Advertisement

Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್‌

09:35 PM May 09, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಬೆರಾಸಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರೊಬ್ಬರ ಅಪ್ರಾಪ್ತ ವಯಸ್ಸಿನ ಪುತ್ರ ಮತಗಟ್ಟೆಯಲ್ಲಿ ಬಿಜೆಪಿಗೆ ವೋಟ್‌ ಮಾಡಿರುವ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ವರದಿಗಳ ಪ್ರಕಾರ, ಬಿಜೆಪಿ ಪಂಚಾಯತ್‌ ನಾಯಕರಾದ ವಿನಯ್‌ ಮೆಹ್ರಾ ಮತದಾನದ ವೇಳೆ ತಮ್ಮ ಮಗನನ್ನೂ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಮಗನಿಂದಲೇ ಬಿಜೆಪಿ ಚಿಹ್ನೆಯನ್ನು ಒತ್ತಿಸಿದ್ದಾರೆ. ಇದನ್ನು ಖುದ್ದು ಮೆಹ್ರಾ ಅವರೇ ವಿಡಿಯೋ ಮಾಡಿ, ಅವರದ್ದೇ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ಅವರ ಮಾಧ್ಯಮ ಸಲಹೆಗಾರ ಪಿಯೂಷ್‌ ಬಾಬೆಲೆ ಅವರು ಈ ವಿಡಿಯೋದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿಚಾರ ವಿವಾದಕ್ಕೀಡಾಗಿದೆ.

ಈ ಬಗ್ಗೆ ಮೆಹ್ರಾ ವಿರುದ್ಧ ಎಫ್ಐಆರ್‌ ದಾಖಲಿಸಿ, ಮತಗಟ್ಟೆ ಅಧಿಕಾರಿಯನ್ನು ವಜಾಗೊಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next