Advertisement

ಮುಂದುವರಿದ ಮುಷ್ಕರ, ಸರಕು ಸಾಗಣೆಯಲ್ಲಿ ವ್ಯತ್ಯಯ

06:10 AM Jul 23, 2018 | |

ಬೆಂಗಳೂರು: ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಕರೆ ನೀಡಿರುವ ರಾಷ್ಟ್ರವ್ಯಾಪಿ ಸರಕು ಸಾಗಣೆದಾರರ ಮುಷ್ಕರ ಮುಂದುವರಿದಿದ್ದು, ಕ್ರಮೇಣ ಸರಕು ಸಾಗಣೆಯಲ್ಲಿ ತುಸು ವ್ಯತ್ಯಯ ಉಂಟಾಗುವ ಲಕ್ಷಣ ಕಾಣುತ್ತಿದೆ.

Advertisement

ರಾಜ್ಯದಿಂದ ಇತರೆಡೆ ಸಾಗಣೆಯಾಗುತ್ತಿರುವ ವಾಹನಗಳನ್ನು ಕೆಲ ಗಡಿ ಭಾಗಗಳಲ್ಲಿ ತಡೆಯುವ ಕಾರ್ಯವನ್ನು ಅನ್ಯರಾಜ್ಯಗಳ ಮುಷ್ಕರನಿರತ ಸರಕು ಸಾಗಣೆದಾರರು ಆರಂಭಿಸಿದ್ದಾರೆ. ಜತೆಗೆ ಪೆಟ್ರೋಲಿಯಂ ಟ್ಯಾಂಕರ್‌, ಪ್ರವಾಸಿ ವಾಹನ, ಮ್ಯಾಕ್ಸಿಕ್ಯಾಬ್‌ ಮಾಲೀಕರು ತಮ್ಮ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಬೆಂಬಲಿಸುವಂತೆ ಮುಷ್ಕರನಿರತ ಸಂಘಟನೆಗಳು ಮನವಿ ಮಾಡಲಾರಂಭಿಸಿವೆ.

ರಾಜ್ಯದ ಗಡಿ ಭಾಗಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸರಕು ಸಾಗಣೆ ವಾಹನಗಳು ನಿಲುಗಡೆಯಾಗಿದ್ದು, ದಿನ ಕಳೆದಂತೆ ಹೋರಾಟ ತೀವ್ರಗೊಳ್ಳುತ್ತಿದೆ. ಪೆಟ್ರೋಲ್‌, ಡೀಸೆಲ್‌ ಸಾಗಣೆ ಟ್ಯಾಂಕರ್‌ಗಳು, ಪ್ರವಾಸಿ ವಾಹನ ಮಾಲೀಕರ ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದು, ಸಂಚಾರ ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ದುಬಾರಿ ಟೋಲ್‌ ಸಂಗ್ರಹದಿಂದ ಸಾಮಾನ್ಯರಿಗೂ ಹೊರೆಯಾಗುತ್ತಿದೆ. ಹಾಗಾಗಿ ಜನಪರವಾದ ಈ ಹೋರಾಟವನ್ನು ಸಾರ್ವಜನಿಕರು ಬೆಂಬಲಿಸಬೇಕು ಎಂದು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ನ ವ್ಯವಸ್ಥಾಪಕ ಸಮಿತಿ ಸದಸ್ಯ ರವೀಂದ್ರ ಹೇಳಿದ್ದಾರೆ.

ರಾಜ್ಯದ ಗಡಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಸಾಕಷ್ಟು ಲಾರಿಗಳು ನಿಲುಗಡೆಯಾಗಿವೆ. ಚಾಲಕರು, ಕ್ಲೀನರ್‌ಗಳು, ಸಹಾಯಕರಿಗೆ ಸ್ಥಳೀಯವಾಗಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಾದ್ಯಂತ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಶುಕ್ರವಾರದಿಂದ ಮುಷ್ಕರ ಆರಂಭವಾಗಿದ್ದು, ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಡಲಿದೆ. ಆಹಾರಧಾನ್ಯ, ಬೇಳೆಕಾಳು ಸೇರಿದಂತೆ ಇತರೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಈಗಾಗಲೇ ತುಸು ವ್ಯತ್ಯಯವಾಗಿದೆ. ಸೋಮವಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧಾನ್ಯ, ಬೇಳೆಕಾಳುಗಳು ಪೂರೈಕೆಯಾಗದಿದ್ದರೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಎಪಿಎಂಸಿ ವರ್ತಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next