Advertisement

ಆಹಾರದ ಮೇಲೆ ನಿಯಂತ್ರಣ ಅಗತ್ಯ:  ಹರೀಶ್‌ ಶೆಟ್ಟಿ

11:52 AM Jan 12, 2019 | |

ಮುಂಬಯಿ: ಗಾಳಿ, ಮಣ್ಣು, ನೀರು, ಅಗ್ನಿ, ಆಕಾಶ ಎಂಬ ಪ್ರಾಕೃತಿಕ ಪಂಚ ತತ್ವಗಳ ಆಧಾರವಾದಿಂದ ನಾವು ಬದುಕುತ್ತಿದ್ದೇವೆ. ಪ್ರಾಕೃತಿಕ ನಿಯಮವನ್ನು ಪರಿಪಾಲಿಸುವುದರ ಜತೆಗೆ ನಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಿಯಲ್ಲಿರಿಸಬೇಕಾದ ಅಗತ್ಯವಿದೆ ಎಂದು ಆಹಾರ್‌ವೆàದ ಸಂಸ್ಥೆಯ ಮೂಲಕ ಆರೋಗ್ಯ ಅ    ಭಿಯಾನ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ತಜ್ಞ ಹರೀಶ್‌ ಶೆಟ್ಟಿ ನುಡಿದರು.

Advertisement

ಜ. 10ರಂದು ಕುರ್ಲಾ ಪೂರ್ವ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಬಂಟರ ಸಂಘದ ಮಹಿಳಾ ವಿಭಾಗ ಆಯೋಜಿಸಿದ ಆಹಾರ್‌ವೆàದದಿಂದ ಆರೋಗ್ಯ ಎಂಬ ವಿಷಯದ ಬಗ್ಗೆ ಆರೋಗ್ಯ ತಜ್ಞ ಹರೀಶ್‌ ಶೆಟ್ಟಿ ಅವರು ಉಪನ್ಯಾಸ ನೀಡಿ, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಪ್ರಾಕೃತಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯವನ್ನು ಹತೋಟಿಯಲ್ಲಿಡಬಹುದೆ ಹೊರತು ಮಾತ್ರೆಗಳಿಂದ ಸಾಧ್ಯವಿಲ್ಲ. ರಾಸಾಯನಿಕ ಆಹಾರದಿಂದ ಕ್ಯಾನ್ಸರ್‌ನಂತಹ ರೋಗಕ್ಕೆ ತುತ್ತಾಗುವವರ ಸಂಖ್ಯೆ ಇಂದು ಇಮ್ಮಡಿಯಾಗಿದೆ. ಪ್ರತಿಯೊಂದು ಆಹಾರವೂ ರಾಸಾಯನಿಕ ವಸ್ತುವಿನಿಂದ ಕೂಡಿರುವುದು ವಿಷಾದ‌ನೀಯ ಸಂಗತಿಯಾಗಿದೆ. ಈ ಬಗ್ಗೆ ನಾವು ಸಮಾಜದಲ್ಲಿ, ದೇಶದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು. ಆಹಾರ್‌ವೆàದವನ್ನು ಅನುಸರಿಸಿ ನಮ್ಮ ಮನಸ್ಸು ಮತ್ತು ದೇಹವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಬೇಕು ಎಂದು ನುಡಿದು, ನಾವು ಸೇವಿಸುವ ಆಹಾರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಅಗತ್ಯ ಕ್ರಮಗಳ ಬಗ್ಗೆ  ವಿವರಿಸಿದರು.

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಯರುಗಳಾದ ಸುಜಯಾ ಆರ್‌. ಶೆಟ್ಟಿ, ಲತಾ ಜೆ. ಶೆಟ್ಟಿ ಹಾಗೂ ಸಂಘದ ರಮಾನಾಥ ಆದರಾತಿಥ್ಯ ಕಾಲೇಜಿನ ಪ್ರಾಂಶುಪಾಲೆ ಸಂಯೋಜಿತಾ ಮೊರಾರ್ಜಿ ಅವರು ಆರೋಗ್ಯ ಭಾಗ್ಯದ ಉಪನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಇವರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅಭಿಯಾನ ನಡೆಸುತ್ತಿರುವ ಹರೀಶ್‌ ಶೆಟ್ಟಿ ಅವರ ಜೊತೆಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಮತ್ತು ಇತರ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅತಿಥಿಯಾಗಿ ಪಾಲ್ಗೊಂಡ ಹರೀಶ್‌ ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಶಾಲು ಹೊದೆಸಿ, ರಂಜನಿ ಎಸ್‌. ಹೆಗ್ಡೆ ಇವರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಗೌರವಿಸಿದರು.

Advertisement

ಸಂಘದ ಪಶ್ಚಿಮ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬಿ., ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಟuಲ ಎಸ್‌. ಆಳ್ವ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ಸಿ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಧನಂಜಯ ಪಿ. ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪಿ. ಭಂಡಾರಿ, ಲತಾ ಪಿ. ಶೆಟ್ಟಿ ಹಾಗೂ ಮಹಿಳಾ ವಿಭಾಗ, ಪ್ರಾದೇಶಿಕ ಮಹಿಳಾ ವಿಭಾಗಗಳ ಸದಸ್ಯೆ ಯರು, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ, ಕೋಶಾಧಿಕಾರಿ ಆಶಾ ವಿ. ರೈ, ಜೊತೆ ಕಾರ್ಯದರ್ಶಿ ಮನೋರಮಾ ಎನ್‌. ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ, ಕಾರ್ಯಕ್ರಮದ ಆಯೋಜನೆಗಾಗಿ ಸಹಕರಿಸಿದರು. ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ ವಂದಿಸಿದರು. 

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next