Advertisement

ಬಾಕಿ ಬಿಡುಗಡೆಗೆ ಗುತ್ತಿಗೆದಾರರ ಗಡು; ಕಾಲಮಿತಿ ನಿಗದಿಪಡಿಸಿಸಲು ಅಧ್ಯಕ್ಷ ಕೆಂಪಣ್ಣ ಆಗ್ರಹ

12:10 AM Mar 06, 2024 | Team Udayavani |

ಬೆಂಗಳೂರು: ಗುತ್ತಿಗೆದಾ ರರ ಬಾಕಿ ಹಣ ಬಿಡುಗಡೆಗೆ ಕಾಲಮಿತಿ ನಿಗದಿಪಡಿಸಿ ಮುಂದಿನ 15 ದಿನದೊಳಗೆ ತಿಳಿಸಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಹಲವು ಗುತ್ತಿಗೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಕರ್ನಾಟಕ ಗುತ್ತಿಗೆದಾರರ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪದಲ್ಲಿ ಹಿರಿಯ ಗುತ್ತಿಗೆದಾರರನ್ನು ಸಮ್ಮಾನಿಸಿದ ಬಳಿಕ ಅವರು”ಉದಯವಾಣಿ’ ಜತೆ ಮಾತನಾಡಿ ದರು.ಗುತ್ತಿಗೆದಾರರ ಬಾಕಿ ಪಾವತಿ ಹಂತ-ಹಂತವಾಗಿ ಕೊಡುತ್ತೇನೆ. ಒಂದೇ ಸಲಕೊಡಲು ಆಗುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಂತ-ಹಂತವಾಗಿ ಕೊಡುವುದಾಗಿ ಹೇಳಿ 3 ವರ್ಷಗಳಷ್ಟು ದೀರ್ಘ‌ವಾಗಿ ಸಮಯ ತೆಗೆದುಕೊಳ್ಳುವುದು ಬೇಡ. ಇದಕ್ಕೆ ಇಂತಿಷ್ಟು ಕಾಲಮಿತಿ ನಿಗದಿಪಡಿಸಿ ಎಂದು ನಾವು ತಿಳಿಸಿದೆವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ. ಕಾಲಮಿತಿ ನಿಗದಿಪಡಿಸಿ ಸರಕಾರವು ಸೂಕ್ತ ನಿಲುವು ತೆಗೆದುಕೊಳ್ಳದಿದ್ದರೆ ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋರಾಟ ನಡೆಸುವುದಾಗಿ ಹಲವು ಗುತ್ತಿಗೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲಸ ನಿಲ್ಲಿಸುವುದುಅಷ್ಟು ಸುಲಭವಲ್ಲ. ಇದರಿಂದ ಹಲವು ಕಾರ್ಮಿಕರಿಗೆ ಸಮಸ್ಯೆಯಾಗುತ್ತದೆ ಎಂದು ಡಿ.ಕೆಂಪಣ್ಣ ತಿಳಿಸಿದರು. ಹೊಸದಾಗಿ ಗುತ್ತಿಗೆಯಲ್ಲಿ ಪ್ಯಾಕೇಜ್‌ ಪದ್ಧತಿ ತಂದರೆ ಪ್ರತಿಭಟನೆ ನಡೆಸಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಪ್ಯಾಕೇಜ್‌ ಗುತ್ತಿಗೆಯಿಂದ ಸಾಕಷ್ಟು ಸಣ್ಣ-ಪುಟ್ಟ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗುತ್ತಿದೆ ಎಂದು ವಿವರಿಸಿದರು.

ಸಿಎಂ ವಿರುದ್ಧ ಗುತ್ತಿಗೆದಾರರ ಅಸಮಾಧಾನ
ಸೋಮವಾರ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರಿಗೆ ಯಾವುದೇ ಆಶ್ವಾಸನೆಯನ್ನೇ ಕೊಡಲಿಲ್ಲ ಎಂದು ಮಂಗಳವಾರ ಸಮಾವೇಶದಲ್ಲಿ ಭಾಗಿಯಾಗಿದ್ದ ಹಲವು ಗುತ್ತಿಗೆದಾರರು ಕೆಂಪಣ್ಣ ಬಳಿ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಂಪಣ್ಣ, ಗುತ್ತಿಗೆದಾರರ ಬಾಕಿ ಹಣ ನೀಡಲು ಸರಕಾರವು ಎರಡು ವರ್ಷ ತಡಮಾಡಿದರೆ ಅದಕ್ಕೆ ತಕ್ಕುದಾಗಿ ಬಡ್ಡಿ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next