Advertisement
ಸುಬ್ರಹ್ಮಣ್ಯ, ಸುಳ್ಯ, ಕನ್ಯಾನ, ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಕನ್ಯಾನ, ಕಾಸರಗೋಡು, ಮೂಡುಬಿದಿರೆ, ಮಡಂತ್ಯಾರು, ವೇಣೂರು, ಸುರತ್ಕಲ್, ಉಳ್ಳಾಲ, ಕಡಬ, ಕಲ್ಲಡ್ಕ, ಮುಡಿಪು ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಅರಬಿ ಸಮುದ್ರದಲ್ಲಿ ಉಂಟಾಗಿದ್ದ ಕ್ಯಾರ್ ಚಂಡ ಮಾರುತ ಸದ್ಯ ಒಮಾನ್ ದೇಶದತ್ತ ಚಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಭಾಗಗಳಲ್ಲಿ ಮಳೆ ತೀವ್ರತೆ ತುಸು ಕಡಿಮೆಯಾಗಲಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಕ್ಕೆ ಹೋಲಿಸಿದರೆ ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಉಡುಪಿ, ಬ್ರಹ್ಮಾವರ, ಕಾರ್ಕಳ, ಕುಂದಾಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. 10 ಲ.ರೂ. ನಷ್ಟ
ಅ. 25ರಂದು ಸುರಿದ ಮಳೆಯಿಂದ ಕಡೆಕಾರು, ಕಿದಿಯೂರು, ಬೈಂದೂರಿನ ಶಿರೂರು, ಪಡುವರಿ, ಉಪ್ಪುಂದ, ಕನ್ಯಾನ ಹೊಸಾಡು, ಗುಜ್ಜಾಡಿ, ಹಕ್ಲಾಡಿ, ಗಂಗೊಳ್ಳಿ , ಉಳ್ಳೂರು, ಶಿವಪುರ, ಕೋಟತಟ್ಟು, ಹೆಗ್ಗಂಜೆ, ಆರೂರು, ಬಡಾ, ಪಡು, ಕುರ್ಕಾಲು ಎಂಬಲ್ಲಿ 27 ಮನೆಗಳಿಗೆ ಹಾನಿಯಾಗಿದ್ದು ಸುಮಾರು 10.71 ಲ.ರೂ. ನಷ್ಟ ಅಂದಾಜಿಸಲಾಗಿದೆ.
Related Articles
ಭಾರೀ ಮಳೆ ಗಾಳಿಗೆ ವಿಟ್ಲ ಸಮೀಪದ ಸೇರಾಜೆಯಲ್ಲಿ ಕ್ಲೋಡಿ ಲೋಬೋ ಅವರ ಮನೆ ಮೇಲೆ ಪಕ್ಕದ ತೋಟದ ಮರ ಬಿದ್ದಿದೆ. ಮನೆಮಂದಿ ಮಧ್ಯಾಹ್ನ ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ.
Advertisement