Advertisement
ನಗರದ ಹೊರವಲಯದ ಬಸವನಕೊಳ್ಳದ ಬಳಿ ನೂತನವಾಗಿ ಆರಂಭಿಸಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಸಂಸದೆ ಮಂಗಲಾ ಅಂಗಡಿ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.
Related Articles
Advertisement
ಈ ಯೋಜನೆಯನ್ನು 2053ನೇ ಸಾಲಿನ ಜನಸಂಖ್ಯೆಗೆ ಅನುಗುಣವಾಗಿ ತಯಾರಿಸಲಾಗಿದ್ದು 2053 ರ ವೇಳೆಗೆ 9.67 ಲಕ್ಷ ಜನಸಂಖ್ಯೆಗೆ 184 ಎಂ.ಎಲ್. ಡಿ ರಷ್ಟು ನೀರಿನ ಬೇಡಿಕೆ ಇದ್ದು ಈಗ ಇರುವ ಎರಡು ಜಲಾಶಯಗಳಿಂದ 136 ಎಂ.ಎಲ್.ಡಿ ನೀರು ಲಭ್ಯವಿದೆ. ಉಳಿದ 48 ಎಂ.ಎಲ್.ಡಿ ನೀರನ್ನು ಹಿಡಕಲ್ ಜಲಾಶಯದಿಂದ ಹಂಚಿಕೆ ಮಾಡಲು ನೀರಾವರಿ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಗಟು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಸಾಧಿಸಲಾಗಿದೆ.ವಿತರಣಾ ವ್ಯವಸ್ಥೆಯಲ್ಲಿ ನೀರಿನ ಪೈಪ್‌ಗ್ಳನ್ನು ಬದಲಾಯಿಸಿ ನೀರಿನ ಸೋರಿಕೆಯನ್ನು ಕಡಿಮೆ ಮಾಡಲಾಗಿದೆ. ಕಂದಾಯ ವಸೂಲಿಗಾಗಿ ಶೇ.100 ರಷ್ಟು ಗ್ರಾಹಕರಿಗೆ ಮೀಟರ ಅಳವಡಿಸಲಾಗಿದ್ದು, ನಿಯಮಿತ ಬಿಲ್ಲುಗಳನ್ನು ವಿತರಿಸಿ ಶೇ. 90 ರಷ್ಟು ನೀರಿನ ಕರ ವಸೂಲಾತಿ ಮಾಡಲಾಗಿದೆ ಎಂದರು. ನೀರಿನ ಬಳಕೆ ಪ್ರಮಾಣದಲ್ಲಿ ಉಳಿತಾಯದ ಪ್ರಾತ್ಯಕ್ಷಿಕ ವಲಯದ ಅನುಭವದ ಪ್ರಕಾರ ನೀರಿನ ಬಳಕೆ ಪ್ರಮಾಣ ಪ್ರತಿ ದಿನ ಪ್ರತಿ ವ್ಯಕ್ತಿಗೆ 90 ಲೀಟರ್ ಇದೆ. ಇದರಿಂದ ನೀರಿನ ಬಳಕೆಯ ಪ್ರಮಾಣದಲ್ಲಿ ಶೇ. 32 ರಷ್ಟು ಉಳಿತಾಯ ಸಾಧಿಸಲಾಗಿದೆ.
ನೀರು ಸರಬರಾಜು ಯೋಜನೆಗೆ ಸಂಬಂಧಪಟ್ಟ ದೂರುಗಳನ್ನು ನಿರ್ವಾಹಕರು ನಿರ್ದಿಷ್ಟ ಅವಧಿಯಲ್ಲಿ ಸರಿಪಡಿಸುವ ಗುರಿ ಇರುವುದರಿಂದ ನಿಗದಿತ ಅವಧಿಯಲ್ಲಿ ದೂರುಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ನಗರ ಸೇವಕರಾದ ರಾಜಶೇಖರ ಡೋಣಿ, ಬಿಜೆಪಿ ಮುಖಂಡರಾದ ಮಹಾದೇವ ಕೆ. ರಾಠೊಡ, ಮುರುಘೇಂದ್ರಗೌಡಾ ಪಾಟೀಲ, ಭೆ„ರಗೌಡ ಪಾಟೀಲ, ಮಾಜಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳಾದ ಹರಿಕಾಂತ ದೇಸಾಯಿ, ದುರ್ಗೇಶ ಉಪಸ್ಥಿತರಿದ್ದರು.