Advertisement

ಎಸ್‌ಬಿ ವಿಜ್ಞಾನ ಕಾಲೇಜಿನೊಂದಿಗೆ ಒಡಂಬಡಿಕ

11:37 AM Dec 14, 2018 | |

ಕಲಬುರಗಿ: ಹೈಕ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದೊಂದಿಗೆ ಬೆಂಗಳೂರಿನ ಹೈರ್‌ ಮೀ ಕಂಪನಿ ಒಡಂಬಡಿಕೆ ಮಾಡಿಕೊಂಡಿದೆ.

Advertisement

ಹೈರ್‌ ಮೀ ಕಂಪನಿ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತ ತರಬೇತಿ ನೀಡಿ ರಾಜ್ಯದ ಪ್ರತಿಷ್ಠಿತ ಕಂಪನಿಯವರನ್ನು ಆಹ್ವಾನಿಸಿ ಉದ್ಯೋಗ ಮೇಳ ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಉದ್ಯೋಗ ದೊರಕಿಸಿ ಕೊಡುತ್ತದೆ. ಈ ನಿಟ್ಟಿನಲ್ಲಿ
ಒಡಂಬಡಿಕೆ ಮಾಡಿಕೊಂಡಿದ್ದರಿಂದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಭ್ಯಸಿಸುವ ಅಭ್ಯರ್ಥಿಗಳಿಗೆ ಉದ್ಯೋಗಭಾಗ್ಯ ದೊರೆಯಲು ಅವಕಾಶ
ಮಾಡಿಕೊಟ್ಟಂತಾಗುತ್ತದೆ.

ಒಡಂಬಡಿಕೆ ಒಪ್ಪಂದ ಪತ್ರಕ್ಕೆ ಟೆರಿಟರಿ ಮ್ಯಾನೇಜರ್‌ ಸೈಯದ್‌ ಅಹಮದ್‌ ಪಟೇಲ್‌ ರುಜು ಹಾಕಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಡಿ.ಟಿ.ಅಂಗಡಿ
ಅವರಿಗೆ ಸಿಬ್ಬಂದಿಗಳ ಸಮ್ಮುಖದಲ್ಲಿ ಪತ್ರವನ್ನು ಒಪ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next