Advertisement
ಈ ಸಂದರ್ಭ ಆನಂದ್ ಶೆಟ್ಟಿ ಅವರು ಸಮಿತಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ ಪ್ರತೀ ವರ್ಷದಂತೆ ನಮ್ಮ ಸಂಘದ 9ನೇ ವಾರ್ಷಿಕೋತ್ಸವ ಸಮಾರಂಭವು ಜ. 11ರಂದು ನಡೆಯಲಿದ್ದು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ನಾವೆಲ್ಲರೂ ಪೂರ್ವತಯಾರಿಯನ್ನು ಮಾಡಿಕೊಳ್ಳ ಬೇಕಾಗಿದೆ. ಪುಣೆಯಾದ್ಯಂತ ಇರುವ ಸಮಾಜ ಬಾಂಧವರನ್ನು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಣಪತ್ರವನ್ನು ನೀಡಬೇಕಾಗಿದೆ.
Related Articles
Advertisement
ಅದೇ ರೀತಿ 9ನೇ ವಾರ್ಷಿಕೋತ್ಸವ ಸಂಭ್ರಮವನ್ನೂ ನಾವೆಲ್ಲರೂ ಒಗ್ಗೂಡಿ ಪೂರ್ವತಯಾರಿಯನ್ನು ಮಾಡಿಕೊಂಡು ಉತ್ತಮ ಕಾರ್ಯಕ್ರಮವನ್ನಾಗಿಸುವಲ್ಲಿ ಪ್ರಯತ್ನಿಸೋಣ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ವಾರ್ಷಿಕೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ಸಭೆಯ ಮುಂದಿಟ್ಟರು. ಸಂಘದ ಮಾಜಿ ಅಧ್ಯಕ್ಷರಾದ ಜಯ ಶೆಟ್ಟಿ ಮಿಯ್ಯಾರ್ ,ಮಾಜಿ ಕಾರ್ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಮಾಜಿ ಕಾರ್ಯದರ್ಶಿ ಸತೀಶ್ ರೈ ಕಲ್ಲಂಗಳ ,ಮಾಜಿ ಕೋಶಾಧಿಕಾರಿ ದಿನೇಶ್ ಶೆಟ್ಟಿ ಎನ್‌ಐಬಿಎಂ ಅವರು ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸುವ ಬಗ್ಗೆ ಸಲಹೆಗಳನ್ನಿತ್ತರು .
ಸಭೆಯಲ್ಲಿ ಸಂಘದ ಕೋಶಾಧಿಕಾರಿ ದಿನೇಶ್ ಶೆಟ್ಟಿ ನಿಟ್ಟೆ ಪದಾಧಿಕಾರಿಗಳಾದ ರವೀಂದ್ರ ಶೆಟ್ಟಿ, ಸುಶ್ಮಿತ್ ಶೆಟ್ಟಿ, ಸುಧಾಕರ ಶೆಟ್ಟಿ ಕೆಮ್ತೂರು, ಬಾಲಕೃಷ್ಣ ಶೆಟ್ಟಿ, ಚಂದ್ರಕಾಂತ್ ಶೆಟ್ಟಿ, ಸತೀಶ್ ಶೆಟ್ಟಿ ಕಾಡೂರು, ಪ್ರದೀಪ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ, ಮಾಜಿ ಕಾರ್ಯಾಧ್ಯಕ್ಷೆ ಸುಧಾ ಎನ್. ಶೆಟ್ಟಿ, ಸುಜಾತಾ ಎಸ್ ಹೆಗ್ಡೆ, ಸರೋಜಿನಿ ಜೆ. ಶೆಟ್ಟಿ, ಮಲ್ಲಿಕಾ ಎ. ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಉಷಾ ಯು. ಶೆಟ್ಟಿ, ಲತಾ ಎಸ್. ಶೆಟ್ಟಿ, ಸುಜಯಾ ಬಿ. ಶೆಟ್ಟಿ, ಸುಮನಾ ಎಸ್. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು