Advertisement

ಸದಸ್ಯತ್ವ ಅಭಿಯಾನದ ಯಶಸ್ಸಿಗೆ ಸಹಕರಿಸಿ

07:20 AM Jul 08, 2019 | Team Udayavani |

ಚಾಮರಾಜನಗರ: ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದ ಯಶಸ್ಸಿಗೆ ಎಲ್ಲ ಹಂತದ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಆರ್‌.ಮಲ್ಲಿಕಾರ್ಜುನಪ್ಪ ಹೇಳಿದರು.

Advertisement

ನಗರದ ನಂದಿ ಭವನದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ರಾಷ್ಟ್ರಮಟ್ಟದಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇಡೀ ದೇಶಾದ್ಯಂತ ಬಿಜೆಪಿ ಸಂಘಟನಾ ಪರ್ವ ಆರಂಭಗೊಂಡಿದ್ದು, ಜಿಲ್ಲೆಯಲ್ಲೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸದಸ್ಯತ್ವ ಪಡೆಯಿರಿ: ಈಗ ಚಾಲನೆಗೊಂಡಿರುವ ಸದಸ್ಯತ್ವ ಅಭಿಯಾನವು ಮುಂದಿನ ತಿಂಗಳ 11 ರಂದು ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ 1.33 ಲಕ್ಷ ಜನರ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಕಳೆದ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ 33 ಸಾವಿರ ಸದಸ್ಯತ್ವ ಮಾಡಲಾಗಿತ್ತು.

ಈ ಸಾಲಿನ ಸದಸ್ಯತ್ವ ಅಭಿಯಾನದಲ್ಲಿ 33 ಸಾವಿರ ಸದಸ್ಯತ್ವ ಜತೆಯಲ್ಲಿ ಮತ್ತೆ 1 ಲಕ್ಷ ಸದಸ್ಯತ್ವ ಮಾಡಿ ಒಟ್ಟು 1.33 ಲಕ್ಷ ಸದಸ್ಯತ್ವ ನೋಂದಾಯಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಹಳೆಯ ಸದಸ್ಯತ್ವ ಪಡೆದಿರುವವರು ಹಾಗೂ ಹೊಸ ಸದಸ್ಯತ್ವ ಪಡೆಯುವವರು 8980808080ಗೆ ಮಿಸ್‌ ಕಾಲ್‌ ಮಾಡಿ ತಮ್ಮ ವಿಳಾಸವನ್ನು ಸಂಪೂರ್ಣವಾಗಿ ಬರೆಯುವ ಮೂಲಕ ಸದಸ್ಯತ್ವ ಪಡೆದುಕೊಳ್ಳಬೇಕಿದೆ ಎಂದರು.

ಅಭಿವೃದ್ಧಿಪರ ಬಜೆಟ್‌: ಪ್ರಧಾನಿ ನರೇಂದ್ರಮೋದಿ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪರ ಯೋಜನೆಗಳು, ಸಾಧನೆಗಳಿಂದ 2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ಕೇಂದ್ರ ಬಂದಿದೆ. ಪ್ರಧಾನಿ ನರೇಂದ್ರಮೋದಿ ಅವರು ಆರ್ಥಿಕತೆ ಸಾಧಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಅಭಿ ವೃ ದ್ಧಿಪರ ಬಜೆಟ್‌ ಮಂಡಿಸಿದ್ದಾರೆ ಎಂದು ಹೇಳಿದರು.

Advertisement

3 ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ: ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್‌.ಎಂ.ಬಸವಣ್ಣ ಮಾತನಾಡಿ, ಬಿಜೆಪಿ ಸಂಘಟನಾ ದೃಷ್ಟಿಯಿಂದ ಪ್ರತಿ 3 ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ನಡೆಯುತ್ತದೆ. ಚಾಮರಾಜನಗರ ಗ್ರಾಮಾಂತರ ಮಂಡಲದಲ್ಲಿ 184 ಬೂತ್‌ಗಳಿದ್ದು, ಪ್ರತಿಬೂತ್‌ನಲ್ಲಿ 300 ಜನರ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದರು.

ಮಾಜಿ ಶಾಸಕ ಸಿ.ಗುರುಸ್ವಾಮಿ ಮಾತನಾಡಿ, ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸೋಣ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸೋಣ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಪಂ ಸದಸ್ಯ ಬಾಲರಾಜ್‌, ತಾಪಂ ಉಪಾಧ್ಯಕ್ಷ ಬಸವಣ್ಣ, ಅಭಿಯಾನ ಜಿಲ್ಲಾ ಸಂಚಾಲಕ ಪಿ.ಬಿ. ಶಾಂತಮೂರ್ತಿ, ಸಹ ಸಂಚಾಲಕ ಎಂ.ಎಸ್‌.ಫ‌ೃಥ್ವಿರಾಜ್‌, ನಗರ ಘಟಕ ಅಧ್ಯಕ್ಷ ಸುಂದರ್‌ರಾಜ್‌, ಚಾಮರಾಜನಗರ ಗ್ರಾಮಾಂತರ ಮಂಡಲ ಅಭಿಯಾನ ಸಂಚಾಲಕ ಪುರುಷೋತ್ತಮ, ಸಹಸಂಚಾಲಕ ಮಹದೇವಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್‌, ಮುಖಂಡರಾದ ಡಾ.ಎ.ಆರ್‌.ಬಾಬು, ವಕೀಲ ಚಿನ್ನಸ್ವಾಮಿ, ಉಡಿಗಾಲ ಕುಮಾರಸ್ವಾಮಿ, ಸ್ಲಂ ಮೋರ್ಚಾದ ಅಧ್ಯಕ್ಷ ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next