Advertisement
ಪ್ರಸ್ತುತ, ಪಾವತಿ ಮಾಡಲು ಯುಪಿಐ ಬಳಸುವ ಪೇಟಿಎಂ ಬಳಕೆದಾರರು ಃಟಚyಠಿಞ ನಿಂದ ಕೊನೆಗೊಳ್ಳುವ ವರ್ಚುಯಲ್ ಪೇಮೆಂಟ್ ವಿಳಾಸ (ವಿಪಿಎ)ವನ್ನು ಹೊಂದಿರುತ್ತಾರೆ. ಮಾ.1ರ ನಂತರ ಬೇರೆ ಬ್ಯಾಂಕ್‌ನ ವಿಪಿಎ ಗೆ ಇದು ಬದಲಾಗಬಹುದು. ಪೇಟಿಎಂ ತನ್ನ ಗ್ರಾಹಕರಿಗೆ ಮುಂದಿನ ತಿಂಗಳಿನಿಂದ ಹೊಸ ವಿಪಿಎ ಗಳನ್ನು ನೀಡಲು ಮೂರು ಅಥವಾ ಹೆಚ್ಚಿನ ಬ್ಯಾಂಕುಗಳನ್ನು ಬಳಸುವ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಎಚ್‌ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ನೊಂದಿಗೆ ಒನ್ 97 ಕಮ್ಯೂನಿಕೇಷನ್ಸ್ ಮಾತುಕತೆಯಲ್ಲಿ ತೊಡಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹಣ ಪಾವತಿಗೆ ಸಂಬಂಧಿಸಿದಂತೆ ಆರ್‌ಬಿಐ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಫೆ.29ರಿಂದ ಯುಪಿಐ ವ್ಯವಹಾರಗಳನ್ನು ಕೂಡ ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆರ್‌ಬಿಐ ಸೂಚಿಸಿದೆ. ಆದರೆ ಸಾಕಷ್ಟು ಗ್ರಾಹಕರ ಠೇವಣಿಗಳನ್ನು ಹಿಂಪಡೆಯದಿದ್ದರೆ, ಈ ಗಡುವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.