Advertisement

ಗೋಹತ್ಯೆ ವಿರುದ್ಧ ಹೋರಾಟ ನಿರಂತರ: ಸುರೇಂದ್ರ ಮಾರ್ಕೋಡು

11:01 PM Jul 03, 2019 | sudhir |

ಕುಂದಾಪುರ/ ಕಾರ್ಕಳ: ಹೈನುಗಾರರ ಜೀವನಾಧಾರವಾದ ಗೋವನ್ನು ಹಟ್ಟಿಗೆ ನುಗ್ಗಿ ಕಳ್ಳತನ ಮಾಡಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವ ಸ್ಥಿತಿ ಬಂದಿದೆ. ಇದನ್ನು ಪ್ರಶ್ನಿಸುವ ಹಿಂದೂಗಳ ಮೇಲೆ ಕೇಸು ದಾಖಲಿಸಿ ನಮ್ಮ ಭಾವನೆಗಳ ಜತೆ ಸರಕಾರ ಆಟವಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಗೋಹತ್ಯೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ ನಿರಂತರವಾಗಿ ಇರುತ್ತದೆ ಎಂದು ಬಜರಂಗದಳ ತಾಲೂಕು ಸಂಚಾಲಕ ಸುರೇಂದ್ರ ಮಾರ್ಕೋಡು ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಶಾಸ್ತ್ರಿ ಸರ್ಕಲ್ನ ತಾಲೂಕು ಪಂಚಾಯತ್‌ ಹೊರಾವರಣದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕುಂದಾಪುರ ತಾಲೂಕು ವತಿಯಿಂದ ನಡೆದ ಗೋಹತ್ಯೆ ವಿರೋಧಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು.

ಗೋವು ನಮ್ಮ ಶ್ರದ್ಧಾಬಿಂದು

ಕೋಮು ಸಾಮರಸ್ಯ ಹಾಳು ಮಾಡುವ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಬೇಕು. ಗೋವು ನಮ್ಮ ಶ್ರದ್ಧಾಬಿಂದು. ನಮ್ಮ ಧಾರ್ಮಿಕ ಭಾವನೆಗಳ ಜತೆ ಆಟವಾಡಿ ಅನಂತರ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಹಿಂದೂ ಸಂಘಟನೆಗಳನ್ನು ಹೊಣೆ ಮಾಡಬೇಡಿ ಎಂದರು.

ತಾಲೂಕು ವಿಹಿಂಪ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ ಗೋಳಿಯಂಗಡಿ, ಆತ್ಮಸಾಕ್ಷಿಗೆ ಸರಿಯಾಗಿ ಪೊಲೀಸರು ಕೆಲಸ ಮಾಡಿದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಕರಾವಳಿ ಜನ ಸುಶಿಕ್ಷಿತರಾಗಿದ್ದು ಧಾರ್ಮಿಕ ಭಾವೆನಗಳ ಚೆಲ್ಲಾಟ ಸರಿಯಲ್ಲ. ಕಾನೂನು ಸುವ್ಯವಸ್ಥೆ ಕುರಿತು ಇಲ್ಲಿನ ಜನರಿಗೆ ಬೋಧನೆ ಅಗತ್ಯ ಇಲ್ಲ. ಆದರೆ ಧಾರ್ಮಿಕ ಭಾವನೆಗೆ ಘಾಸಿಯಾದಾಗ ಸಹಿಸಿಕೊಂಡು ಕೂರು ವವರೂ ಅಲ್ಲ ಎಂದರು.

Advertisement

ವಿಹಿಂಪ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೇರಿ, ನಮ್ಮಲ್ಲಿ ಗೌಪ್ಯ ಚಟು ವಟಿಕೆಗಳಿಲ್ಲ. ಸೈನಿಕರು, ಪೊಲೀಸರನ್ನು ಹತ್ಯೆ ಮಾಡುವುದಿಲ್ಲ. ನೆಲ ಜಲ ಉಳಿಸುವ ಹೋರಾಟ ನಮ್ಮದು ಎಂದರು.

ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ, ಎಲ್ಲರಿಗೆ ಗೋವಿನ ಮಹತ್ವ ತಿಳಿದಿದೆ. ಅಮೆರಿಕದವರು ಗೋವಿನ ವಿವಿಧ ವಸ್ತುಗಳ ಮೇಲೆ ಪೇಟೆಂಟ್ ಮಾಡಲು ಹೊರಟಿದ್ದಾರೆ. ಆದರೆ ನಾವಿನ್ನೂ ಅದರ ಹಿಂಸೆಯನ್ನು ಕಾಣುವ ದಿನಗಳಲ್ಲೇ ಇದ್ದೇವೆ ಎಂದರು.

