Advertisement

ಆಗ್ನೇಯ ಪದವೀಧರ ಚುನಾವಣೆ : ನೀತಿ ಸಂಹಿತೆ ಉಲಂಘನೆ ದೂರು ಸಲ್ಲಿಸಲು ಕಂಟ್ರೋಲ್ ರೂಂ ಸ್ಥಾಪನೆ

09:51 PM Oct 12, 2020 | sudhir |

ಚಿಕ್ಕಬಳ್ಳಾಪುರ : ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅ.28 ರಂದು ಮತದಾನ ನಡೆಸಲು ಭಾರತ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಹೊರಡಿಸಿದ್ದು ಚುನಾವಣೆ ನೀತಿ ಸಂಹಿತೆ ಉಲಂಘನೆಗಳ ಪ್ರಕರಣಗಳ ಕುರಿತು ಸಾರ್ವಜನಿಕರು ದೂರು ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

Advertisement

ಅಕ್ಟೋಬರ್ 28ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನದ ಪ್ರಕ್ರಿಯೆ ನಡೆಯಲಿದ್ದು ಮತದಾನ ಮಾಡಲು ಮತದಾರರು ಕಡ್ಡಾಯವಾಗಿ ಮತದಾರರ ಗುರುತಿನಚೀಟಿ(ಎಪಿಕ್) ಲಭ್ಯ ಇಲ್ಲದಿದ್ದ ಪಕ್ಷದಲ್ಲಿ ಚುನಾವಣಾ ಆಯೋಗ ನಿಗಧಿಪಡಿಸಿರುವ 9 ದಾಖಲೆಗಳಲ್ಲಿ ಯಾವುದಾದರೂ ಒಂದು ಹಾಜರುಪಡಿಸಿ ಮತದಾನ ಮಾಡಬಹುದಾಗಿರುತ್ತದೆ ಜಿಲ್ಲೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಕಂಟ್ರೋಲ್ ರೂಂಗಳ ವಿವರ: ಜಿಲ್ಲಾಧಿಕಾರಿಗಳ ಕಚೇರಿ: 08156-277071, ಚಿಕ್ಕಬಳ್ಳಾಪುರ ತಾಲೂಕು ಕಚೇರಿ 08156-272564,ಗೌರಿಬಿದನೂರು ತಾಲೂಕು ಕಚೇರಿ 8867575221, ಗುಡಿಬಂಡೆ ತಾಲೂಕು ಕಚೇರಿ 08156-261250, ಬಾಗೇಪಲ್ಲಿ ತಾಲೂಕು ಕಚೇರಿ 08150-282225,ಶಿಡ್ಲಘಟ್ಟ ತಾಲೂಕು ಕಚೇರಿ 08158-256763,ಚಿಂತಾಮಣಿ ತಾಲೂಕು ಕಚೇರಿ 08154-252164 ಸಂಖ್ಯೆಗಳಿಗೆ ಕರೆ ಮಾಡಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲಂಘನೆ ಪ್ರಕರಣಗಳು ಹಾಗೂ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ದೂರನ್ನು ಸಲ್ಲಿಸಬಹುದಾಗಿದೆ.

ಮತದಾನ ಮಾಡಲು ಸಲ್ಲಿಸಬೇಕಾದ 9 ದಾಖಲೆಗಳ ವಿವರ: ಚಾಲನಾ ಪರವಾನಿಗೆ,ಆಧಾರ್ ಕಾರ್ಡ್ ,ಪಾನ್ ಕಾರ್ಡ್ ,ಇಂಡಿಯನ್ ಪಾಸ್ ಪೋರ್ಟ್ ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೌಕರರಿಗೆ ನೀಡಿರುವ ಗುರುತಿನಚೀಟಿ, ಸಂಸದರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕೃತವಾಗಿ ನೀಡಿರುವ ಗುರುತಿನಚೀಟಿ, ಪದವಿಯ-ಡಿಪ್ಲೋಮಾ ಪ್ರಮಾಣ ಪತ್ರದ ಮೂಲ(ಒರಿಜಿನಲ್) ದಾಖಲೆ, ದೈಹಿಕ ಅಂಗವಿಕಲತೆ ಹೊಂದಿರುವ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಧೃಡಿಕರಿಸಿರುವ ಮೂಲ(ಒರಿಜಿನಲ್) ಪ್ರಮಾಣಪತ್ರ, ಶಿಕ್ಷಕರು/ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಂದ ನೀಡಿರುವ ಸೇವಾ ಗುರುತಿನಚೀಟಿ (Service identity card issued by the educational institutions in which the elector of the concerned Teachers/Graduates constituency may be employed )

Advertisement

Udayavani is now on Telegram. Click here to join our channel and stay updated with the latest news.

Next