Advertisement

ಕೋವಿಡ್ ಆರ್ಭಟ ಮುಂದುವರಿಕೆ

01:18 PM Jul 19, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಶನಿವಾರ 16 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 964ಕ್ಕೆ ತಲುಪಿದೆ.

Advertisement

ರಾಯಚೂರು ಮತ್ತು ಸಿಂಧನೂರಿನಲ್ಲಿ ವೈರಸ್‌ ಹರಡುವಿಕೆ ಮುಂದುವರಿದಿದ್ದು, 15 ಪ್ರಕರಣಗಳು ಅಲ್ಲಿಂದಲೇ ದೃಢಪಟ್ಟಿವೆ. ನಗರದಲ್ಲಿ 9 ಪಾಸಿಟಿವ್‌ ಪ್ರಕರಣದೃಢಪಟ್ಟರೆ, ಆರು ಪ್ರಕರಣ ಸಿಂಧನೂರಿನಲ್ಲಿ ದೃಢಪಟ್ಟಿವೆ. ಒಂದು ಸಿರವಾರ ಪಟ್ಟಣದಲ್ಲಿ ದೃಢಪಟ್ಟಿದೆ. ಅದರಲ್ಲೂ 15 ಪುರುಷರಿಗೆ ಸೋಂಕು ತಗುಲಿದರೆ, ಒಬ್ಬ ಮಹಿಳೆಗೆ ಸೋಂಕು ವಕ್ಕರಿಸಿದೆ. 9 ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದರೆ, ಆರು ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಹರಡಿವೆ.  ಇನ್ನೊಂದು ಐಎಲ್‌ಐ ಪ್ರಕರಣವಾಗಿದೆ.  ಎಲ್ಲರನ್ನು ಒಪೆಕ್‌ನ ಐಸೊಲೇಶನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾದರಿ ಸಂಗ್ರಹಿಸದ ಆರೋಪ: ಮಾಣಿಕ್‌ ನಗರದ ಮಾಜಿ ಸೈನಿಕರೊಬ್ಬರು ಮೃತಪಟ್ಟಿದ್ದು, ಅವರಿಗೆ ಕೋವಿಡ್ ಪಾಸಿಟಿವ್‌ ಇದೆ ಎಂಬ ಕಾರಣಕ್ಕಾಗಿ ಶವವನ್ನು ಮನೆಯವರಿಗೆ ಕೊಡದೆ ಶವಸಂಸ್ಕಾರ ಮಾಡಲಾಗಿತ್ತು. ಆದರೆ, ಇವರ ಮನೆಯವರು ಈ ವಿಷಯ ತಿಳಿಯುತ್ತಿದ್ದಂತೆ ಸ್ವ ಇಚ್ಛೆಯಿಂದ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಆದರೂ ಆರೊಗ್ಯ ಇಲಾಖೆ ಸಿಬ್ಬಂದಿ ಈ ಮನೆಯವರ ಮಾದರಿ ಸಂಗ್ರಹಿಸಿಲ್ಲ. ಮನೆಯವರೇ ತಪಾಸಣೆ ಮಾಡುವಂತೆ ಕೇಳುತ್ತಿದ್ದರೂ ಸ್ಪಂದಿಸಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next