Advertisement

ಸರ್ಕಾರಕ್ಕೆ ಗುತ್ತಿಗೆದಾರರ ಮನವಿ

06:07 PM Jul 16, 2022 | Shwetha M |

ಮುದ್ದೇಬಿಹಾಳ: ಪ್ಯಾಕೇಜ್‌ ಕಾಮಗಾರಿ ರದ್ದು ಪಡಿಸುವುದು ಸೇರಿದಂತೆ ತಮ್ಮ ಕೆಲ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಗುತ್ತಿಗೆದಾರರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ವಿವಿಧ 12 ಸರ್ಕಾರಿ ಇಲಾಖೆಗಳ ಮುಖ್ಯಸ್ಥರೂ ಸೇರಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರಿಗೆ ಸಲ್ಲಿಸಿದರು.

Advertisement

ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಗುತ್ತಿಗೆದಾರರು ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿಯಂತೆ ಟೆಂಡರ್‌ ನಿಡಬೇಕು. ಇಲಾಖೆಗಳ ಕಾಮಗಾರಿ ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ನಡೆಸಬೇಕು ಎನ್ನುವುದೂ ಸೇರಿ ಕೆಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಶಾಂತಗೌಡ ಪಾಟೀಲ ನಡಹಳ್ಳಿ, ಸುರೇಶ ಪಾಟೀಲ, ರುದ್ರಗೌಡ ಅಂಗಡಗೇರಿ, ಬಹದ್ದೂರ್‌ ಲಮಾಣಿ, ರಾಮನಗೌಡ ತಾತರೆಡ್ಡಿ, ಲಕ್ಷ್ಮಣ ಬಂಡಿವಡ್ಡರ, ಸಂಗನಗೌಡ ಪಾಟೀಲ, ರಾಜು ಕೊಂಗಿ, ಮುತ್ತಿನಶೆಟ್ಟಿ ಗೂಳಿ, ಹನುಮಂತ ಕುರಿ, ದಾವಲ್‌ ಗೊಳಸಂಗಿ, ಡಿ.ಬಿ.ಮುದೂರ, ಹರೀಶ ನಾಟೀಕಾರ, ಚನ್ನಪ್ಪ ವಿಜಯಕರ, ಕಾಮರಾಜ ಬಿರಾದಾರ, ಹುಲಗಪ್ಪ ನಾಯಕಮಕ್ಕಳ, ಮಹಿಬೂಬ ಗೊಳಸಂಗಿ, ರಫಿಕ್‌ ದ್ರಾಕ್ಷಿ, ಜಗದೀಶ ಚವ್ಹಾಣ, ಪ್ರದೀಪ ಪವಾರ, ಯಲ್ಲಪ್ಪ ಚಲವಾದಿ, ಶಿವು ಶಿವಪುರ, ಬಿ.ಎಚ್‌.ಹಾಲಣ್ಣವರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಹಲವು ಗುತ್ತಿಗೆದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next