Advertisement

ಆಮ್ಲಜನಕ ಸಾಂದ್ರಕಗಳ ಕೊಡುಗೆ

06:42 PM Jun 26, 2021 | Team Udayavani |

ಕೋಲಾರ: ತಾಲೂಕಿನ ಎಲ್ಲಾ ಪ್ರಾಥಮಿಕ ಕೇಂದ್ರಗಳಿಗೂ 12.5 ಲಕ್ಷ ರೂ.ನಲ್ಲಿ ಆಮ್ಲಜನಕ ಸಾಂದ್ರಕಗಳನ್ನು ವಿತರಿಸುತ್ತಿದ್ದು, ಜೀವ ಉಳಿಸುವ ಕಾರ್ಯಕ್ಕೆನೆರವಾಗುತ್ತಿರುವುದಾಗಿ ರೋಟರಿ ಸೆಂಟ್ರಲ್‌ ಅಧ್ಯಕ್ಷಸುಧಾಕರ್‌ ತಿಳಿಸಿದರು.

Advertisement

ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ದರ್ಗಾಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಆಮ್ಲಜನಕ ಸಾಂದ್ರಕವನ್ನು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿಗೆ ಹಸ್ತಾಂತರಿಸಿ ಮಾತನಾಡಿ,3ನೇ ಅಲೆ ಆತಂಕವನ್ನು ಸಮರ್ಪಕವಾಗಿಎದುರಿಸಲು ರೋಟರಿ ಸೆಂಟ್ರಲ್‌ ನೆರವಾಗುತ್ತಿದೆ.ನೀಡುತ್ತಿರುವ ಸಾಂದ್ರಕಗಳ ಉÓ ‌ು¤ವಾರಿ, ದುರಸ್ತಿಹೊಣೆಯನ್ನು 5 ವರ್ಷ ರೋಟರಿಯೇನಿರ್ವಹಿಸಲಿದೆ ಎಂದರು.

ರೋಟರಿ ಸೆಂಟ್ರಲ್‌ ನಿಯೋಜಿತ ಅಧ್ಯಕ್ಷಶ್ರೀನಾಥ್‌ ಮಾತನಾಡಿ, ಇದೊಂದು ಪುಣ್ಯ ‌ಕೆಲಸವಾಗಿದೆ. ಈ ಆಸ್ಪತ್ರೆ ಇಷ್ಟು ಸುಸಜ್ಜಿತವಾಗಿನಿರ್ವಹಣೆ ಮಾಡಿರುವ ಡಾ. ಎ.ವಿ. ನಾರಾಯಣಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದುಅಭಿನಂದಿಸಿದರು.ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿದ ವೈದ್ಯಾಧಿಕಾರಿಡಾ.ಎ.ವಿ.ನಾರಾಯಣಸ್ವಾಮಿ,ಸಮಾಜಮುಖೀಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ಈ ಆಸ್ಪತ್ರೆಗೆ ಬರುವ ಇತರೆ ರೋಗಿಗಳು, ಗರ್ಭಿಣಿಯರಿಗೂ ತುರ್ತುಆಮ್ಲಜನಕದ ಅಗತ್ಯತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳುವುದಾಗಿ ತಿಳಿಸಿದರು.ಜಯ ಕರ್ನಾಟಕ ಜಿಲ್ಲಾಧ್ಯಕ್ಷ ತ್ಯಾಗರಾಜ್‌, ಜಿಲ್ಲಾಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ‌ ಕಾರ್ಯದರ್ಶಿಎಂ.ನಾಗರಾಜ್‌, ತಾಲೂಕು ಗೌರವಾಧ್ಯಕ್ಷ ಆರ್‌.ನಾಗರಾಜ್‌, ಕೇದಾರ್‌ ಗ್ಯಾಸ್‌ ಏಜೆನ್ಸಿ ಮಾಲಿಕರೂಪೇಶ್‌, ಬಿಎಸ್‌ಎನ್‌ಎಲ್‌ ರಮೇಶ್‌ಬಾಬು,ಸೇವಾದಳದ ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next