Advertisement

ನಿಷೇಧಾಜ್ಞೆ ನಡುವೆಯೂ ಮುಂದುವರಿದ ಅಕ್ರಮ ಗಣಿಗಾರಿಕೆ

03:28 PM Nov 06, 2019 | Suhan S |

ಶ್ರೀರಂಗಪಟ್ಟಣ: ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೂ ಅಕ್ರಮ ಗಣಿಗಾರಿಕೆ ಮುಂದುವರಿದಿದ್ದು, ಇದಕ್ಕೆ ಅಧಿಕಾರಿಗಳು ಗಣಿಗಾರಿಕೆ ಮಾಲೀಕರೊಂದಿಗೆ ಶಾಮೀಲಾಗಿರುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

Advertisement

ಎರಡು ತಿಂಗಳ ಹಿಂದೆ ತಾಲೂಕು ಆಡಳಿತದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಬೀಗಮುದ್ರೆ ಹಾಕಿದ್ದರೂ, ಕ್ರಷರ್‌ ಮಾಲೀಕರು ಇದನ್ನು ಲೆಕ್ಕಿಸದೆ ರಾತ್ರಿವೇಳೆ ಅಕ್ರಮವಾಗಿ ಜಲ್ಲಿಕ್ರಷರ್‌ಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು ತಾಲೂಕಾದ್ಯಂತ ಕೇಳಿ ಬರುತ್ತಿವೆ.  ಅರಣ್ಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ತಹಶೀಲ್ದಾರ್‌ ನೇತೃತ್ವದಲ್ಲಿ ಸಿಬ್ಬಂದಿ ಸೇರಿ ಅಕ್ರಮವಾಗಿ ನಡೆಯುತ್ತಿದ್ದ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಯಂತ್ರೋಪಕರಣಗಳು ವಶಪಡಿಸಿಕೊಂಡು, ಬೀಗಮುದ್ರೆ ಹಾಕಿದ್ದರೂ ಮತ್ತೇ ಚಾಲನೆಗೊಂಡಿರುವುದಕ್ಕೆ ಅಧಿಕಾರಿಗಳ ಮೇಲೆ ಸಂಶಯ ಮೂಡಿದೆ.

ತಾಲೂಕಿನ ಅರಕೆರೆ ವ್ಯಾಪ್ತಿಯ 602 ಎಕರೆ ಅರಣ್ಯ ಭೂಮಿಯಲ್ಲಿ ನಡೆಯುತ್ತಿದ್ದ ಬಹುತೇಕ ಅಕ್ರಮ ಸ್ಟೋನ್‌ ಕ್ರಷರ್‌ ಹಿಂದೆ ತಾಲೂಕು ಆಡಳಿತ, ಗಣಿ ಮತ್ತು ಭೂಜ್ಞಾನ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಮುಂಡುಗದೊರೆ ಕ್ರಷರ್‌ಗಳು ಹಾಗೂ ಹಂಗರಹಳ್ಳಿ ವ್ಯಾಪ್ತಿಯಸ್ಟೋನ್‌ ಕ್ರಷರ್‌ಗಳಿಗೆ ಬೀಗಮುದ್ರೆ ಒತ್ತಿದ್ದರು. ಈಗ ಅವೆಲ್ಲವೂ ತೆರೆದುಕೊಂಡು ಗಣಿ ಉದ್ಯಮದಲ್ಲಿ ಭಾಗಿಯಾಗಿವೆ. ಇಷ್ಟಾದರು ಇದನ್ನು ಲೆಕ್ಕಿಸದೆ ಹಂಗರಹಳ್ಳಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಕಾರ್ಯನಿರ್ವಸುತ್ತಿದೆ. ತಾಲೂಕಿನ ಟಿ.ಎಂ.ಹೊಸೂರು, ಹಂಗರಳ್ಳಿ, ಮುಂಡುಗದೊರೆ, ಕೋಡಿಶೆಟ್ಟಿಪುರ, ಗಣಂಗೂರು ಭಾಗದಿಂದ ಪ್ರತಿದಿನ ಸಾವಿರಾರು ಟಿಪ್ಪರ್‌ಗಳಲ್ಲಿ ಜೆಲ್ಲಿ, ಪೌಡರ್‌, ಜೆಲ್ಲಿ ಯಾವುದೇ ತಡೆಯಿಲ್ಲದೆ ಮೈಸೂರು ಸೇರುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next