ಸುರೇಂದ್ರ ನಿರ್ವಹಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ, ಪುರಸಭೆ ಸದಸ್ಯರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಪ್ರಭಾಕರ, ಸಂದೀಪ್‌ ಖಾರ್ವಿ, ಬಿಜೆಪಿ ಮುಖಂಡರಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಗುಣರತ್ನ, ಸುನಿಲ್ ಶೆಟ್ಟಿ ಹೇರಿಕುದ್ರು, ಮಹೇಶ್‌ ಕುಮಾರ್‌, ಸದಾನಂದ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕಾರ್ಕಳ: ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆ ಕೊನೆಗಾಣಿಸುವಂತೆ ವಿಶ್ವ ಹಿಂದೂ ಪರಿಷದ್‌, ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ವತಿಯಿಂದ ಜು. 3ರಂದು ಜಿಲ್ಲಾಧಿಕಾರಿ ಅವರಿಗೆ ತಹಶೀಲ್ದಾರ್‌ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ತಾಲೂಕು ಕಚೇರಿ ಮುಂಭಾಗ ಸುಮಾರು 1 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗೋ ರಕ್ಷಣೆ ಕುರಿತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು. ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌, ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್‌., ತಾಲೂಕು ಸಂಚಾಲಕ ಗುರುಪ್ರಸಾದ್‌ ನಾರಾವಿ, ರತ್ನಾಕರ ಅಮೀನ್‌, ನಾರಾಯಣ ಮಣಿಯಾನಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು.

ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಕಳ: ತಹಶೀಲ್ದಾರ್‌ಗೆ ಮನವಿ

ಕಾರ್ಕಳ: ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆ ಕೊನೆಗಾಣಿಸುವಂತೆ ವಿಶ್ವ ಹಿಂದೂ ಪರಿಷದ್‌, ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ವತಿಯಿಂದ ಜು. 3ರಂದು ಜಿಲ್ಲಾಧಿಕಾರಿ ಅವರಿಗೆ ತಹಶೀಲ್ದಾರ್‌ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ತಾಲೂಕು ಕಚೇರಿ ಮುಂಭಾಗ ಸುಮಾರು 1 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗೋ ರಕ್ಷಣೆ ಕುರಿತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು. ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌, ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್‌., ತಾಲೂಕು ಸಂಚಾಲಕ ಗುರುಪ್ರಸಾದ್‌ ನಾರಾವಿ, ರತ್ನಾಕರ ಅಮೀನ್‌, ನಾರಾಯಣ ಮಣಿಯಾನಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಪೊಲೀಸರಿಗೆ ಬೆಂಬಲ

ಕೋಡಿ, ಕಂಡ್ಲೂರಿನಲ್ಲಿ ಚೆಕ್‌ಪೋಸ್ಟ್‌ ಹಾಕಿ. ಈ ಹಿಂದೆ ಹೆಬ್ರಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಾಗ ಬೆಂಬಲಿಸಿದಂತೆ ಪೊಲೀಸರ ಬೆಂಬಲಕ್ಕೆ ಹಿಂದೂ ಸಂಘಟನೆಗಳು ಸದಾ ಸಿದ್ಧ.
– ಸುರೇಂದ್ರ ಮಾರ್ಕೋಡು
ರಾಜಕೀಯ ಒತ್ತಡಕ್ಕೆ ಒಳಗಾಗಬೇಡಿ

ಡಿಸಿ,ಎಸಿ ಮೇಲೆ ಹಲ್ಲೆ ನಡೆಯಿತು. ಪೊಲೀಸ್‌ ಠಾಣೆ ಮೇಲೆ ಕಲ್ಲೆಸದರು. ಅಕ್ರಮ ಜಾನುವಾರು ಸಾಗಾಟ ನಡೆಯು ತ್ತಿದೆ. ಇಂತಹ ಕೆಲಸಕ್ಕೆ ಬೆಂಬಲಿಸಬೇಡಿ. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆಯ ದಿನಗಳು ಬರುತ್ತವೆ.
– ವಿಜಯ ಕುಮಾರ್‌ ಶೆಟ್ಟಿ, ಗೋಳಿಯಂಗಡಿ
Advertisement

Udayavani is now on Telegram. Click here to join our channel and stay updated with the latest news.

Next