Advertisement

ಈಗಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿ

11:08 AM Jul 04, 2017 | Team Udayavani |

ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್‌ ಮುಖಾಂತರ ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಕಳೆದ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನೇ ಈ ವರ್ಷ ಸೇವೆಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ
ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ| ಟಿ.ದುರುಗಪ್ಪ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳದೇ ಇದ್ದಲ್ಲಿ ನಮ್ಮಲ್ಲಿ ಓದಿದ ವಿದ್ಯಾರ್ಥಿಗಳೇ ನಮಗಿಂತಲೂ ಹೆಚ್ಚಿನ ಅಂಕ ಪಡೆದು ನಮಗೇ ಪ್ರತಿಸ್ಪರ್ಧಿಗಳಾಗುವ ಸಂದರ್ಭ ಸೃಷ್ಟಿಯಾಗಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿರುವ ನಾವು ನಿರುದ್ಯೋಗಿಗಳಾಗಬೇಕಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ 411 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 10-16 ವರ್ಷಗಳಿಂದ 14,000ಕ್ಕೂ ಅಧಿ ಕ ಜನರು ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು
ಕಾಯಂಗೊಳಿಸಬೇಕು, ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಆದರೆ, ಈ ಕೆಲಸ ಆಗುತ್ತಿಲ್ಲ.

ರಾಜ್ಯ ಸರ್ಕಾರ 2017ರ ಏಪ್ರಿಲ್‌ ತಿಂಗಳಿಂದ ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡಿದ್ದು ಇದುವರೆಗೆ ವೇತನ
ಪಾವತಿಯಾಗಿಲ್ಲ. ಕೂಡಲೇ ಸರ್ಕಾರ ಬಾಕಿ ಇರುವ 3 ತಿಂಗಳ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ
ಕುರಿತಂತೆ ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು. 

ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಗ್ರಾಮ ಪಂಚಾಯ್ತಿ ನೌಕರರನ್ನು ಕಾಯಂಗೊಳಿಸಿದಂತೆ ಅತಿಥಿ
ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ  ಹಾಗೂ ಇತರೆ ರಾಜ್ಯಗಳಂತೆ ಪ್ರತಿ ತಿಂಗಳು30ರಿಂದ 40 ಸಾವಿರ ರೂ.ಗಳ ಸಂಬಳ  ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಬಸಪ್ಪ, ಡಾ.ಟಿ.ರುದ್ರಮುನಿ, ಎಚ್‌.ಹನುಮೇಶ್‌,
ಡಾ.ಡಿ.ಸಿದ್ದೇಶ್‌, ಇ.ಎರ್ರಿಸ್ವಾಮಿ ಇದ್ದರು. 

Advertisement

ವಿ.ಎಸ್‌.ಕೆ. ವಿವಿಯಿಂದ ಹೊಟ್ಟೆಗೆ ತಣ್ಣೀರು ಬಟ್ಟೆ
ರಾಜ್ಯದಲ್ಲಿನ ಬೇರೆ-ಬೇರೆ ಯಾವುದೇ ವಿಶ್ವವಿದ್ಯಾಲಯಗಳಲ್ಲಿಯೂ ಇಲ್ಲದ ನಿಯಮಾವಳಿಗಳನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು ಜಾರಿಗೆ ತರುತ್ತಿದ್ದಾರೆ. ವಿವಿ ವ್ಯಾಪ್ತಿಯ ಕಾಲೇಜುಗಳ ಮೇಲೆ ಕಡಿಮೆ ಕಾರ್ಯಭಾರವನ್ನು ನೀಡಿ ವಾರಕ್ಕೆ 5 ರಿಂದ 4 ಗಂಟೆಗೆ (ಬೋಧನಾ ಸಮಯವನ್ನು) ಇಳಿಕೆ ಮಾಡಿ, ಈ ಭಾಗದ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಎಸಗಿ, ಅವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡುತ್ತಿದ್ದಾರೆ. ಈ ಕ್ರಮವನ್ನು ವಿವಿ ಹಿಂಪಡೆಯಬೇಕು. 
ಡಾ| ಟಿ.ದುರುಗಪ್ಪ, ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next