Advertisement

ಮುಂದುವರಿದ ರಾಜೀನಾಮೆ ಪರ್ವ: ರಾಜೀನಾಮೆಗೆ ಸಕಾಲವಲ್ಲ ಎಂದ ಗುನ್ಹಾಳಕರ

11:30 AM Jul 28, 2022 | keerthan |

ವಿಜಯಪುರ: ಪ್ರವೀಣ ನೆಟ್ಟಾರು ಹತ್ಯೆ ಖಂಡಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹರಿಹಾಯುತ್ತಿರುವ ವಿಜಯಪುರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪ್ರಮುಖ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸರಣಿ ಮುಂದುವರೆದಿದೆ. ಮತ್ತೊಂದೆಡೆ ಇದು ರಾಜೀನಾಮೆ ಸಲ್ಲಿಸಲು ಸಕಾಲವಲ್ಲ ಎಂದು ಒಗ್ಗಟ್ಟಿನ ಮಂತ್ರ ಜಪಿಸುವ ಕೆಲಸವೂ ಆರಂಭಗೊಂಡಿದೆ.

Advertisement

ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಕೋಷ್ಟದ ಪ್ರಮುಖರಾಗಿದ್ದ ಕೃಷ್ಣ ಗುನ್ಹಾಳಕರ, ಪಕ್ಷದ ಜವಾಬ್ದಾರಿ ಬಿಟ್ಟು ಹೊರಬರುವ ಸಮಯ ಇದಲ್ಲ. ನಾವೆಲ್ಲ ಸಂಘಟಿತರಾಗಿ ಬಂದ ಕೆಟ್ಟ ಸಮಯ ಎದುರಿಸಿ, ತಕ್ಕ ಉತ್ತರ ನೀಡುವ ಸಮಯ. ತಾಳ್ಮೆ ಇರಲಿ. ನಮ್ಮ ಒಗ್ಗಟ್ಟು ಮುರಿದು ಹೋಗುವುದೇ ವಿರೋಧಿಗಳಿಗೆ ಮೃಷ್ಟಾನ್ನ ಭೋಜನ ಎಂದು ಸಾಂತ್ವನದ ಜೊತೆಗೆ, ಒಗ್ಗಟ್ಟಿನ ಮಂತ್ರ ಜಪಿಸಿ, ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇದರ ಮಧ್ಯೆ ಪ್ರವೀಣ ಹತ್ಯೆ ವಿರೋಧಿಸಿ ಜಿಲ್ಲೆಯ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ.

ವಿಜಯಪುರ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಡಾ.ಬಾಬು ರಾಜೇಂದ್ರ ನಾಯಿಕ, ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಮಾತ್ರವಲ್ಲದೇ ಒಂಬತ್ತು ಮಂಡಳಗಳ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜಿಲ್ಲಾ ಸಾಮಾಜಿಕ ಜಾಲ ತಾಣ- ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:ಇಲ್ಲಿ ಪಂಚಾಯತ್‌ಗೆ ಸಭಾಭವನ ಇಲ್ಲ ! ಮೂಲ ಸೌಕರ್ಯ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಪಡುಪೆರಾರ

ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ ಈ ಪಕ್ಷಕ್ಕೆ ತನ್ನದೇ ಆದ ಇತಿಹಾಸ, ವೈಚಾರಿಕ, ಸಿದ್ದಾಂತಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವುದು ಇತಿಹಾಸ. ಆದರೆ ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತದೆ. ಹಿಂದೆಲ್ಲ ನಡೆದ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಕಠಿಣ ಕ್ರಮ ಎನ್ನುವ ಭರವಸೆ ಮಾತಿಗೆ ಮಿತಿಗೊಂಡ ಭರವಸೆಯಾಗಿದೆ. ಕಾರಣ ವಿಜಯಪುರ ಜಿಲ್ಲಾ ಸಮಿತಿ ಹಾಗೂ ಒಂಬತ್ತು ಮಂಡಳಗಳ ಪೂರ್ವ ಸಮಿತಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ರಾಜಿನಾಮೆ ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಪ್ರವೀಣ ಹತ್ಯೆ ಪ್ರಕರಣದ ಆಕ್ರೋಶದ ಭಾವನಾತ್ಮಕವಾಗಿ ಪದಾಧಿಕಾರಿಗಳು ನೀಡಿದ್ದಾರೆ ಎಂಬ ಕಾರಣಕ್ಕೆ ಯಾವುದೇ ರಾಜೀನಾಮೆ ಪತ್ರಗಳನ್ನು ಜಿಲ್ಲಾಧ್ಯಕ್ಷ ಅಂಗೀಕಾರ ಮಾಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next