Advertisement
ಮನುಷ್ಯರು, ಪ್ರಾಣಿಗಳ ಆರೋಗ್ಯಕ್ಕೆ ತೊಂದರೆ: ಕಾಂಗ್ರೆಸ್ ಕಸ, ಬಿಳಿ ಟೋಪಿ, ಗಜ್ಜರಿ ಕಸ ಎಂಬ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇದು, ಬೆಳೆಗಳಿಗೆ ಹಾನಿ ಮಾಡುತ್ತದೆ. ಜತೆಗೆ ಮನುಷ್ಯರ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಒಂದಲ್ಲ ಒಂದು ಕಡೆ ವರ್ಷವೆಲ್ಲ ಸಸ್ಯದ ಬೀಜೋತ್ಪಾದನೆಯಾಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಹಿಳಾ ಸಂಘಗಳು ಸರ್ಕಾರಿ ಸಂಶೋಧನೆ ವಿಭಾಗಗಳೊಂದಿಗೆ ಸಾಮೂಹಿಕವಾಗಿ ಸಹಕರಿಸಿದ್ದಲ್ಲಿ ಮಾತ್ರ ಕಳೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಪಾರ್ಥೇನಿಯಂ ಮಾತ್ರ ತಿನ್ನುವ ಮೆಕ್ಸಿಕನ್ ದುಂಬಿ: ಮೆಕ್ಸಿಕನ್ ದುಂಬಿ (ಜೈಗೊಗ್ರಾಮ ಬೈಕೋಲೋರೇಟ)ಗಳನ್ನು ಪಾರ್ಥೇನಿಯಂ ಕಳೆ ಹೆಚ್ಚು ಬೆಳೆದಿರುವ ಬಂಜರು ಅಥವಾ ಬೀಡು ಜಮೀನಿನಲ್ಲಿ ಬಿಟ್ಟಾಗ ಮೆಕ್ಸಿಕನ್ ದುಂಬಿಗಳು ನೈಸರ್ಗಿಕ ವಾತಾವರಣ ಕಾಪಾಡಿಕೊಂಡು ಪಾರ್ಥೇನಿಯಂ ಕಳೆ ಮಾತ್ರ ತಿನ್ನುತ್ತವೆ ಎಂದು ವಿವರಿಸಿದರು. ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಯ (ಕಳೆ ನಿರ್ವಹಣಾ ವಿಭಾಗ, ಹೆಬ್ಟಾಳ), ಮುಖ್ಯಸ್ಥ ಡಾ. ಜಿ.ಎನ್. ಧನಪಾಲ್ ಪಾರ್ಥೇನಿಯಂ ಬಗ್ಗೆ ಅರಿವು ಮೂಡಿಸಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರು ಕೈಗವಸುಗಳನ್ನು ಧರಿಸಿ ಉತ್ಸಾಹದಿಂದ ಪಾರ್ಥೇನಿಯಂ ಕಳೆಯನ್ನು ಕಿತ್ತುಹಾಕಿದರು.