Advertisement

ನಿರಂತರ ಗ್ರಾಹಕ ಸಂಪರ್ಕ ಬ್ಯಾಂಕ್‌ಗಳ ಧ್ಯೇಯವಾಗಲಿ

12:44 PM Oct 05, 2019 | Team Udayavani |

ಬೆಂಗಳೂರು: ಗ್ರಾಹಕರೊಡನೆ ನಿರಂತರ ಒಡನಾಟ, ಅವರೊಂದಿಗೆ ವಿಶ್ವಸನೀಯ ಸೇವೆ ಬ್ಯಾಂಕ್‌ಗಳ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದು ಬ್ಯಾಂಕ್‌ ಆಫ್‌ ಇಂಡಿಯಾ ವಲಯ ಪ್ರಬಂಧಕ ಪ್ರಮೋದ್‌ಕುಮಾರ್‌ ಬತಾಲ್‌ ಹೇಳಿದ್ದಾರೆ.

Advertisement

ಇತ್ತೀಚೆಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಗ್ರಾಹಕ ಸಂಪರ್ಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದೆಲ್ಲೆಡೆ ಸಾರ್ವಜನಿಕ ಬ್ಯಾಂಕ್‌ಗಳು ಆಯ್ದ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಬೇಕೆಂಬ ಮಹಾನ್‌ ಗುರಿ ಇಟ್ಟುಕೊಂಡಿದ್ದು ಅದರ ಭಾಗವಾಗಿ ಬಿಓಐ ಬೆಂಗಳೂರಿನಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜಿಲ್ಲೆಯೊಳಗಿರುವ ಎಲ್ಲ ಸರಕಾರಿ, ಖಾಸಗಿ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿ ಎಚ್‌ಎಫ್‌ಸಿ, ಎಂಎಫ್‌ಐ, ನಬಾರ್ಡ್‌ ಸಹಿತ ಎಲ್ಲ ಹಣಕಾಸು ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ಗ್ರಾಹಕರಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ. ಉಳಿತಾಯ ಖಾತೆ ತೆರೆಯುವುದು, ಹಣಕಾಸಿನ ನೆರವು, ಗ್ರಾಹಕರನ್ನು ವಿವಿಧ ಹಣಕಾಸು ಯೋಜನೆಗಳೊಂದಿಗೆ ಜೋಡಿಸುವುದು, ಡಿಜಿಟಲ್‌ ಬ್ಯಾಂಕಿಂಗ್‌ ಉತ್ಪನ್ನಗಳತ್ತ ಆಕರ್ಷಿಸುವ ಉದ್ದೇಶವೂ ಇದೆ ಎಂದಿದ್ದಾರೆ.

ಸಮಾರಂಭದಲ್ಲಿ ವಲಯ ಪ್ರಬಂಧಕ ಪ್ರಮೋದ್‌ ಕುಮಾರ್‌ ಬತಾಲ್‌, ಐಡಿಬಿಐ ಬ್ಯಾಂಕ್‌ ವಲಯ ಮುಖ್ಯಸ್ಥೆ ನೀತಾ ಸೂದ್‌, ಐಒಬಿಯ ಮನೋರಮಾ, ನಬಾರ್ಡ್‌ನ ಸೂರ್ಯಕುಮಾರ್‌, ಆರ್‌.ಕೆ.ಮಿತ್ರಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next