Advertisement

ಗ್ರಾಪಂ ಹಾಲಿ ಸದಸ್ಯರನ್ನೇ ಮುಂದುವರಿಸಿ: ಡಿಕೆಶಿ

06:52 AM May 13, 2020 | Lakshmi GovindaRaj |

ಬೆಂಗಳೂರು: ಮೇ 24ಕ್ಕೆ ಅವಧಿ ಮುಗಿಯುವ ಗ್ರಾಪಂಗಳಿಗೆ ಆಡಳಿತ ಸಮಿತಿ ರಚಿಸುವ ಬದಲು ಹಾಲಿ ಸದಸ್ಯರನ್ನೇ ಮುಂದುವರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಪ್ರತಿಪಕ್ಷದ ನಾಯಕ  ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 24ರಂದು ಎಲ್ಲ ಪಂಚಾಯಿತಿಗಳ ಅವಧಿ ಮುಗಿಯುತ್ತಿದ್ದು, ಈ ಸಂದರ್ಭದಲ್ಲಿ ಕೊರೊನಾ ಸಮಸ್ಯೆ ಇರುವುದರಿಂದ ಚುನಾವಣೆ  ನಡೆಸಲು  ಸಾಧ್ಯವಾಗುತ್ತಿಲ್ಲ.

Advertisement

ಆದರೆ ಅಧಿಕಾರ ಅವಧಿ ಮುಗಿದಿದ್ದರೂ ವಿಶೇಷ ಸಂದರ್ಭಗಳಲ್ಲಿ 6 ತಿಂಗಳ ಕಾಲ ಈ ಅವಧಿ ಮುಂದುವರಿಸಲು ಅವ  ಕಾಶವಿದೆ. ಕೊರೊನಾ ಸಮಸ್ಯೆ ಹಿನ್ನೆಲೆ   ಯಲ್ಲಿ ಇದನ್ನೂ ವಿಶೇಷ ಸಂದರ್ಭ ಎಂದು ಪರಿಗಣಿಸಬೇಕು. ಇಂತಹ ಸಂದರ್ಭ ಗಳಲ್ಲಿ ಹಲವು ಚುನಾವಣೆಗಳ ನ್ನು ಮುಂದೂಡಿರುವುದನ್ನು ನಾವು ಗಮನಿಸಿದ್ದೇವೆ ಎಂದರು.

ಎಪಿಎಂಸಿ ಕಾಯ್ದೆ ಬದಲಾವಣೆಗೆ ವಿರೋಧ: ಕಾರ್ಮಿಕ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಯಾರಿಗೂ ಸಹಾಯವಾಗುವುದಿಲ್ಲ. ಹೂಡಿಕೆದಾರರಿಗೆ ಏನು  ಬೇಕಾದರೂ ಆಕರ್ಷಣೆ ಮಾಡಿ, ನಾವು ಬೇಡ ಅನ್ನುವುದಿಲ್ಲ. ಅದೇ ರೀತಿ ಎಪಿಎಂಸಿ ಕಾಯ್ದೆಯನ್ನು ಬದಲಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಸರ್ಕಾರ ಈ ಸುಗ್ರೀವಾಜ್ಞೆಗಳಿಂದ ರೈತರು, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ. ಇದು ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯಲ್ಲಿ ಭಾರತ ಕೈಗೊಂಡ ನಿರ್ಣಯಕ್ಕೆ ವಿರುದವಾಗಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಮಾದರಿಯಲ್ಲಿ  ಕಾರ್ಮಿಕರ ಕಾಯ್ದೆ ರದ್ದತಿಗೆ ಮುಂದಾಗಿರುವುದರ ವಿರುದ ಹೋರಾಟ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next