ಕೌಲಾಲಂಪುರ: ನಾನು ಭಾರತಕ್ಕೆ ಮರಳುತ್ತಿಲ್ಲ ಎಂದು ವಿವಾದಿತ ಮುಸ್ಲಿಂ ಮತ ಪ್ರಚಾರಕ ಝಾಕೀರ್ ನಾಯ್ಕ್ ಹೇಳಿಕೆ ನೀಡಿದ್ದು, ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗಿರುವವ ವರೆಗೆ ನಾನು ಭಾರತಕ್ಕೆ ಮರಳುವುದಿಲ್ಲ ಎಂದಿದ್ದಾರೆ.
ತನ್ನನ್ನು ಮಲೇಷ್ಯಾದಿಂದ ಗಡಿಪಾರು ಮಾಡಲಾಗಿದೆ ಎನ್ನುವ ಮಾಧ್ಯಮದ ವರದಿಗಳನ್ನು ಝಾಕೀರ್ ತಳ್ಳಿ ಹಾಕಿದ್ದಾರೆ.
ಮಾಧ್ಯಮಗಳ ವರದಿಗಳು ಆಧಾರವಿಲ್ಲದ್ದು ಮತ್ತು ಸುಳ್ಳಿನಿಂದ ಕೂಡಿವೆ ಎಂದು ಝಾಕೀರ್ ಎಎನ್‌ಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
ಗೃಹ ಸಚಿವಾಲಯವೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮಲೇಷ್ಯಾದಿಂದ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದಿದೆ.
ಢಾಕಾ ದಾಳಿ ನಡೆಸಿದ ಐಸಿಸ್ ಉಗ್ರರಿಗೆ ಪ್ರೇರಪಣೆ ನೀಡಿದ ಆರೋಪ ಝಾಕೀರ್ ನಾಯ್ಕ್ ಮೇಲೆ ಕೇಳಿ ಬಂದಿದ್ದು, 2016 ರಿಂದ ಮಲೇಷ್ಯಾದ ಪುತ್ರಜಯದಲ್ಲಿ ನೆಲೆಸಿದ್ದು, ಭಾರತಕ್ಕೆ ಮರಳಿಲ್ಲ.