Advertisement
ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿ, ಬೇರೆ ವಿಮಾನ ನಿಲ್ದಾಣಗಳಿಂದ ಜಿಲ್ಲೆಗೆ ಬಂದವರ ಮಾಹಿತಿ, ಅವರು ಸಂಪರ್ಕ ಹೊಂದಿದ ಪ್ರದೇಶಗಳು, ವ್ಯಕ್ತಿಗಳ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಶಂಕಿತ ರೋಗಿಗಳ ವಿವರ, ವಿಮಾನದಲ್ಲಿ ಅವರ ಸಹಪ್ರಯಾಣಿಕರ ವಿವರಗಳನ್ನು ವಿಮಾನ ನಿಲ್ದಾಣದಿಂದ, ಸಂಬಂಧಪಟ್ಟ ವಿಮಾನ ಸಂಸ್ಥೆಗ ಳಿಂದ ಪಡೆದು ಅವರೊಂದಿಗೆ ನಿರಂತರ ಸಂಪರ್ಕ ಇಡಲಾಗುತ್ತಿದೆ. ವಿದೇಶದಿಂದ ಬಂದು ಗೃಹ ನಿಗಾವಣೆಯಲ್ಲಿರುವವರ ಮೇಲೂ ಇಲ್ಲಿಂದ ಕಣ್ಣಿಡಲಾಗುತ್ತದೆ.
ಮಂಗಳೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಕರ್ಫ್ಯೂ ಮಾದರಿಯ ಕಠಿನ ನಿರ್ಬಂಧಗಳನ್ನು ಸರಕಾರ ಜಾರಿಗೊಳಿಸಿದೆ. ಈ ಸಂದರ್ಭ ಸಾರ್ವಜನಿಕರಿಗೆ ಸಹಕಾರ ಹಾಗೂ ಅವಶ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರ ಕಚೇರಿಯಲ್ಲಿ “ವಾರ್ ರೂಂ’ ಆರಂಭಿಸಲಾಗಿದೆ.
Related Articles
ವೈದ್ಯಕೀಯ /ಆ್ಯಂಬುಲೆನ್ಸ್: 0824-2448888, 94498 47134 (ಗುರುಚರಣ್)
ಮಾಹಿತಿ /ಸರಕಾರಿ ಸೇವೆ: 94834 96726 (ಸುಧಾಕರ್, ಸಂಸದರ ಕಾರ್ಯಾಲಯ ಕಾರ್ಯದರ್ಶಿ)
ಮಂಗಳೂರು ಮಹಾನಗರ ಪಾಲಿಕೆ ಸೇವೆ: 98451 82462 (ದಿವಾಕರ ಪಾಂಡೇಶ್ವರ, ಮೇಯರ್)
ಆಹಾರ ಸೇವೆ: 0824-2448888 (ಕದ್ರಿ ಮನೋಹರ ಶೆಟ್ಟಿ, ಕಾರ್ಪೊರೇಟರ್)
ಜಿಲ್ಲಾ ಸಂಚಾಲಕರು: 94484 67540 (ನಿತಿನ್ ಕುಮಾರ್), 98440 22213 (ಸುಧೀರ್ ಶೆಟ್ಟಿ, ಕಾರ್ಪೊರೇಟರ್),
ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ: 1077
Advertisement
15 ದಿನ: ಮೂವರು ಆರೋಗ್ಯಾಧಿಕಾರಿಗಳು!ಮಂಗಳೂರು, ಮಾ. 24: ವೆನ್ಲಾಕ್ ಕುರಿತು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಕುರಿತು ಜಿಲ್ಲಾಡಳಿತ ತತ್‌ಕ್ಷಣ ಕ್ರಮ ಕೈಗೊಂಡಿದೆ. ಹಾಲಿ ಜಿಲ್ಲಾ ಆರೋಗ್ಯಾಧಿಕಾರಿಯ ಸ್ಥಾನಕ್ಕೆ ಹಿರಿಯ ಅನುಭವಿ ಅಧಿಕಾರಿಯೋರ್ವರನ್ನು ನಿಯುಕ್ತಿ ಗೊಳಿಸಲಾಗಿದೆ. ಇದರೊಂದಿಗೆ ಕಳೆದ 15 ದಿನಗಳಲ್ಲಿ ಮೂವರು ಆರೋಗ್ಯಾಧಿಕಾರಿಗಳು ಬದಲಾದಂತಾಗಿದೆ.