಟ್ಟದ ಐಟಿ ದಾಳಿ ನಡೆಯಲಿದೆ ಎಂಬ ಸುಳಿವನ್ನು ಸಿಎಂ ಕುಮಾರಸ್ವಾಮಿ ನೀಡಿದರು. ನನ್ನ ಜತೆ ಆತ್ಮೀಯರಾಗಿರುವ ಬಿಜೆಪಿಯವರೊಬ್ಬರು ಕರೆ ನೀಡಿ ಇದನ್ನು ತಿಳಿಸಿದ್ದಾರೆ. ದಿಲ್ಲಿ ಉಸ್ತು ವಾರಿ ನೋಡಿ ಕೊ ಳ್ಳು ತ್ತಿ ರುವ ಆದಾಯ ತೆರಿಗೆ ಅಧಿಕಾರಿ ಬಾಲ ಕೃಷ್ಣ ಅವರು 250ರಿಂದ 300 ಜನ ಅಧಿಕಾ ರಿಗಳನ್ನು ಕಲೆ ಹಾಕಿಕೊಂಡಿ ದ್ದಾರೆ ಎಂದರು. ನನ್ನ ಹೆಸರಿನ ನೂರು ಸುಮಲತಾರನ್ನು ಕಣಕ್ಕಿಳಿಸಿದರೂ ನಾನು ಹೆದರುವುದಿಲ್ಲ. ಜೆಡಿಎಸ್‌ನವರಿಗೆ ಈಗಾಗಲೇ ಸೋಲಿನ ವಾಸನೆ ಬಂದಿದೆ. ನೇರವಾಗಿ ಚುನಾವಣೆ ಎದುರಿಸಿದರೆ ಗೆಲ್ಲುವುದು ಕಷ್ಟ ಎಂದು ಹೀಗೆ ಮಾಡುತ್ತಿದ್ದಾರೆ.
-ಸುಮಲತಾ ಅಂಬರೀಷ್, ಪಕ್ಷೇತರ ಅಭ್ಯರ್ಥಿ
Related Articles
Advertisement
ಬೆಂಗಳೂರು: ಡಿಬಾಸ್ ಅನ್ನುವುದು ಅಭಿಮಾನಿಗಳು ಕೊಟ್ಟಿರುವ ಭಿಕ್ಷೆ. ಬೇರೆ ಯಾರೂ ಅಲ್ಲ.. ಇದು ನಟ ದರ್ಶನ್ ಮಾತು.ಡಿಬಾಸ್ ಯಾರು ಎಂಬ ಸಿಎಂ ಕುಮಾರಸ್ವಾಮಿಅವರ ಮಾತಿಗೆ ದರ್ಶನ್ ಈಪ್ರತ್ಯುತ್ತರ ನೀಡಿದ್ದಾರೆ. ಸದ್ಯ ನಮ್ಮ ತಲೆಯ ಮೇಲೆ ಅಂಬರೀಶ್ ಎಂಬ ಕೈ ಇಲ್ಲ. ಅದಕ್ಕೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಮಾಡುತ್ತಿರುವ ಟೀಕೆ ಬಗ್ಗೆ ಹೇಳಿದ ದರ್ಶನ್, ನಾನು ಅವತ್ತೇ ಹೇಳಿದ್ದೇನೆ.
ನಾನು ಏನನ್ನೂ ಮಾತಾಡುವುದಿಲ್ಲ. ಕೋಪವನ್ನೂ ಮಾಡಿಕೊಳ್ಳುವುದಿಲ್ಲ. ನೋವನ್ನೂ ತೋಡಿಕೊಳ್ಳುವುದಿಲ್ಲ ಎಂದು. ಅದರಂತೆ ನಾನು ಏನೂ ಮಾತನಾಡುವು
ದಿಲ್ಲ ಎಂದರು. ಏಪ್ರಿಲ್ 2 ರಿಂದ ಪ್ರಚಾರಕ್ಕೆ ಹೋಗುವುದಾಗಿ ಹೇಳಿದರು. ಅಭಿಮಾನಿಗಳಿಗೆ ಮನವಿ: “ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು,ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ. ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾ ಗಲಿ, ವಿಡಿ ಯೋಗಳಾಗಲಿ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿ
ಕೊಡದೆ ಶಾಂತಿ ಕಾಪಾಡಿಕೊಂಡು ಆರಾ ಮಾಗಿರಬೇಕಾಗಿ ನಿಮ್ಮ ನಲ್ಮೆಯ ದಾಸನ ಕಳಕಳಿಯ ವಿನಂತಿ’ ಎಂದು ದರ್ಶನ್ ಟ್ವೀಟ್ ಮಾಡಿ ಶಾಂತಿ ಕಾಪಾಡಿಕೊಳ್ಳುವಂತೆ ಅಭಿ ಮಾನಿಗಳಿಗೆ ಮನವಿ ಮಾಡಿದ್ದಾರೆ.