ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಟೋ ಮೂಲಕ ಡೆಂಘೀ ನಿಯಂತ್ರ ಣದ ಬಗ್ಗೆ ಪ್ರಚಾರಕ್ಕೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ಮೂಲಕ ಡೆಂಘೀ ಮೊದಲಾದ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್. ರಾಜೇಶ್ ಮಾತನಾಡಿ, ಮಳೆಗಾಲ ಪ್ರಾರಂಭವಾಗಿರು ವುದರಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಸಿಮೆಂಟ್ ತೊಟ್ಟಿಗಳು, ಡ್ರಂ ಗಳು, ಬ್ಯಾರೆಲ್‌ಗಳು, ಒಡೆದ ಮಡಕೆಗಳಲ್ಲಿ ಡೆಂಘೀ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಮನೆ ಯಲ್ಲಿರುವ ನೀರಿನ ಸಿಮೆಂಟ್ ತೊಟ್ಟಿಗಳು, ಡ್ರಂಗಳು, ಬ್ಯಾರೆಲ್‌ಗಳು, ಏರ್‌ಕೂಲರ್ ಗಳನ್ನು ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಸಂಪೂರ್ಣವಾಗಿ ಖಾಲಿ ಮಾಡಿ ಒಳ ಆವರಣವನ್ನು ಬ್ರಷ್‌ನಿಂದ ಉಜ್ಜಿ ತೊಳೆದು ಒಣ ಗಿಸಿ ನಂತರ ಮತ್ತೆ ನೀರನ್ನು ಶೇಖರಿಸಿಟ್ಟುಕೊಳ್ಳಬೇಕು.
ಬಯಲಿನಲ್ಲಿರುವ ಹಳೇ ಟೈರುಗಳು, ಎಳನೀರಿನ ಚಿಪ್ಪು, ಒಡೆದ ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿಗಳು, ಒಡೆದ ಮಡಕೆಗಳನ್ನು ತೆರವುಗೊಳಿಸುವ ಮೂಲಕ ಡೆಂಘೀ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆಪ್ತ ಸಹಾಯಕ ಅನಂತರಾಮು, ಹಳೆ ಕೋಟೆಯ ಹಿರಿಯ ಆಪ್ತ ಸಹಾಯಕ ಆರ್.ಬಿ.ಪುಟ್ಟೇಗೌಡ, ಹಿರಿಯ ಆಪ್ತಸಹಾಯಕಿ ಉಷಾ, ಕಿರಿಯ ಆಪ್ತಸಹಾಯಕ ಕಿರಿಯ ಆಪ್ತ ಸಹಾಯಕರುಗಳಾದ ಜೆ.ಟಿ.ಸ್ವಾಮಿ, ಸೋಮು, ನಯನಾ, ಶ್ರುತಿ, ಮೇಘನಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಿವಕುಮಾರ್, ಸುಜಾತ್ ಆಲಿ ಇದ್ದರು.